

ದೇವನಹಳ್ಳಿ: ಕಾಡಿನ ರಾಜ ಸಿಂಹ ಬೋನಿನ ಒಳಗಡೆ ಇದ್ದರೆ ಅದನ್ನು ನೋಡಲು ಜನರು ಹೆದರಿಕೊಳ್ಳುತ್ತಾರೆ. ಅದೇ ಸಿಂಹ ನಗರಕ್ಕೆ ದಾಂಗುಡಿ ಇಟ್ಟರೆ ನರ ನಾಡಿಯಲ್ಲಿ ನಡುಕ ಗ್ಯಾರಂಟಿ.
ಬೆಂಗಳೂರಿನಿಂದ 38 ಕಿ.ಮೀ ದೂರದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಸಿಂಹವೊಂದು ಪ್ರತ್ಯಕ್ಷವಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ಪ್ರಯಾಣಿಕರ ಕಾರಿಗೆ ಅಡ್ಡಲಾಗಿ ಸಿಂಹ ಕಾಣಿಸಿಕೊಂಡಿದೆ.
ಸಿಂಹವನ್ನು ನೋಡಿ ಭಯಭೀತರಾದ ಹಾಸನದ ಲತಾ ತಮ್ಮ ಮೊಬೈಲ್‌ನಲ್ಲಿ ಸಿಂಹ ರಸ್ತೆಯಲ್ಲಿ ಓಡಾಡುವ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಲತಾ ಅವರು ದೆಹಲಿಗೆ ಹೋಗಲು ದೇವನಹಳ್ಳಿ ಸಮೀಪದ ಮಾರ್ಗದಲ್ಲಿ ಬರುವಾಗ ಸಿಂಹ ಕಾಣಸಿಕೊಂಡಿದೆ.