ನಗರಕ್ಕೆ ಅಮಿತ್ ಶಾ ಭೇಟಿ ಜನವರಿ 3ಕ್ಕೆ

ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಜ. 3ರಂದು ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ...
ಅಮಿತ್ ಶಾ
ಅಮಿತ್ ಶಾ
Updated on: 

ಶಿವಮೊಗ್ಗ : ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಜ. 3ರಂದು ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಬಗ್ಗೆ ರಾಜ್ಯದ ಎಲ್ಲ ನಾಯಕರು ಒಟ್ಟಾಗಿ ಅವರೊಂದಿಗೆ ಚರ್ಚಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಿ. ಎಸ್.ಯಡಿಯೂರಪ್ಪ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ  ಗುರುವಾರ ಅವರು ವಾಜಪೇಯಿ ಜನ್ಮದಿನ ಪ್ರಯಕ್ತ ಯುವಮೋರ್ಚಾ ಆಯೋಜಿಸಿದ್ದ ರಕ್ತದಾನ ಕಾರ್ಯಕ್ರಮ ಉದ್ಘಾಟಿಸಿದ ಅವರು, ದೇಶದಲ್ಲಿ ಎಲ್ಲೇ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತಿದೆ. ಒಂದೊಂದೇ ರಾಜ್ಯಗಳಲ್ಲಿ  ಅಧಿಕಾರ ಹಿಡಿಯುತ್ತಿದೆ. ಅದೇ ರೀತಿ ಕರ್ನಾಟಕವನ್ನೂ ಸಹ ಕಾಂಗ್ರೆಸ್ ನಿಂದ ಮುಕ್ತಗೊಳಿಸಲು ಕಾರ್ಯಕರ್ತರು ಒಗ್ಗೂಡಬೇಕು. ಸಂಘಟನೆ ಬಲಪಡಿಸಬೇಕು ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮೇಲಿಂದ ಮೇಲೆ ಜನವಿರೋಧಿ ನಿಲುವು ತಳೆಯುತ್ತಿದೆ. ಎಷ್ಟು ದಿನ ಇರುತ್ತದೆಯೋ ಗೊತ್ತಿಲ್ಲ. ಹೀಗಾಗಿ ಬಿಜೆಪಿಯನ್ನು ಬೇಗನೆ ಅಸ್ತಿತ್ವಕ್ಕೆ ತರಲು ನಾವೆಲ್ಲಾ ದುಡಿಯಬೇಕು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com