ರಾಮನಗರದಲ್ಲಿ ಬಾಲಕನ ಮೇಲೆ ಬೀಡಾಡಿ ನಾಯಿಗಳ ದಾಳಿ

ಬೆಂಗಳೂರು: ಇತ್ತೀಚೆಗಷ್ಟೆ ಒಂದೂವರೆ ವರ್ಷದ ಕುಮಾರಸ್ವಾಮಿಯನ್ನು ನಾಯಿ ದಾಳಿ ಮಾಡಿ ವಾರಗಳು ಕಳೆಯುವ ಮುಂಚೆಯೇ, ರಾಮನಗರದ ಹನುಮಂತನಗರ ಬಡಾವಣೆಯಲ್ಲಿ ನಾಲ್ಕು ಬೀದಿ ನಾಯಿಗಳು ಶನಿವಾರ ಆರು ವರ್ಷದ ಹುಡುಗನ ಮೇಲೆ ದಾಳಿ ನಡೆಸಿವೆ.
ರಾಜ್ಯೋತ್ಸವದ ರಜಾದಿನದಲ್ಲಿ, ಮಾದೇಶ ತನ್ನ ಗೆಳೆಯರೊಂದಿಗೆ ಮನೆಯ ಹೊರಗಡೆ ಆಟವಾಡುತ್ತಿದ್ದೆ. ಇವರ ಈ ಖುಷಿಗಳಿಗೆಯನ್ನು ಹಾಳು ಮಾಡಿದ ನಾಲ್ಕು ಬೀದಿ ನಾಯಿಗಳು ಮಾದೇಶನ ಮೇಲೆ ದಾಳಿ ಮಾಡಿ ಅವನ ಗದ್ದ ಮತ್ತು ಕಣ್ಣುರೆಪ್ಪೆಗಳನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ. ಹತ್ತಿರದಲ್ಲಿದ್ದ ಜನ ನಾಯಿಗಳನ್ನು ಓಡಿಸದೇ ಹೋಗಿದ್ದರೆ, ಆ ಹುಡುಗನನ್ನು ನಾಯಿಗಳು ಕೊಂದುಹಾಕುತ್ತಿದ್ದವು ಎಂದು ಅಲ್ಲಿನ ನಿವಾಸಿಗಳು ತಿಳಿಸುತ್ತಾರೆ.
ಕಳೆದ ಎರಡು ತಿಂಗಳುಗಳಲ್ಲಿ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿರುವುದು ಇದು ನಾಲ್ಕನೇ ಬಾರಿ ಎನ್ನುತ್ತಾರೆ ಮಾದೇಶನ ತಾಯಿ ಭಾಗ್ಯಮ್ಮ. "ಇಂತಹ ಹಾವಳಿಯನ್ನು ತಪ್ಪಿಸಲು ಅಧಿಕಾರಿಗಳು ಏನೂ ಮಾಡಿಲ್ಲ. ನನ್ನ ಮಗ ತೀವ್ರವಾಗಿ ಹೆದರಿದ್ದಾನೆ ಮತ್ತು ಜ್ವರ ಕೂಡ ಬಂದಿದೆ. ಇಂತಹ ದಾಳಿ ಇನ್ನುಮುಂದೆ ನಡೆಯದಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು" ಎನ್ನುತ್ತಾರೆ.
ಪಶುಪೋಷಣಾ ಇಲಾಖೆಯ ಹೆಚ್ಚುವರಿ ಕಾರ್ಯನಿರ್ದೇಶಕ ಪರ್ವೇಜ್ ಅಹ್ಮದ್ ಪಿರಾನ್ ತಿಳಿಸುವಂತೆ ನಾಯಿಗಳನ್ನು ಪ್ರಚೋದಿಸಿದಾಗ, ಅಥವಾ ಕಸದ ಗುಂಡಿಗಳ ಹತ್ತಿರ ಇರುವಾಗ ಜನರು ತಮ್ಮೆಡೆಗೆ ಬಂದಾಗ ಅಥವಾ ತಮ್ಮ ಸಣ್ಣ ಮರಿಗಳು ಇದ್ದಾಗ ಜನರ ಮೇಲೆ ಕಚ್ಚಲು ಹೋಗುತ್ತವೆ ಎನ್ನುತ್ತಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಮಗುವಿಗೆ ಆಂಟಿ-ರೇಬೀಸ್ ಚುಚ್ಚುಮದ್ದು ನೀಡಲಾಗಿದೆ,ಹಾಗೂ ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದಿದ್ದಾರೆ.
"ಪ್ರತಿ ತಿಂಗಳೂ ಕನಿಷ್ಟ ಐದು ನಾಯಿ ಕಡಿತ ಸುದ್ದಿಗಳು ವರದಿಯಾಗುತ್ತಲೇ ಇವೆ. ಈಗಲಾದರೂ ನಗರಸಭೆ ಅಧಿಕಾರಿಗಳು ನಾಯಿಗಳ ಜನನ ನಿಯಂತ್ರಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು" ಎನ್ನುತ್ತಾರೆ ರಾಮನಗರದ ಜಿಲ್ಲಾ ಶಸ್ತ್ರವೈದ್ಯ ವಿಜಯ ನರಸಿಂಹ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


