ಕಿಚ್ಚು ಹಚ್ಚಿದ ನಿಗಮ ಮಂಡಲಿ ನೇಮಕಾತಿ

ಬೆಂಗಳೂರು: ನಿಗಮ ಮಂಡಳಿಗಳಿಗೆ ಮುಖ್ಯಸ್ಥರನ್ನು ನೇಮಿಸುವ ವಿಷಯದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಜಿ ಪರಮೇಶ್ವರ ಅವರ ನಡುವೆ ನಡೆಯುತ್ತಿದ್ದ ಶೀತಲ ಸಮರ, ಭುಗಿಲೇಳುವಂತೆ ಕಾಣಿಸುತ್ತಿದೆ.
ಮೂಲಗಳ ಪ್ರಕಾರ, ಹೆಚ್ಚಾಗುತ್ತಿರುವ ಸಚಿವ ಸ್ಥಾನದ ಬೇಡಿಕೆಗಳಿಗೆ ತಡೆ ನೀಡಲು ಕೆಲವು ಶಾಸಕರನ್ನು, ಲಾಭ ಗಳಿಸುತ್ತಿರುವ ಸರ್ಕಾರದ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನಾಗಿ ನೇಮಿಸುವ ಇರಾದೆಯನ್ನು ಮುಖ್ಯಮಂತ್ರಿ ತೋರಿದ್ದು, ಇದು ಪಕ್ಷದ ಹೈ ಕಮಾಂಡ್ ನೀಡಿರುವ ಮಾರ್ಗದರ್ಶಕ ಸೂಚನೆಗಳಿಗೆ ವಿರುದ್ಧ ಎಂದು ಹೇಳಿ ಸಿದ್ದರಾಮಯ್ಯನವರ ಪ್ರಸ್ತಾಪವನ್ನು ಪರಮೇಶ್ವರ್ ತಳ್ಳಿಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಯಾವುದೇ ಸರ್ಕಾರಿ ನಿಗಮ ಮಂಡಲಿ ಸಂಸ್ಥೆಗಳಿಗೆ ಸದರಿ ಶಾಸಕರನ್ನಾಗಲಿ, ಅಥವಾ ಸೋತ ಶಾಸಕರನ್ನಾಗಲಿ ನೇಮಿಸಿದಂತೆ ಹೈ ಕಮಾಂಡ್, ಮುಖಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಸೂಚಿಸಿದೆ. ಬದಲಾಗಿ ನೆಲಮಟ್ಟದ ಕಾರ್ಯಕರ್ತನ್ನು ನೇಮಿಸಲು ಪಕ್ಷಕ್ಕೆ ತಿಳಿಸಿದೆ.
ಹೀಗಿದ್ದೂ, ಸಿದ್ದರಾಮಯ್ಯನವರು ಶೇಕಡ ೩೦% ನೇಮಕಗಳನ್ನು ಶಾಸಕರಿಗೂ ಇನ್ನುಳಿದ ೭೦% ನೇಮಕಗಳನ್ನು ಪಕ್ಷದ ಕಾರ್ಯಕರ್ತರಿಗೂ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಈ ಗಲಾಟೆಯಿಂದಲೇ ಪಟ್ಟಿಗೆ ಅಂತಿಮ ರೂಪ ಕೊಡಲು ತಡೆಯಾಗುತ್ತಿದೆ ಎಂದು ಮೂಲಗಳು ತಿಳಿಸಿದ್ದು, ಸಿದ್ದರಾಮಯ್ಯ ಮತ್ತು ಪರಮೇಶ್ವರ್ ರಹಸ್ಯ ಸಭೆ ನಡೆಸಿ ೮೦ ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇವರಿಬ್ಬರೂ ಕಾಂಗ್ರೆಸ್ ಹೈ ಕಮಾಂಡ್ ನಿಂದ ಅಂತಿಮ ಒಪ್ಪಿಗೆ ಪಡೆಯಲು ಅಕ್ಟೋಬರ್ ೨೯ ರಂದು ಸೋನಿಯ ಗಾಂಧಿ ಅವರನ್ನು ಭೇಟಿ ಮಾಡಬೇಕಿತ್ತು. ಆದರೆ ಸೋನಿಯಾ ಅವರ ಕಾರ್ಯಪಟ್ಟಿ ಬದಲಾದ ಸನ್ನಿವೇಶದಲ್ಲಿ ಭೇಟಿ ರದ್ದಾಗಿತ್ತು.
"ಶಾಸಕರನ್ನು ನೇಮಿಸಬೇಡಿ" ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯ ಮತ್ತು ಎನ್ ಜಿ ಇ ಎಫ್ ನ ಮಾಜಿ ಮುಖ್ಯಸ್ಥ ವಿ ಶಂಕರ್, ಪಕ್ಷದ ಹೈ ಕಮಾಂಡ್ ಗೆ ಮನವಿ ಮಾಡಿದ್ದಾರೆ.
ಕೆ ಜಿ ಎಫ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದ ಶಂಕರ್ ಎ ಐ ಸಿ ಸಿ ಅಧ್ಯಕ್ಷೆ ಸೋನಿಯ ಗಾಂಧಿ ಅವರಿಗೆ ಬರೆದ ಪರದಲ್ಲಿ, ಪಕ್ಷದ ಪ್ರಾಮಾಣಿಕ ಕಾರ್ಯಕರ್ತರನ್ನು ನಿಗಮ ಮಂಡಲಿಗೆ ನೇಮಿಸುವಂತೆ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


