ಅತ್ಯಾಚಾರಿಗಳಿಗೆ ಧರ್ಮದೇಟು

ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪ...
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ
Updated on: 

9ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಬಾಲಕರು
 ಮೈಸೂರು:
ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಇಬ್ಬರು ಬಾಲಕರನ್ನು ಸಾರ್ವಜನಿಕರು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮೈಸೂರಿನಲ್ಲಿ ಗುರುವಾರ ನಡೆದಿದೆ.

ಬನ್ನಿಮಂಟಪದ ಬಳಿಯ ಹನುಮಂತ ನಗರದ ಹುಡ್ಕೋ ಕಾಲೋನಿಯ 9 ವರ್ಷಧ ಬಾಲಕಿಗೆ 17 ಮತ್ತು 14 ವರ್ಷದ ಬಾಲಕರು ಚಾಕು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದರು. ಆ ಬಾಲಕಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ಓದುತ್ತಿದ್ದಳು. ಬಾಲಕಿಯ ಸಾಕು ತಂದೆಯ ಸ್ನೇಹಿತರಾದ ನಸ್ರುಲ್ಲಾ, ಶಬ್ಬೀರ್ ಎಂಬುವರ ಮಕ್ಕಳೇ ಅತ್ಯಾಚಾರ ಎಸಗಿದ ಆರೋಪಿಗಳು.

ವ್ಯಾಪಾರಿ ನಸ್ರುಲ್ಲಾ ಮನೆಯಲ್ಲಿ ಪುತ್ರಿಯನ್ನು ಬಿಟ್ಟು ಕಾರ್ಯನಿಮಿತ್ತ ಸೋಮವಾರ ಬೆಂಗಳೂರಿಗೆ ತೆರಳಿದ್ದರು. ಅದೇ ದಿನ ರಾತ್ರಿ ಇಬ್ಬರೂ ಹುಡುಗರು ಕೃತ್ಯ ಎಸಗಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಿಂದ ವಾಪಸ್ ಬಂದ ಸಾಕು ತಂದೆ, ಹೊಟ್ಟೆ ನೋವಿನಿಂದ ನರಳುತ್ತಿದ್ದ ಪುತ್ರಿಯನ್ನು ಗುರುವಾರ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರು. ತಪಾಸಣೆ ನಡೆಸಿದ ವೈದ್ಯರು ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಬಾಲಕಿಯೂ ಕೃತ್ಯ ಎಸಗಿದವರ ಹೆಸರು ಬಹಿರಂಗಪಡಿಸಿದಳು.

ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದನ್ನು ಆರೋಪಿ ಬಾಲಕರು ಒಪ್ಪಿಕೊಂಡಿದ್ದಾರೆ. ನಸ್ರುಲ್ಲಾ ಪುತ್ರ ಕಾರ್ಮಿಕನಾಗಿದ್ದು, ಶಬ್ಬೀರ್ ಪುತ್ರ 8ನೇ ತರಗತಿ ವಿದ್ಯಾರ್ಥಿ. ಸಾರ್ವಜನಿಕರು ಹೊಡೆದಿರುವುದರಿಂದ ಇಬ್ಬರೂ ಗಾಯಗೊಂಡಿದ್ದಾರೆ.
ಎ.ಎನ್.ರಾಜಣ್ಣ, ಡಿಸಿಪಿ, ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com