ಮದ್ಯದ ಬಾಟಲಿಯಿಂದ ಇರಿದು ರೌಡಿಶೀಟರ್ ಕೊಲೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆನೇಕಲ್: ರೌಡಿಶೀಟರ್ ಒಬ್ಬನನ್ನು ಮದ್ಯದ ಬಾಟಲಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಆನೇಕಲ್ ತಾಲೂಕಿನ ಸುಣಾವರದಲ್ಲಿ 24 ವರ್ಷದ ರೌಡಿಶೀಟರ್ ಮದನ್‌ನನ್ನು ಗೆಳೆಯರೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮದನ್ ಕಳೆದ ರಾತ್ರಿ ತನ್ನ ಗೆಳೆಯರೊಂದಿಗೆ ಪಾನಗೋಷ್ಠಿಯಲ್ಲಿ ಭಾಗಿಯಾಗಿದ್ದು, ಈ ವೇಳೆ ಕೊಲೆ ನಡೆದಿದೆ ಎನ್ನಲಾಗಿದೆ.

ಮದನ್ ಮೇಲೆ ಕೊಲೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ, ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com