ರೈತನನ್ನು ಕೊಂದ ಕರಡಿ, ಕರಡಿಗೆ ಗುಂಡು

ಮಧುಗಿರಿ ತಾಲೂಕಿನಲ್ಲಿ ಸೋಮವಾರ ಕರಡಿಯೊಂದು ರೈತನ ಮೇಲೆ ದಾಳಿ ...
ಕರಡಿ - ಸಂಗ್ರಹ ಚಿತ್ರ
ಕರಡಿ - ಸಂಗ್ರಹ ಚಿತ್ರ
Updated on: 

ತುಮಕೂರು: ಮಧುಗಿರಿ ತಾಲೂಕಿನಲ್ಲಿ ಸೋಮವಾರ ಕರಡಿಯೊಂದು ರೈತನ ಮೇಲೆ ದಾಳಿ ಮಾಡಿದ ಘಟನೆಯಲ್ಲಿ ರೈತ ಮೃತಪಟ್ಟು ಮತ್ತೊಬ್ಬ ತೀವ್ರ ಗಾಯಗೊಂಡಿದ್ದಾನೆ.

ನಂತರ ಕರಡಿಗೆ ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. ಸೋಮಣ್ಣ ಸ್ಥಳದಲ್ಲೇ ಮೃತಪಟ್ಟಿದ್ದು, ತಿಮ್ಮಣ್ಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೀವಂತವಾಗಿರಲು ಹೋರಾಟ ನಡೆಸಿದ್ದಾರೆ.

ಮೇವು ತರಲು ಕಾಡಿಗೆ ಹೋಗಿದ್ದ ಸೋಮಣ್ಣನ ಮೇಲೆ ಸುಮಾರು ೧೧ ಘಂಟೆಗೆ ಈ ಗಂಡು ಕರಡಿ ದಾಳಿ ಮಾಡಿದೆ. ನಂತರ ಸುಮಾರು 1000 ಜನರು ಅಲ್ಲಿ ನೆರೆದು ಕರಡಿ ಪೊದೆಯಲ್ಲಿ ಅವಿತುಕೊಂಡಿತು ಎಂದು ಪ್ರತ್ಯಕ್ಷದರ್ಶಿದಳು ತಿಳಿಸಿದ್ದಾರೆ. ನಂತರ ಸುಮಾರು ೨ ಘಂಟೆಗೆ ಕರಡಿ ಮತ್ತೆ ಜನರ ಮೇಲೆ ದಾಳಿ ನಡೆಸಿ, ಜನರು ಚೆಲ್ಲಾ ಪಿಲ್ಲಿಯಾಗಿ ಓಡಿದಾಗ, ತಿಮ್ಮಣ್ಣ ಜಾರಿ ಬಿದ್ದುದರಿಂದ ಕರಡಿ ಅವನ ಮೇಲೆ ದಾಳಿ ಮಾಡಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಳಿಯಲ್ಲಿ ಆರು ಸುತ್ತು ಗುಂಡು ಹಾರಿಸಿದರು ಏನೂ ಪ್ರಯೋಜನವಾಗದೆ ಇದ್ದುದರಿಂದ ಕರಡಿಗೆ ಗುಂಡಿಟ್ಟು ಕೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com