ಜಿಲ್ಲಾ ಸುದ್ದಿ

ಹುಬ್ಬಳ್ಳಿ ಮೂಜಗು ಪೀಠತ್ಯಾಗ ಖಚಿತ?

ಹುಬ್ಬಳ್ಳಿ ಮೂಜಗು ಪೀಠತ್ಯಾಗ ಖಚಿತ?
Published On :

ಹುಬ್ಬಳ್ಳಿ: ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಪೀಠತ್ಯಾಗ ಬಹುತೇಕ ಖಚಿತವಾಗಿದೆ. ಸೋಮವಾರ ಸ್ವತಃ ಸ್ವಾಮೀಜಿ ಅಥವಾ ಮಠದ ಸಮಿತಿ ಈ ವಿಷಯವನ್ನು ಖಚಿತ ಪಡಿಸುವ ಸಾಧ್ಯತೆಯಿದೆ. ಏತನ್ಮಧ್ಯೆ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಭಾನುವಾರ ಪೂರ್ತಿ ಹುಬ್ಬಳ್ಳಿ ಮಠದಿಂದ ದೂರವಿದ್ದು, ಹಾನಗಲ್ಲ ಮಠದಲ್ಲಿ ಬೀಡುಬಿಟ್ಟಿದ್ದರು.

ಸ್ವಾಮೀಜಿ ಪೀಠತ್ಯಾಗ ಮಾಡುತ್ತಾರೆಂಬ ಸುದ್ದಿ ಬಹಳ ದಿನಗಳಿಂದ ಇತ್ತು. ಇದಕ್ಕೆ ಪೂರಕ ಎನ್ನುವಂತೆ ಅವರು ಸಭೆ ಸಮಾರಂಭಗಳಲ್ಲಿ ಮಾತನಾಡುತ್ತಾ, ಮಠಗಳಲ್ಲಿ ಉಸಿರುಗಟ್ಟುವ ವಾತಾವರಣವಿದೆ, ಸ್ವಾಮೀಜಿಗಳಿಗೆ ಮುಕ್ತತೆಯಿಲ್ಲ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ದಿಢೀರನೆ ಭಾನುವಾರದಂದು ಮೂರುಸಾವಿರ ಮಠದಿಂದ ಸ್ವಾಮೀಜಿ ದೂರವುಳಿದು ಹಾನಗಲ್ಲ ಮಠದಲ್ಲಿಯೇ ತಂಗಿದ್ದು, ಅವರ ಇಂಗಿತಕ್ಕೆ ಪುಷ್ಟಿ ನೀಡುವಂತಿತ್ತು. ಹಾನಗಲ್ಲ ಮಠಕ್ಕೂ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾನಗಲ್ಲ ಕುಮಾರ ಸ್ವಾಮೀಜಿ ಎನ್ನುವ ಹೆಸರಲ್ಲಿ ಪೀಠಾಧಿಪತಿಯಾಗಿದ್ದಾರೆ, ಹೀಗಾಗಿ ಅವರು ಹಾನಗಲ್ಲಕ್ಕೆ ಹೋಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.