ಮಹಿಳೆಯರ ಮಾರಾಟ ತನಿಖೆಗೆ ಸಚಿವರ ಆದೇಶ

ಕೊಪ್ಪಳ: ಯಲಬುರ್ಗಾ ತಾಲೂಕಿನ ಮಸಬಹಂಚಿನಾಳ ಗ್ರಾಮದ ಮಹಿಳೆ ರಾಜಸ್ಥಾನ ಯುವಕನಿಗೆ ಮಾರಾಟವಾಗಿದ್ದು ಪತ್ತೆಯಾಗಿರುವ ಬೆನ್ನಲ್ಲೆ ಇನ್ನು ಅನೇಕ ಇಂಥ ಪ್ರಕರಣಗಳು ಜಿಲ್ಲೆಯಾದ್ಯಂತ ನಡೆದಿರುವುದು ಬೆಳಕಿಗೆ ಬರಲಾರಂಭಿಸಿದೆ.
ಇದರಿಂದ ತಬ್ಬಿಬ್ಬಾಗಿರುವ ಜಿಲ್ಲಾ ಪೊಲೀಸ್ ಇಲಾಖೆ, ಜಾಲ ಭೇದಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದೀಗೆ ಬುಧವಾರ ಮಾತುಕತೆ ನಡೆಸಿದ ಅವರು, ಇದೊಂದು ಅಮಾನವೀಯ ಪ್ರಕರಣವಾಗಿದ್ದು, ಇಂಥ ಆಧುನಿಕತೆ ವ್ಯವಸ್ಥೆಯಲ್ಲಿಯೂ ಮಹಿಳೆಯರು ಮಾರಾಟವಾಗುತ್ತಿರುವುದು ಅಸಹನೀಯ. ಆದ್ದರಿಂದ ವಾರದೊಳಗೆ ಜಾಲ ಭೇದಿಸಬೇಕು ಎಂದು ಆದೇಶಿಸಿದ್ದಾರೆ.
ಮಸಬಹಂಚಿನಾಳ ಗ್ರಾಮದ ಯುವತಿ ತಾನು ದುಡಿಯಲು ಎಂದು ಹೋಗಿದ್ದೆ, ಆದರೆ, ನನಗೆ ಗೊತ್ತಿಲ್ಲದಂತೆಯೇ ಮಾರಾಟ ಮಾಡಿರುವ ಅಂಶ ಬೆಳಕಿಗೆ ಬಂದ ಮೇಲೆ ನಾನು ಗಾಬರಿಯಾಗಿ, ಪೊಲೀಸರ ನೆರವಿನಿಂದ ಪಾರಾಗಿ ಬಂದಿದ್ದೇನೆ, ಆದರೆ, ಇದರಂತೆ ಇನ್ನು ಅನೇಕ ಜಿಲ್ಲೆಯವರು ಅಲ್ಲಿ ಮಾರಾಟವಾಗಿ ಯಾತನೆ ಅನುಭವಿಸುತ್ತಿದ್ದಾರೆ.
ರಾಜಸ್ಥಾನದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರುವುದರಿಂದ ರಾಜ್ಯದ ಬಹುತೇಕರನ್ನು ಅಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ದೊಡ್ಡ ಜಾಲವೇ ಇದ್ದು, ಇದನ್ನು ಭೇದಿಸಿದರೆ ಮಾತ್ರ ಎಲ್ಲವೂ ಬಯಲಾಗುತ್ತದೆ, ಕೊಪ್ಪಳ ಜಿಲ್ಲೆಯಿಂದಲೇ ಅನೇಕ ಹೆಣ್ಣು ಮಕ್ಕಳು ಮಾರಾಟವಾಗಿದ್ದಾರೆ ಎಂದು ಹೇಳಿದ್ದಾಳೆ.
2008ರಲ್ಲಿಯೇ 'ಕನ್ನಡಪ್ರಭ' ವರದಿ 2008ರಲ್ಲಿಯೇ ಯುವತಿಯರು ಮಾರಾಟವಾಗುತ್ತಿರುವ ಕುರಿತು 'ಕನ್ನಡಪ್ರಭ' -'ಮದುವೆ ನೆಪದಲ್ಲಿ ಮಹಿಳೆಯರ ಮಾರಾಟ ಎನ್ನುವ' ತಲೆಬರಹದಡಿ ವಿಶೇಷ ವರದಿ ಪ್ರಕಟ ಮಾಡಿತ್ತು, ಈ ಕುರಿತು ಸರ್ಕಾರ ವರದಿಯನ್ನು ಗಂಭೀರವಾಗಿ ಪರಿಗಣಿಸಿತ್ತಾದರೂ ಅನಂತರ ನಡೆದ ತನಿಖೆ ಚುರುಕುಗೊಳ್ಳಲೇ ಇಲ್ಲ, ಗುಪ್ತಚರ ಇಲಾಖೆಯೂ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


