ಜಿಲ್ಲಾ ಸುದ್ದಿ

ಕಿರುಕುಳ ನೀಡಿಲ್ಲ

ಕಿರುಕುಳ ನೀಡಿಲ್ಲ
Published On :

ಮೈಸೂರು: ನಾನು ಯಾವುದೇ ಸಿಬ್ಬಂದಿಗೆ ಕಿರುಕುಳ ನೀಡಿಲ್ಲ ಎಂದು ಆಡಳಿತ ತರಬೇತಿ ಸಂಸ್ಥೆಯ (ಎಟಿಐ) ಮಹಾನಿರ್ದೇಶಕಿ ಹಾಗೂ ಮೈಸೂರು ಪ್ರಾದೇಶಿಕ ಆಯುಕ್ತೆ ವಿ.ರಶ್ಮಿ ಮಹೇಶ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ಎಟಿಐನಲ್ಲಿ ಸುಮಾರು ರು.100 ಕೋಟಿ ಅವ್ಯವಹಾರ ನಡೆದಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇನೆ. ಇದರಲ್ಲಿ ಎಟಿಐ ಹಿಂದಿನ ಮಹಾನಿರ್ದೇಶಕಿ ಡಾ. ಅಮಿತಾಪ್ರಸಾದ್ ಸೇರಿದಂತೆ 5 ಅಧಿಕಾರಿಗಳ ಹೆಸರು ಮಾತ್ರ ಇದೆ. ಬೇರೆ ಯಾರ ಹೆಸರೂ ಇಲ್ಲ ಎಂದರು.
ಎಟಿಐ ಪತ್ರಾಂಕಿತ ವ್ಯವಸ್ಥಾಪಕ ಎಚ್. ವೆಂಕಟೇಶ್ ಅಸಹಜವಾಗಿ  ಸಂಪ್‌ಗೆ ಬಿದ್ದು ಮೃತಪಟ್ಟಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಟಿಐ ಮೆಸ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವೆಂಕಟೇಶ್ ಅವರೇ ಹಲವು ಮಾಹಿತಿ ಒದಗಿಸಿದ್ದಾರೆ. ವೆಂಕಟೇಶ್‌ಗೆ ಕಿರುಕುಳ ನೀಡಿಲ್ಲ, ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಅವರ ಹೆಸರು ಸಹ ಇಲ್ಲ. ನೋಟಿಸ್ ಕೂಡಾ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದರು.

ರಶ್ಮಿ ಮಾತು

  • ನನ್ನ ಮೇಲೆ ಹಲ್ಲೆ ನಡೆಸಿರುವವರಿಗೂ ಮೃತ ವೆಂಕಟೇಶ್ ಕುಟುಂಬಕ್ಕೂ ಸಂಬಂಧವಿಲ್ಲ
  • ಉದ್ದೇಶಪೂರ್ವಕವಾಗಿ ನನ್ನ ಮೇಲೆ ದಾಳಿ ನಡೆದಿದೆ.
  • ಈ ವೇಳೆ ಸಾರ್ವಜನಿಕ ಸೇವೆಯಲ್ಲಿದ್ದ ಅಧಿಕಾರಿಗೆ ರಕ್ಷಣೆ ನೀಡುವಲ್ಲಿ ಪೊಲೀಸರೂ ವಿಫಲ
  • ಹಲ್ಲೆ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದು, ಕ್ರಮ ಕೈಗೊಳ್ಳುವ ಭರವಸೆ
  • ಯಾವುದೇ ಅಧಿಕಾರಿಗೆ ಒಂದೇ ಕಡೆ ಮೂರು ವರ್ಷ ಸೇವೆ ಸಲ್ಲಿಕೆಗೆ ಅವಕಾಶವಿದೆ. ಆದರೆ, ಡಾ. ಅಮಿತಾ ಪ್ರಸಾದ್  ಎಟಿಎದಲ್ಲಿ 6 ವರ್ಷ ಸೇವೆ ಸಲ್ಲಿಸಿದ್ದಾರೆ.
  • ಹಲವು ಬಾರಿ ವರ್ಗಾವಣೆ ಆಗಿದ್ದರೂ, ರದ್ದುಗೊಳಿಸುವ ಮೂಲಕ ವಾಪಸ್ ಬಂದಿದ್ದಾರೆ.
  • ಅಮಿತಾ ಎಟಿಐನಿಂದ ವರ್ಗಾವಣೆಯಾಗಿ 3 ತಿಂಗಳು ಕಳೆದರೂ ಡಿಜಿ ಕ್ವಾಟರ್ಸ್ ಖಾಲಿ ಮಾಡಿಲ್ಲ
-ವಿ.ರಶ್ಮಿ ಮಹೇಶ್
ಮಹಾ ನಿರ್ದೇಶಕಿ, ಎಟಿಐ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.