ಜಿಲ್ಲಾ ಸುದ್ದಿ

ದಾಂಪತ್ಯದ ಪಾಕ್‌ಲಾಟ

ದಾಂಪತ್ಯದ ಪಾಕ್‌ಲಾಟ
Published On :

ಕಾರವಾರ: ಒಂದೆಡೆ ಮಧುರ ದಾಂಪತ್ಯ. ಇನ್ನೊಂದೆಡೆ ಭಯೋತ್ಪಾದನೆಯ ಕರಿನೆರಳು. ಹೀಗಾಗಿ ಪಾಕ್ ಯುವತಿಯರನ್ನು ವರಿಸುವ ಭಟ್ಕಳ ತರುಣರಿಗೆ ತಾಕಲಾಟ. ಅವರ ಜತೆಗೆ ಪೊಲೀಸರಿಗೂ ಪೀಕಲಾಟ. ಇದೇ ವಿಚಾರಕ್ಕೆ ಸಂಬಂಧಿಸಿ ಪೇದೆಯೊಬ್ಬರ ತಲೆದಂಡವೂ ಆಗಿದೆ!

ದೇಶದಲ್ಲಿ ಏನೇ ಇರಲಿ, ಭಟ್ಕಳದಲ್ಲಿ ಮಾತ್ರ ಪಾಕ್ ಹಾಗೂ ಭಾರತದ ನಂಟು ಬಲವಾಗುತ್ತಿದೆ. ಪಟ್ಟಣದಲ್ಲಿ ಪಾಕಿಸ್ತಾನದ ಮಹಿಳೆಯರಿದ್ದಾರೆ. ಇಲ್ಲಿನ ಪುರುಷರು ಪಾಕ್ ಯುವತಿಯರನ್ನು ವರಿಸಿದ್ದಾರೆ, ವರಿಸುತ್ತಿದ್ದಾರೆ.

ಭಟ್ಕಳದ ಹಲವರು ಕೊಲ್ಲಿ ರಾಷ್ಟ್ರಗಳಿಗೆ ಬರುವ ಪಾಕ್ ಯುವತಿಯರು ಹಾಗೂ ಭಟ್ಕಳದ ಯುವಕರ ನಡುವೆ ಉಂಟಾದ ಪ್ರೀತಿ, ಪ್ರೇಮವು ವಿವಾಹದ ತನಕ ಮುಂದುವರಿದು ತರುವಾಯ ಅವರು ಭಟ್ಕಳಕ್ಕೆ ಆಗಮಿಸುತ್ತಿದ್ದಾರೆ.

ಈ ವೈವಾಹಿಕ ನಂಟಿಗೂ, ಭಯೋತ್ಪಾದನೆಗೂ ಸಂಬಂಧ ಇದ್ದಂತೆ ಕಾಣಿಸದು. ಆದರೆ, ಭಟ್ಕಳದ ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ ಮತ್ತಿತರರ ಹೆಸರು ಉಗ್ರ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಕೇಳಿಬಂದಿದ್ದರಿಂದ ಭಟ್ಕಳಕ್ಕೆ ಭಯೋತ್ಪಾದನೆಯೂ ತಳಕು ಹಾಕಿಕೊಂಡಿದೆ. ಉಗ್ರ ಸಂಘಟನೆಗಳು ಈ ವೈವಾಹಿಕ ಸಂಬಂಧದ ಮೇಲೆ ಕಣ್ಣಿಡುವ ಸಾಧ್ಯತೆಯೂ ಇರುವುದಹರಿಂದ ಈ ಬಗ್ಗೆಯೂ ನಮ್ಮ ಭದ್ರತಾ ದಳಗಳು ನಿಗಾ ಇಡುವ ಅನಿವಾರ್ಯತೆ ಎದುರಾಗಿದೆ.

ಪೊಲೀಸ್ ಪೇದೆ ಅಮಾನತು


ಭಟ್ಕಳದಲ್ಲಿ ನಿಜವಾಗಿ ಇರುವ ಪಾಕ್ ಪ್ರಜೆಗಳ ಸಂಖ್ಯೆ ಎಷ್ಟು? ಎಷ್ಟು ವರ್ಷದಿಂದ ಇದ್ದಾರೆ? ಅವರ ಚಟುವಟಿಕೆಯೇನು? ಈ ಎಲ್ಲವುಗಳ ಬಗ್ಗೆ ನಿಗಾ ಇಡಬೇಕಾದ ಅನಿವಾರ್ಯತೆ ಇದೆ.

ಭಠ್ಕಳದಲ್ಲಿನ ಪಾಕ್ ಪ್ರಜೆಗಳ ಲೆಕ್ಕ ಹಾಕುವಲ್ಲಿ ಎಡವಿದೆ ಬಗ್ಗೆ ಇತ್ತೀಚಿಗೆ ಜಿಲ್ಲಾ ಪೊಲೀಸ್ ವರಿಷ್ಠಿ ಆರ್. ದಿಲೀಪ್ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿದ್ದಾರೆ.

ಇನ್ನು ಭಟ್ಕಳಕ್ಕೆ ಪ್ರವಾಸಿ ವೀಸಾದಲ್ಲಿ ಬರುವ ಪಾಕ್ ಪ್ರಜೆಗಳ ಚಲನವಲನದ ಬಗ್ಗೆಯೂ ಗಮನ ನೀಡಬೇಕಾದದ್ದು ತುರ್ತಾಗಿದೆ. ಕೆಲವು ಮೂಲಗಳ ಪ್ರಕಾರ, ಭಟ್ಕಳದಲ್ಲಿ ಗ 11 ಮಂದಿ ಪಾಕಿಸ್ತಾನ  ಮಹಿಳೆಯರಿದ್ದಾರೆ. ಆದರೆ ಈ ಬಗ್ಗೆ ಪೊಲೀಸ್ ಇಲಾಖೆ ಬಳಿ ನಿಖರ ಮಾಹಿತಿ ಇಲ್ಲ. ಹಾಗೆ ನೋಡಿದರೆ ಭಟ್ಕಳದಲ್ಲಿ ಇರುವವರೆಲ್ಲ ಶಾಂತಿಪ್ರಿಯರೇ. ದೇಶಪ್ರೇಮಿಗಳೂ ಹೌದು. ಆದರೆ ಬೆರಳೆಣಿಕೆಷ್ಟು ಜನರಿಂದ ಭಟ್ಕಳವನ್ನೇ ಸಂಶಯದಿಂದ ನೋಡಲಾಗುತ್ತಿದೆ. ಇದು ಭಟ್ಕಳದ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಆ ಬೆರಳೆಣಿಕೆಯಷ್ಟು ಜನರ ಬಗ್ಗೆ ಗಮನ ಇಡುವ ಅನಿವಾರ್ಯತೆ ಪೊಲೀಸ್ ಇಲಾಖೆಗೆ ಇದೆ.

ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.