ಜಿಲ್ಲಾ ಸುದ್ದಿ

ಚಿತ್ರಕಲಾ ಪರಿಷತ್ತಿನಲ್ಲಿ ಬುಡಕಟ್ಟು ಜನಾಂಗ ಹಾಲಕ್ಕಿ ಒಕ್ಕಲಿಗರ ಚಿತ್ರ ಪ್ರದರ್ಶನ

ಚಿತ್ರಕಲಾ ಪರಿಷತ್ತಿನಲ್ಲಿ ಬುಡಕಟ್ಟು ಜನಾಂಗ ಹಾಲಕ್ಕಿ ಒಕ್ಕಲಿಗರ ಚಿತ್ರ ಪ್ರದರ್ಶನ
Published On :

ಬೆಂಗಳೂರು: ಅಳಿವಿನಂಚಿನಲ್ಲಿರುವ ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಸಮುದಾಯದ ಫೋಟೋ ಪ್ರದರ್ಶನ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಅಕ್ಟೋಬರ್ ೨೭ ರಿಂದ ೩೦ ರವರೆಗೆ ನಡೆಯಲಿದೆ.

ಖ್ಯಾತ ಫೋಟೋಗ್ರಾಫರ್ ವೆಂಕಟೇಶ್ ಅವರು ಈ ಬುಡಕಟ್ಟು ಜನಾಂಗದ ಆಚರಣೆ, ಅವರ ವಸ್ತ್ರ ವಿನ್ಯಾಸ, ಅವರ ಜೀವನ ಕ್ರಮ ಇವುಗಳ ಹಿಂದೆ ಬಿದ್ದು ಬಹು ವರ್ಷಗಳಿಂದ ಕಾಡುಗಳಲ್ಲಿ ತಾವು ತೆಗೆದ ಫೋಟೊಗಳನ್ನು ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶಿಸಲಿದ್ದಾರೆ.

ಯಾರಿವರು?
ಹಾಲಕಿ ಒಕ್ಕಲಿಗರು, ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಮುಂತಾದ ಜಿಲ್ಲೆಗಳ ಕಾಡುಗಳ ಅಂಚಿನಲ್ಲಿ ಗುಂಪು ಗುಂಪಾಗಿ ವಾಸಿಸುವ ಬುಡಕಟ್ಟು ಜನಾಂಗ. ಈ  ಬುಡಕಟ್ಟುನ್ನು ಒಂದು ವಾದದ ಪ್ರಕಾರ ಕರ್ನಾಟಕದ ಮೂಲ ನಿವಾಸಿಗಳೆಂದು ತಿಳಿಯಲಾಗಿದೆ.

ತಾವು ತೊಡುವ ಬಣ್ಣ ಬಣ್ಣದ ವಿಷೇಶ ವಸ್ತ್ರಾಭರಣಗಳಿಗೆ ಈ ಬುಡಕಟ್ಟು ಜನಾಂಗ ಹೆಸರುವಾಸಿ. ಎಷ್ಟೋ ಆಧುನಿಕ ವಸ್ತ್ರ-ಆಭರಣ ವಿನ್ಯಾಸಕರು ಈ ಜನಾಂಗದ ವಸ್ತ್ರಾಭರಣಗಳ ವಿನ್ಯಾಸವನ್ನು ಅನುಕರಿಸಿದ್ದಾರೆ ಎನ್ನಲಾಗುತ್ತದೆ. ಈ ರೀತಿಯ ವಿಶಿಷ್ಟ ಜೇವನ ಕ್ರಮ ಹೊಂದಿದ್ದ ಹಾಲಕ್ಕಿ ಒಕ್ಕಲಿಗರು ಇಂದಿನ ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಇವರ ಭಾಷೆ, ಆಹಾರ ಕ್ರಮ, ಹಾಡು, ನೃತ್ಯ ಎಲ್ಲವೂ ಬದಲಾಗುತ್ತಾ ಕಣ್ಮರೆಯಾಗುವ ದಿನಗಳು ದೂರವಿಲ್ಲ ಎನ್ನುತ್ತಾರೆ ವೆಂಕಟೇಶ್.

ಇಂತಹ ವಿಶಿಷ್ಟ ಬುಡಕಟ್ಟು ಸಮುದಾಯದ ಜೀವನ ಕ್ರಮವನ್ನು ಸೆರೆ ಹಿಡಿದಿರುವ ವೆಂಕಟೇಶ್, ಇಂದಿನ ಆಧುನಿಕ ಪೀಳಿಗೆಗೆ ತಮ್ಮ ಪೂರ್ವಜರ ಎಷ್ಟೋ ವಿಷಯಗಳು ತಿಳಿಯಲಿ ಎಂದು ಈ ಪ್ರದರ್ಶನ ಏರ್ಪಡಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಇಲ್ಲಿ ಸಂಪರ್ಕಿಸಬಹುದು..
www.beyondfocus.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.