ಜಿಲ್ಲಾ ಸುದ್ದಿ

ಬಿಬಿಎಂಪಿಗೆ 5000 ಕಡತ ವಿಲೇವಾರಿಯ ಗುರಿ

ಬಿಬಿಎಂಪಿಗೆ 5000 ಕಡತ ವಿಲೇವಾರಿಯ ಗುರಿ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಬಿಬಿಎಂಪಿ ಹಮ್ಮಿಕೊಂಡ ಬಾಕಿ ಕಡತಗಳ ವಿಲೇವಾರಿ ಸಪ್ತಾಹದಲ್ಲಿ 5 ಸಾವಿರಕ್ಕೂ ಅಧಿಕ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ಸಿಬ್ಬಂದಿ ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಕೃಷ್ಣ  ವಲಯಗಳ ಜಂಟಿ ಆಯುಕ್ತರಿಗೆ ಸೂಚಿಸಿದ್ದಾರೆ.

ಜಂಟಿ ಆಯುಕ್ತರೊಂದಿಗೆ ಸೋಮವಾರ ಪರಿಶೀಲನಾ ಸಭೆ  ನಡೆಸಿದ ಎಂ. ಕೃಷ್ಣ ಅವರು, ಅ.20 ರಿಂದ  31ರವರೆಗೆ ಕಡತ ವಿಲೇವಾರಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಈ ವೇಳೆ 5 ಸಾವಿರಕ್ಕೂ ಹೆಚ್ಚಿನ ಕಡತಗಳು ವಿಲೇವಾರಿಯಾಗಬೇಕು. ಆಡಳಿತದಲ್ಲಿ ಬಿಗಿ ತರಲು ಚಲನವಲನ ಪುಸ್ತಕಗಳನ್ನು ನಿರ್ವಹಣೆ ಮಾಡಬೇಕು. ಹಾಜರಾತಿ ಕಡ್ಡಾಯಗೊಳಿಸಲು ನವೆಂಬರ್ ತಿಂಗಳೊಳಗಾಗಿ ಎಲ್ಲ ಕಚೇರಿಗಳಲ್ಲಿ ಬಯೋವುಟ್ರಿಕ್ ಯಂತ್ರಗಳನ್ನು ಅಳವಡಿಸಬೇಕು. ಪಾಲಿಕೆಯಲ್ಲಿ ಸುಮಾರು 600 ಬ್ಯಾಂಕ್ ಖಾತೆಗಳಿದ್ದು, ಎಲ್ಲ ಖಾತೆಗಳಲ್ಲಿ ವಹಿವಾಟು ನಡೆಸುವುದು ನಿಲ್ಲಿಸಬೇಕು. ಇದರ ಬದಲು ಕೋರ್ ಬ್ಯಾಂಕ್‌ಗಳಲ್ಲಿ ಮುಖ್ಯ ಖಾತೆಗಳನ್ನು ಇಟ್ಟುಕೊಂಡು  ನಿರ್ವಹಣೆ ಮಾಡಬೇಕು ಎಂದು ಸೂಚಿಸಲಾಯಿತು.

ಸಮಿತಿ ಸದಸ್ಯ ಗುಣಶೇಖರ ಮಾತನಾಡಿ, ಪಾಲಿಕೆಯಲ್ಲಿ ಇ-ಆಡಳಿತಕ್ಕೆ ಹೆಚ್ಚು ಗಮನ ನೀಡಬೇಕು. ಖಾತೆ ನೋಂದಣಿ, ನಕ್ಷೆ ಮಂಜೂರು, ಜನನ ಹಾಗೂ ಮರಣ ಪ್ರಮಾಣ ಪತ್ರ ಹಾಗೂ ಸುತ್ತೋಲೆಗಳ ಬಗ್ಗೆ ಅಂತರ್ಜಾಲ ತಾಣದಲ್ಲಿ ಕಾಲಕಾಲಕ್ಕೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.