ಜಿಲ್ಲಾ ಸುದ್ದಿ

ನನ್ನ ರಾಜಕೀಯ ಯಶಸ್ಸಿಗೆ ಬಂಗಾರಪ್ಪ ಕಾರಣ: ಡಿಕೆಶಿ

ನನ್ನ ರಾಜಕೀಯ ಯಶಸ್ಸಿಗೆ ಬಂಗಾರಪ್ಪ ಕಾರಣ: ಡಿಕೆಶಿ
Published On :

ಬೆಂಗಳೂರು: ನಾನು ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರೇ ಕಾರಣ ಎಂದು ಇಂಧನ ಸಚಿವ ಡಿ ಕೆ ಶಿವಕುಮಾರ್, ಬಂಗಾರಪ್ಪನವರ ೮೨ ನೆ ಜನ್ಮ ದಿನಾಚರಣೆ ಸಂಭ್ರಮದಲ್ಲಿ ಹೇಳಿದ್ದಾರೆ. ಬಂಗಾರಪ್ಪನವರ ಆಶೀರ್ವಾದ ಇಲ್ಲದೆ ಹೋಗಿದ್ದರೆ ನಾನು ಯಶಸ್ವಿ ರಾಜಕಾರಣಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದರು.

"ನಾನು ನನ್ನ ಕಾಲೇಜು ದಿನಗಳಿಂದಲೂ ಬಂಗಾರಪ್ಪನವರ ಜೊತೆಗಿದ್ದೆ. ನಾನು ಅವರನ್ನು ಎಲ್ಲ ರೀತಿಯಲ್ಲಿ ಅನುಕರಿಸಲು ಪ್ರಯತ್ನಿಸುತ್ತಿದ್ದೆ. ಅವರಿಂದಲೇ ಅವರ ಮಂತ್ರಿಮಂಡಲದಲ್ಲಿ ನಾನು ಜೈಲು-ಬಂದಿಖಾನೆ ಸಚಿವನಾಗಿದ್ದು. ಅವರು ರಾಜೀನಾಮೆ ನೀಡಿದ ನಂತರವೂ ಬಂಗಾರಪ್ಪನವರು ನನ್ನನ್ನು ಎಸ್ ಎಂ ಕೃಷ್ಣ ಅವರಲ್ಲಿ ಕಳುಹಿಸಿದರು, ಆಗ ಅವರ ಜೊತೆ ನಾನು ಸಹಕಾರಿ ಸಚಿವನಾಗಿ ಕೆಲಸ ಮಾಡಿದೆ" ಎನ್ನುತ್ತಾರೆ ಶಿವಕುಮಾರ್.

ಇದಕ್ಕೂ ಮೊದಲು ಮಾತನಾಡಿದ ವಿಧಾನಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪ ಬಂಗಾರಪ್ಪನವರು ಸೋಲು ಕಂಡಿದ್ದೆ ಕಡಿಮೆ. ಅವರು ಬಡ ಜನರ ಪರ ಮತ್ತು ಜನ ಮಾನಸದ ನಾಯಕರಾಗಿದ್ದರು ಎಂದರು.

"ಇಂದಿನ ದಿನಗಳಲ್ಲಿ ಸಚಿವರಿಗೆ ಒಬ್ಬರನ್ನೊಬ್ಬರನ್ನು ಕಂಡರೆ ಆಗುವುದಿಲ್ಲ. ದೇವರಾಜ್ ಅರಸ್ ಅವರನ್ನು ಹೊರತುಪಡಿಸಿದರೆ, ಬಂಗಾರಪ್ಪ ಒಬ್ಬರೇ ರಾಜ್ಯದ ಎಲ್ಲ ವರ್ಗದವರನ್ನೂ ಒಟ್ಟಿಗೆ ಕರೆದೊಯ್ಯಲು ಸಾಧ್ಯವಿದ್ದ ವ್ಯಕ್ತಿ. ಇಂದು ಅವರು ಬದುಕಿದ್ದರೆ, ಅವರ ಸ್ಥಾನಕ್ಕೆ ಯಾವ ರಾಜಕಾರಣಿಯೂ ಸವಾಲೊಡ್ಡಲು ಸಾಧ್ಯವಿರುತ್ತಿರಲಿಲ್ಲ" ಎಂದರು.

ಬಂಗಾರಪ್ಪನವರು ರಾಜ್ಯಕ್ಕೆ ಕೊಟ್ಟ ಎಷ್ಟೋ ಯೋಜನೆಗಳು ಇನ್ನೂ ಜಾರಿಯಲ್ಲಿವೆ ಎಂದರು ಬಿಜೆಪಿಯ ನಾಯಕ ಆರ್ ಅಶೋಕ್.

ಇದೇ ಸಮಯದಲ್ಲಿ ಕಬ್ಬಡ್ಡಿ ಆಟಗಾರ್ತಿ ಮಮತಾ ಪೂಜಾರಿ, ಸಾಹಿತಿ ಗೊರೂರು ಚೆನ್ನಬಸಪ್ಪ, ಹಾಡುಗಾರ ತಂಬೂರಿ ಜವರಯ್ಯ ಅವರನ್ನು ಸನ್ಮಾನಿಸಲಾಯಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ನಿರ್ದೇಶಕ ಟಿ ಎನ್ ಸೀತಾರಾಂ , ಸಿ ಎಂ ಇಬ್ರಾಹಿಮ್ ಮುಂತಾದ ಗಣ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.