ಜಿಲ್ಲಾ ಸುದ್ದಿ

ರಾಜ್ಯದಲ್ಲಿ ಬದಲಾದ ಬಂದೀಖಾನಾವಳಿ

ರಾಜ್ಯದಲ್ಲಿ ಬದಲಾದ ಬಂದೀಖಾನಾವಳಿ
Published On :

ಗುಲ್ಬರ್ಗ: ಭರ್ಜರಿ ಊಟ ಬೇಕು ಅಂದ್ರೆ ಜೈಲಿಗೆ ಹೋಗಬೇಕು ನೋಡ್ರಿ. ತಮಾಷೆ ಅಲ್ರಿಯಪ್ಪಾ. ರಾಜ್ಯೋತ್ಸವ ದಿನದಿಂದ ರಾಜ್ಯದ ಕೈದಿಗಳಿಗೆ ಭೂರಿ ಭೋಜನ ಸಿಗಲಿದೆ.

ರೊಟ್ಟಿ, ಅನ್ನ ಸಾಂಬಾರ್‌ನ ಸಪ್ಪೆ ಊಟದಿಂದ ಬೇಸತ್ತಿರುವ ಜೈಲುಹಕ್ಕಿಗಳಿಗೆ ಸಿಹಿಸುದ್ದಿ. 1978ರಿಂದ ಜಾರಿಯಲ್ಲಿದ್ದ  ಕೈದಿಗಳ ಊಟದ ಮೆನುವಿನಲ್ಲಿ ಸರ್ಕಾರ ಭಾರಿ ಬದಲಾವಣೆ ಮಾಡಿದೆ. ಹೊಸ ಮೆನು ನ.1 ರಿಂದ ರಾಜ್ಯದ ಎಲ್ಲ ಕಾರಾಗೃಹ , ಉಪ ಕಾರಾಗೃಹಗಳಲ್ಲಿ ಜಾರಿಗೆ ಬರಲಿದೆ.

ಶಿಕ್ಷೆಗೆ ಒಳಗಾಗಿರುವ ಮತ್ತು ವಿಚಾರಣಾಧೀನ ಕೈದಿಗಳ ಆರೋಗ್ಯ ಗಮನದಲ್ಲಿಟ್ಟುಕೊಂಡು  ಮೈಸೂರಿನ ಕೇಂದ್ರೀಯ ಆಹಾರ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ), ಧಾರವಾಡ ಮತ್ತು ರಾಯಚೂರು ಕೃಷಿ ವಿವಿ ಪೌಷ್ಟಿಕಾಂಶ ವಿಭಾಗದ ಸಂಶೋಧನಾ ವಿಜ್ಞಾನಿಗಳ ತಂಡ ಊಟದ ಮೆನುವಿನಲ್ಲಿ ಏನೆಲ್ಲ ಬದಲಾವಣೆಗಳಾಗಬೇಕು ಎಂದು ಸರ್ಕಾರಕ್ಕೆ ವರದಿ ನೀಡಿತ್ತು. ಅದನ್ನು ಆಧಾರವಾಗಿಟ್ಟುಕೊಂಡು ಬಂದೀಖಾನೆ ಎಡಿಜೆಪಿ ಕೆ.ವಿ.ಗಗನದೀಪ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದರು. ಅದಕ್ಕೆ ಸರ್ಕಾರ ಯಥಾವತ್ ಒಪ್ಪಿಗೆ ನೀಡಿದೆ.

ಪಕ್ವಾನ್ನ ಪಟ್ಟಿ ಹೇಗಿದೆ?

  • ಜೈಲುಗಳಲ್ಲಿ ಮೊದಲಿನಿಂದ ನೀಡುತ್ತಿರುವ ರಾಗಿ, ಜೋಳ, ಗೋದಿ, ಅಕ್ಕಿ ರೊಟ್ಟಿ ಜೊತೆಗೆ  ಹೊಸ ಪದಾರ್ಥಗಳು ಸೇರಿಕೊಳ್ಳಲಿದ್ದು ಕೈದಿಗಳ ಊಟಕ್ಕೆ ಹೊಸ ರುಚಿ ನೀಡಲಿವೆ.
  • ಪ್ರತಿ ಶುಕ್ರವಾರ ಮಟನ್ ಜತೆಗೆ ಚಿಕನ್ ನೀಡಲಾಗುತ್ತದೆ (ಪ್ರತಿವಾರ ಚಿಕನ್/ಮಟನ್ ಬದಲಾವಣೆ)
  • ಪ್ರತಿ ಶನಿವಾರ ಎಲ್ಲರಿಗೂ ಮೊಟ್ಟೆ ಬಾಳೆಹಣ್ಣು
  • ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕೈದಿಗಳಿಗೆ -ಸಮುದ್ರದ ಮೀನು
  • ಹಬ್ಬ ಹರಿದಿನಗಳಲ್ಲ ಸಿಹಿಯೂಟ. ಸಿಹಿಯೂಟಕ್ಕೆ ಒಬ್ಬ ಕೈದಿಗೆ ನೀಡಲಾಗುತ್ತಿದ್ದ ರು.3 ಈಗ 10ಕ್ಕೆ ಏರಿಕೆ
  • 9 ರಾಷ್ಟ್ರೀಯ ಹಬ್ಬ, 6 ವಿಶೇಷ ಸರ್ಕಾರಿ ರಜೆ ದಿನಗಳಲ್ಲಿ ಕೈದಿಗಳು ಬಯಸಿದ ಸಿಹಿ ಅಡುಗೆ
  • ಬೆಳಗಿನ ಉಪಹಾರ: ಚಿತಾನ್ನ, ಟೊಮೇಟೋ ರೈಸ್, ಪುಳಿಯೋಗರೆ, ಅವಲಕ್ಕಿ , ತರಕಾರಿ ಪಲಾವ್, ಉಪ್ಪಿಟ್ಟು

-ಡಾ. ಮಲ್ಲಿಕಾರ್ಜುನ ಸ್ವಾಮಿ
ಗುಲ್ಬರ್ಗ ಜಿಲ್ಲಾ ಕಾರಾಗೃಹ ಅಧೀಕ್ಷಕ
-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.