ಜಿಲ್ಲಾ ಸುದ್ದಿ

ನಾಗಾಲ್ಯಾಂಡ್ ದಂಪತಿ ಮೇಲೆ ದೌರ್ಜನ್ಯ ; ಮೂವರ ಬಂಧನ

ನಾಗಾಲ್ಯಾಂಡ್ ದಂಪತಿ ಮೇಲೆ ದೌರ್ಜನ್ಯ ; ಮೂವರ ಬಂಧನ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಶನಿವಾರ ಬೆಂಗಳೂರು ಹೊರವಲಯ ಹೆಸರಘಟ್ಟದಲ್ಲಿ ನಾಗಾಲ್ಯಾಂಡ್‌ನ ದಂಪತಿಗಳ ಮೇಲೆ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸರು ಸೋಮವಾರ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಾದವರಲ್ಲಿ ಬೆಂಗಳೂರಿನ ಹರೀಶ್, ಮಹೇಶ್, ಅನಂತ್ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದು, ಅವರ ಗೆಳೆಯ ರತನ್ ಎಂಬಾತ ಜಿಮ್‌ವೊಂದರ ಮಾಲೀಕನಾಗಿದ್ದಾನೆ.

ನಾಗಾಲ್ಯಾಂಡ್‌ನ ದಂಪತಿಯರು ನೀಡಿದ ದೂರಿನ ಆಧಾರದ ಮೇಲೆ ನಾವು ಈ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ದಂಪತಿಯರ ಮೇಲೆ ದೌರ್ಜನ್ಯ, ಕೊಲೆ ಬೆದರಿಕೆ ಆರೋಪದಡಿಯಲ್ಲಿ ಭಾನುವಾರ ಕೇಸು ದಾಖಲಿಸಲಾಗಿದ್ದು, ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ನಾಗಾಲ್ಯಾಂಡ್‌ನ ದಂಪತಿಗಳು ಮತ್ತು ಅವರ ಗೆಳೆಯರು ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೆಸರಘಟ್ಟ ರಸ್ತೆಯಲ್ಲಿ ಈ ಯುವಕರು ಅಪಾಯಕರ ರೀತಿಯಲ್ಲಿ  ವಾಹನ ಚಲಾಯಿಸುತ್ತಿದ್ದರು. ಅಲ್ಲಿ ಎರಡೂ ತಂಡಗಳ ನಡುವೆ ವಾಗ್ವಾದ ನಡೆದಿದ್ದು, ಪರಸ್ಪರ ಹೊಡೆದಾಟವೂ ನಡೆದಿದೆ. ಈ ವೇಳೆ ಯುವಕರ ತಂಡ ದಂಪತಿಯರಿಗೆ ಬೆದರಿಕೆಯೊಡ್ಡಿದ್ದರಿಂದ ಅವರು ಪೊಲೀಸರಿಗೆ ದೂರು ನೀಡಿದ್ದರು.
ಆದಾಗ್ಯೂ, ಇದು ಜನಾಂಗೀಯ ಹಲ್ಲೆ ಅಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.