ಗುಲ್ಬರ್ಗಾ ಅಥವಾ ಶ್ರವಣಬೆಳಗೊಳದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ?

ಬೆಂಗಳೂರು: ೮೧ ನೆ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಸಭೆಯಲ್ಲಿ ನಿರ್ಣಯ ಕೈಗೊಂಡ ಮೇಲೆ, ಗುಲ್ಬರ್ಗ ಮತ್ತು ಶ್ರವಣಬೆಳಗೊಳ(ಹಾಸನ ಜಿಲ್ಲೆ) ಸಮ್ಮೇಳನವನ್ನು ನಡೆಸಲು ಮುಂಚೂಣಿಯಲ್ಲಿ ಪೈಪೋಟಿಯಲ್ಲಿರುವ ಜಿಲ್ಲೆಗಳು ಎಂದು ತಿಳಿದು ಬಂದಿದೆ.
ನವೆಂಬರ್ ೧೬ ರಂದು ಬೇಲೂರಿನಲ್ಲಿ ಸೇರುವ ಸಭೆಯಲ್ಲಿ ಅಂತಿಮ ಸ್ಥಳವನ್ನು ಆಯ್ಕೆ ಮಾಡಲಾಗುವುದು.
ಕಳೆದ ಜನವರಿಯಲ್ಲಿ ನಡೆದ ಮಡಿಕೇರಿ ಸಮ್ಮೇಳನದಲ್ಲಿ, ಮುಂದಿನ ಸಮ್ಮೇಳನ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ನಡೆಸಲಾಗುವುದು ಎಂದು ಘೋಷಿಸಲಾಗಿತ್ತು, ಆದರೆ ಕೆಲವು ಸಂಘಟನೆಗಳು ಹಾವೇರಿ ಜಿಲ್ಲಾ ಕೆಂದ್ರದಲ್ಲೇ ಸಮ್ಮೇಳನ ನಡೆಸಬೇಕಾಗಿ ಪಟ್ಟು ಹಿಡಿದಿದ್ದರಿಂದ, ವಿವಾದ ಸೃಷ್ಟಿಯಾಗಿತ್ತು. ವಿವಾದ ಬಗೆಹರಿಯದೆ ಸಮ್ಮೇಳನ ಹಾವೇರಿ ಜಿಲ್ಲೆಯಿಂದಲೇ ಎತ್ತಂಗಂಡಿಯಾಗಿದೆ.
ಈ ಹಿಂದೆ ೧೯೮೭ ರಲ್ಲಿ ಗುಲ್ಬರ್ಗಾದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಆಗ ಸಾಹಿತಿ ಸಿದ್ಧಯ್ಯ ಪುರಾಣಿಕ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಗುಲ್ಬರ್ಗಾದಲ್ಲಿ ಸಮ್ಮೇಳನ ಮಾಡುವಂತೆ ಕೋರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಲಂಬಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಶ್ರವಣಬೆಳಗೊಳದ ಸ್ವಾಮೀಜಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶ್ರವಣಬೆಳಗೊಳದಲ್ಲಿ ಸಮ್ಮೇಳನ ನಡೆಸುವಂತೆ ಮನವಿ ಮಾಡಿದ್ದಾರೆ.
ಸಮ್ಮೇಳನಾಧ್ಯಕ್ಷ ಸ್ಥಾನವನ್ನು ಈ ಬಾರಿ ಒಬ್ಬ ದಲಿತ ಸಾಹಿತಿಗೆ ನೀಡಬೇಕೆಂಬ ಕೂಗು ದಟ್ಟವಾಗಿದ್ದು, ಹಿರಿಯ ಸಾಹಿತಿ-ಚಿಂತಕ ದೇವನೂರು ಮಹದೇವ ಮತ್ತು ಕವಿ ಸಿದ್ಧಲಿಂಗಯ್ಯನವರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


