ಜಿಲ್ಲಾ ಸುದ್ದಿ

ಕನ್ನಡ- ತಮಿಳು ಹೃದಯ ಬೆಸೆದ ಕನ್ನಡಿಗ ವೈದ್ಯ

ಕನ್ನಡ- ತಮಿಳು ಹೃದಯ ಬೆಸೆದ ಕನ್ನಡಿಗ ವೈದ್ಯ
Published On :

ಬಳ್ಳಾರಿ: ಬೆಂಗಳೂರು, ಚೆನ್ನೈ ನಡುವೆ ಟ್ರಾಫಿಕ್ ಫ್ರೀನಲ್ಲಿ ಹೃದಯ ಸಂಬಂಧ ಬೆಸೆದ ವೇಳೆ ಇಡೀ ರಾಜ್ಯದ ಜನತೆ ಕೂಡ ಮರುಗಿತು. ಒಂದೇಡ ಪ್ರಾಣ ಕಳೆದುಕೊಂಡಾಕೆಯ ಮನೆಯವರ ಹೃ'ದಯ'ವನ್ನೂ ಅದೇ ಜನತೆ ಕೊಂಡಾಡಿತು. ಹಾಗೆಯೇ ಇನ್ನೊಬ್ಬರನ್ನು ಪ್ರಶಂಸಿಸುವ ಕಾಲವೂ ಬಂದಿದೆ. ಏಕೆಂದರೆ, ಆ ಹೃದಯವನ್ನು ಚೆನ್ನೈನಲ್ಲಿ ರೋಗಿಯ ದೇಹಕ್ಕೆ ಜೋಡಿಸಿದ್ದು ಕೂಡ ಕನ್ನಡಿಗ.

ಚೆನ್ನೈನ ಪೋರ್ಟಿಸ್ ಮಲರ್ ಆಸ್ಪತ್ರೆಯ ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ.ಕೆ.ಜಿ.ಸುರೇಶ್ ರಾವ್ ಇಡೀ ಕಾರ್ಯಾಚರಣೆಯ ಸೂತ್ರದಾರ. ಇವರು ಮೂಲತಃ ಮಂಗಳೂರಿನವರಾಗಿದ್ದು, ಬಳ್ಳಾರಿಯ ವಿಮ್ಸ್‌ನಲ್ಲಿ ವೈದ್ಯ ಶಿಕ್ಷಣ(1983) ಪೂರೈಸಿದ್ದರು.

ಯಶಸ್ವಿ ವೈದ್ಯ

ತಮಿಳುನಾಡಿನಲ್ಲಿ ಇವರು ಈವರೆಗೆ 30 ಹೃದಯ ಕಸಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ ಬೇರೆ ರಾಜ್ಯದಲ್ಲಿರುವ ಹೃದಯ ತಂದು ಜೋಡಿಸಿದ್ದು ಮಾತ್ರ ಇದೇ ಮೊದಲು. ಅಷ್ಟೇ ಏಕೆ, ದೇಶದಲ್ಲೂ ಇದು ಮೊದಲನೇ ಪ್ರಯೋಗ.

ಗೋತ್ತಾಗಿದ್ದು ಹೇಗೆ?
ಚೆನ್ನೈನ ಪೋರ್ಟಿಸ್ ಆಸ್ಪತ್ರೆಯಲ್ಲಿ ಹೃದಯ ಬೇಡಿಕೆ ಇದೆ ಎಂದು ಸ್ಥಲೀಯ ವಲಯ ಸಹಕಾರ ಸಮಿತಿಯಲ್ಲಿ ನೋಂದಾವಣಿ ಮಾಡಲಾಗಿತ್ತು. ಇವರಿಗೆ ಬೆಂಗಳೂರಿನಲ್ಲಿ ಹೃದಯದಾನಿಗಳು ಇದ್ದಾರೆ ಎಂಬುದು ಗೊತ್ತಾಯಿತು. ವೈದ್ಯರ ತಂಡದ ಪರಿಶೀಲನೆ ನಂತರ ಚೆನ್ನೈನಲ್ಲಿನ ರೋಗಿಗೆ ಈ ಹೃದಯ ಹೊಂದಿಕೊಳ್ಳುತ್ತದೆ ಎಂದು ಅರಿವಾದ ಕೂಡಲೇ ಅಲ್ಲಿಗೆ ಸಾಗಿಸಲು ನಿರ್ಧರಿಸಲಾಯಿತು. ಇಲ್ಲಿಂದ ಅಚ್ಚರಿಯ ರೀತಿಯಲ್ಲಿ ತೆಗೆದುಕೊಂಡು ಹೋಗಿ ಹೃದಯ ಕಸಿ ಮಾಡಲಾಯಿತು.

ಬೇರೆ ರಾಜ್ಯದಿಂದ ಹೃದಯ ತಂದು ಕಸಿ ಕಾರ್ಯಾಚರಣೆ ಮಾಡಿದ ಮೊದಲ ಪ್ರಯತ್ನವಿದು. ಇದರ ಯಶಸ್ಸಿಗೆ ನಾವು ಮಾತ್ರವಲ್ಲ. ಸರ್ಜನ್ಸ್, ಟ್ರಾನ್ಸ್‌ಪೋರ್ಟ್ ಮಾಡುವವರು, ಪೊಲೀಸರು, ಸಾರ್ವಜನಿಕರು, ಮಾಧ್ಯಮದವರೂ ಕಾರಣಕರ್ತರು.
- ಡಾ. ಕೆ.ಜಿ. ಸುರೇಶ್ ರಾವ್

ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿ ಈ ಸಾಧನೆ ಮಾಡಿರುವುದು ತುಂಬಾ ಸಂತೋಷ ತಂದಿದೆ.
- ಡಾ. ಲಕ್ಷ್ಮಿನಾರಾಯಣ ರೆಡ್ಡಿ, ವಿಮ್ಸ್ ನಿರ್ದೇಶಕ.

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.