ನಿತ್ಯಾನಂದನ ವೀರ್ಯ ಪರೀಕ್ಷೆ ಮಾಡಿಲ್ಲ

ಪುರುಷತ್ವ ಪರೀಕ್ಷೆಗೆ ಒಳಗಾಗಿದ್ದ ನಿತ್ಯಾನಂದನ ವೀರ್ಯ ಪರೀಕ್ಷೆ ಮಾಡಿಲ್ಲ ಎಂದು ನೆಫ್ರೋ ಯುರಾಲಜಿ ಸಂಸ್ಥೆಯ ಅಧ್ಯಕ್ಷ ಡಾ.ಆರ್.ಕೇಶವಮೂರ್ತಿ ಹೇಳಿದ್ದಾರೆ.
ನಿತ್ಯಾನಂದನ ವೀರ್ಯ ಪರೀಕ್ಷೆ ಮಾಡಿಲ್ಲ
Updated on: 

ಬೆಂಗಳೂರು: ಪುರುಷತ್ವ ಪರೀಕ್ಷೆಗೆ ಒಳಗಾಗಿದ್ದ ನಿತ್ಯಾನಂದನ ವೀರ್ಯ ಪರೀಕ್ಷೆ ಮಾಡಿಲ್ಲ ಎಂದು ನೆಫ್ರೋ ಯುರಾಲಜಿ ಸಂಸ್ಥೆಯ ಅಧ್ಯಕ್ಷ ಡಾ.ಆರ್.ಕೇಶವಮೂರ್ತಿ ಹೇಳಿದ್ದಾರೆ.

ನಿತ್ಯಾನಂದನ ಪುರುಷತ್ವ ಪರೀಕ್ಷೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಆರ್.ಕೇಶವಮೂರ್ತಿ ಅವರು, 'ಪುರುಷತ್ವ ಪರೀಕ್ಷೆ ವೇಳೆ ನಿತ್ಯಾನಂದನ ವೀರ್ಯ ಪರೀಕ್ಷೆ ಮಾಡಿಲ್ಲ. ಸಿಐಡಿ ಅಧಿಕಾರಿಗಳು ವೀರ್ಯ ಪರೀಕ್ಷೆಗೆ ಮನವಿ ಮಾಡಿರಲಿಲ್ಲ. ಮುಂದೆ ಅಗತ್ಯ ಬಿದ್ದರೆ ಅಥವಾ ಸಿಐಡಿ ಅಧಿಕಾರಿಗಳು ಕೇಳಿದರೆ ವೀರ್ಯ ಪರೀಕ್ಷೆ ಮಾಡುವುದಾಗಿ' ಹೇಳಿದ್ದಾರೆ.

ಇದೇ ವೇಳೆ ನಿತ್ಯಾನಂದನ ಆರೋಗ್ಯ ಪರಿಸ್ಥಿತಿ ಕುರಿತು ಮಾತನಾಡಿದ ಕೇಶವಮೂರ್ತಿ ಅವರು, 'ಸತತ ಪರೀಕ್ಷೆಗಳಿಂದಾಗಿ ನಿತ್ಯಾನಂದ ಆಯಾಸಗೊಂಡಿದ್ದ. ಪರೀಕ್ಷೆ ಬಳಿಕ ಇಲ್ಲಿಗೆ ಆಗಮಿಸಿದ್ದ ನಿತ್ಯಾನಂದ ವಿಶ್ರಾಂತಿ ನೀಡುವಂತೆ ಮನವಿ ಮಾಡಿದ್ದ. ತಮಗೆ ಸುಸ್ತಾಗಿದ್ದು, ಸ್ವಲ್ಪ ಕಾಲ ವಿಶ್ರಾಂತಿ ಪಡೆಯುತ್ತೇನೆ ಎಂದು ಹೇಳಿದ. ಹೀಗಾಗಿ ನಿತ್ಯಾನಂದನಿಗೆ ವೀಲ್ ಚೇರ್ ವ್ಯವಸ್ಥೆ ಮಾಡಿಕೊಡಲಾಯಿತು. ವೀಲ್‌ಚೇರ್‌ನಲ್ಲಿಯೇ ಆತನನ್ನು ಆ್ಯಂಬುಲೆನ್ಸ್ ಮೂಲಕವಾಗಿ ಕಳುಹಿಸಿಕೊಡಲಾಯಿತು' ಎಂದು ಕೇಶವಮೂರ್ತಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com