ಜಿಲ್ಲಾ ಸುದ್ದಿ

ಬೆಂಗಳೂರು- ಮೈಸೂರು ಬುಲೆಟ್ ರೈಲಿಗೆ ಜಪಾನ್ ನೆರವು

ಬೆಂಗಳೂರು- ಮೈಸೂರು ಬುಲೆಟ್ ರೈಲಿಗೆ ಜಪಾನ್ ನೆರವು
Published On :

ಬೆಂಗಳೂರು: ಬೆಂಗಳೂರು-ಮೈಸೂರು ಮಧ್ಯೆ ಬುಲೆಟ್ ರೈಲು ಮಾರ್ಗ ನಿರ್ಮಾಣದ ಕಾರ್ಯಸಾಧ್ಯತೆ ಬಗ್ಗೆ ಜಪಾನ್ ನಿಯೋಗದ ಜತೆ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಜಪಾನ್‌ನ ಮಿಯಾ ಪ್ರಿಪ್ರೆಕ್ಚರ್ ರಾಜ್ಯದ ಗವರ್ನರ್ ಇಕಾಯಿ ಸುಜುಕಿ ನೇತೃತ್ವದ ನಿಯೋಗದ ಜತೆ ವಿವಿಧ ವಾಣಿಜ್ಯ ಹಾಗೂ ಕೈಗಾರಿಕಾ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬುಲೆಟ್ ರೈಲು ಮಾರ್ಗ ನಿರ್ಮಾಣ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಕೈ ಬಿಟ್ಟಿಲ್ಲ. ಸೆ.15ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರ್ ರಾವ್ ಅವರು ಜಪಾನ್‌ಗೆ ತೆರಳಲಿದ್ದು, ಆ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತಾರೆ ಎಂದು ಹೇಳಿದರು.

ಜಪಾನ್ ನಿಯೋಗದ ಜತೆ ತಾವು ಹಲವು ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ ಹಾಕಿದೆ. ತಾಂತ್ರಿಕ ಅನ್ವೇಷಣೆ, ಬೌದ್ಧಿಕ ವಿನಿಮಯ, ಶೈಕ್ಷಣಿಕ ಕ್ಷೇತ್ರದಲ್ಲಿನ ಸಹಕಾರ, ಆರೋಗ್ಯ, ಜಲ ಪರಿಷ್ಕರಣೆ, ನಿರ್ಮಾಣ ಕ್ಷೇತ್ರದಲ್ಲಿ ಸಹಕಾರಕ್ಕೆ ಒಪ್ಪಿಗೆ ನೀಡಿದ್ದೇವೆ. ರಾಜ್ಯದಲ್ಲಿ 271ಕ್ಕೂ ಹೆಚ್ಚು ಜಪಾನ್ ಸಂಸ್ಥೆಗಳಿದ್ದು, ಮೆಟ್ರೋ, ಚೆನ್ನೈ-ಬೆಂಗಳೂರು ಕಾರಿಡಾರ್ ನಿರ್ಮಾಣ ಸೇರಿದಂತೆ ಮಹತ್ವದ ಯೋಜನೆಗಳಲ್ಲಿ ತೊಡಗಿಸಿಕೊಂಡಿವೆ ಎಂದರು.

ಮಿಯಾ ಪ್ರಿಪೆಕ್ಟರ್ ಗವರ್ನರ್ ಇಕಾಯಿ ಸುಜುಕಿ ಮಾತನಾಡಿ, ಐಟಿ , ಬಯೋ ಟೆಕ್ನಾಲಜಿ, ಆಟೋಮೊಬೈಲ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಮ್ಮ ಪ್ರಾಂತ್ಯ ಮುನ್ನಡೆ ಸಾಧಿಸಿದೆ. 2025ರ ಹೊತ್ತಿಗೆ ಇನ್ನಷ್ಟು ಪ್ರಗತಿ ಸಾಧಿಸುತ್ತೇವೆ. ಕರ್ನಾಟಕವೂ ಈ ಮೂರು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದು, ಒಪ್ಪಂದ ದೂರಗಾಮಿ ಪರಿಣಾಮ ಬೀರುವಂಥದ್ದಾಗಿದೆ ಎಂದರು.

ಮೀಯೆ ಮೀಯೆ...
ಸಿಎಂ ಸಿದ್ದರಾಮಯ್ಯ ಅವರಿಗೆ ವಾಚ್ ಗಿಫ್ಟ್ ನೀಡಿದ ಮಿಯಾ ಪ್ರಿಫೆಕ್ಟರ್ ಗವರ್ನರ್ ಇಕಾಯಿ ಸುಜುಕಿ ಮೀಯೆ ಮೀಯೆ ಎಂದು ವಿಶಿಷ್ಟ ಧ್ವನಿ ಹೊರಡಿಸಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಯ್ತು.

ಒಪ್ಪಂದಕ್ಕೆ ಸಹಿ ಹಾಕಿದ ನಂತರ ಸ್ನೇಹದ ಗುರುತಾಗಿ ಇಕಾಯಿ ಸುಜುಕಿ ಸಿಎಂ ಸಿದ್ದರಾಮಯ್ಯ ಅವರಿಗೆ ಮುತ್ತುಗಳಿಂದ ಆವೃತವಾದ ವಾಚ್‌ನ್ನು ಗಿಫ್ಟ್ ನೀಡಿದರು. ಜಪಾನ್‌ನ ಮೇಕಿಯೋಕ್ ಪರ್ಲ್ ದ್ವೀಪದಲ್ಲಿ ಇದನ್ನು ತಯಾರಿಸಿದ್ದಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.