ಕತ್ತಿ ಹೇಳಿಕೆಗೆ ಕನ್ನಡಪ್ರಭ.ಕಾಮ್ನ ಓದುಗರ ಪ್ರತಿಕ್ರಿಯೆಗಳು

ರಾಜ್ಯ ವಿಂಗಡನೆ ಕುರಿತು ಬೆಳಗಾವಿಯಲ್ಲಿ ಮಾಜಿ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆಗೆ ಕನ್ನಡಪ್ರಭ.ಕಾಮ್ನ ಓದುಗರು ತಮ್ಮದೇ ಆದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದು, ಅವುಗಳ ಪೈಕಿ ಕೆಲ ಆಯ್ದ ಅಂಶಗಳು ಇಲ್ಲಿವೆ.
ಜಿಲ್ಲೆಗಳನ್ನು ಅಭಿವೃದ್ಧಿಪಡಿಸಿ
ಅಯ್ಯೋ ತೆಲಂಗಾಣ ಮಾಡಿದ ಹಾಗೆ ಗಲಾಟೆ ಮಾಡಬೇಡಿ. ನಿಮಲ್ಲಿ ತಾಕತ್ ಇದ್ದರೆ ಮೊದಲು ಒಂದೆರಡು ಜಿಲ್ಲೆಗಳನ್ನು ಅಭಿವೃದ್ಧಿ ಮಾಡಿ ತೋರಿಸಿ. ಆಮೇಲೆ ಬೇಕಾದರೆ ಎರಡು ರಾಜ್ಯ ಮಾಡೋಣ.
ಜಯಶೀಲಾ
ರಾಜ್ಯಗಳು ಬೇರೆಯಾಗಲಿ ಆದರೆ ಮನಸುಗಳು ಒಡೆಯದಿರಲಿ ಮತ್ತು ಪರಸ್ಪರ ಸ್ನೇಹ ಹಸಿರಾಗಿರಲಿ..
ಗುರು
ಇಲ್ಲಿಯವರೆಗೆ ಬಂದ ಎಲ್ಲ ರಾಜ್ಯ ಸರ್ಕಾರಗಳೂ ಉ.ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿವೆ ಏನೇ ಮಾಡಿದರೂ ಬೆಂಗಳೂರು ಇಲ್ಲವೆ ಮೈಸೂರು ಎಂಬಂತಾಗಿದೆ. ಅಭವೃದ್ಧಿ ದೃಷ್ಟಿಯಿಂದ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲೇಬೇಕು.
ಪ್ರಶಾಂತ್
ಕರ್ನಾಟಕದಲ್ಲಿ ಅಭಿವೃದ್ಧಿಯಾಗದ ಎಷ್ಟೋ ಗ್ರಾಮಗಳಿವೆ. ಇದಕ್ಕೆ ಯಾರು ಜವಾಬ್ದಾರಿ....? ಕರ್ನಾಟಕ ಅಭಿವೃದ್ಧಿಯಾಗುತ್ತಿದ್ದಲ್ಲಿ ವಿಭಜನೆಯಾದರೂ ಪರವಾಗಿಲ್ಲ..
ವಿನಾಯಕ್.ಕೆ.ಬಿ.
ನಾನು ಕೂಡ ಉತ್ತರಕರ್ನಾಟಕದವನೇ..ಅಲ್ಲಾ ಈ ಉಮೇಶ್ ಕತ್ತಿ ಅವರ ಬಿಜೆಪಿ ಸರ್ಕಾರ ಇದ್ದಾಗ ಡೆವಲೆಪ್ಮೆಂಟ್ ಮಾಡಬಹುದಿತ್ತು. ಈಗಲೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ವಿಶೇಷ ಪರಿಹಾರ ಧನಗಳನ್ನು ತಂದು ಅಭಿವೃದ್ಧಿ ಮಾಡಲು ಸಮಸ್ಯೆ ಏನು..? ಈ ರಾಜಕಾರಣಿಗಳು ಸರ್ಕಾರ ನೀಡಿದ ಪರಿಹಾರ ಧನಗಳನ್ನು ತಿಂದುತೇಗಿ, ಈಗ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬೇರೆ ರಾಜ್ಯದ ಮಾತುಗಳನ್ನಾಡುತ್ತಿದ್ದಾರೆ ಅಷ್ಟೇ...
ಅಗಸಿ ರವಿ
ಯಾವ ಟಿವಿ ಚಾನೆಲ್ ಹುಬ್ಬಳ್ಳಿಯಿಂದ ಪ್ರಸಾರವಾಗುತ್ತಿದೆ. ಯಾವ ಎಫ್ಎಂ ರೇಡಿಯೋ ಹುಬ್ಬಳ್ಳಿಯಲ್ಲಿ ಇದೆ. ಯಾವ ಐಟಿ ಸಂಸ್ಥೆ ಉತ್ತರ ಕರ್ನಾಟಕದಲ್ಲಿದೆ. ಆದರೆ ಹೆಚ್ಚು ಅಕ್ಕಿಗಿರಣಿಗಳ ಮಾರ್ಕೆಟ್ ಇರುವುದು ನಮ್ಮಲ್ಲಿ.. ಮೈನಿಂಗ್ ಮತ್ತು ಖನಿಜಾಂಶಗಳು ಇರುವುದು ನಮ್ಮಲ್ಲಿ...ಕಾವೇರ ಗಲಾಟೆ ಆದರೆ ಇಡೀ ಕರ್ನಾಟಕ ಬಂದ್ ಆಗುತ್ತೆ...ಆದರೆ ಕೃಷ್ಣಾ ನದಿಯ ಕತೆಯನ್ನು ಕೇಳುವವರು ಯಾರೂ ಇಲ್ಲ..
gadag_boy
this non sense demand must crushed in the root or else it will become a problem like telangana.. karnataka ekhikarana start agidda namm uttara karnataka daga antha mari byadri katti sahebra...
Kaluvehalli Shivashankar
ಎರಡನೇ ರಾಜ್ಯ ಬೇಕು ನಿಜ ! ಆದರೆ ಯಾವಪ್ಪನ ನೇತೃತ್ವ ಬೇಕಾಗಿಲ್ಲ ! ಇದು ಪ್ರತಿಯೊಬ್ಬ ಪ್ರಜೆಯ ಹಕ್ಕು. ಸರ್ಕಾರಿ ಅಧಿಕಾರಿಗಳೇ ಪರಿಶೀಲನೆ ನಡೆಸಿ, ನಿರ್ಧಾರ ತೆಗೆದು ಕೊಳ್ಳ ಬಹುದು, ವಿಂಗಡಿಸಬಹುದು!
ಕರ್ನಾಟಕ ವನ್ನು 3 - ಭಾಗ ಗಳಾಗಿ ವಿಂಗಡಿಸಬಹುದು :
೧. ಉತ್ತರ ಕರ್ನಾಟಕ ......ಬೆಳಗಾವಿ ರಾಜಧಾನಿ
೨. ಮಧ್ಯ ಕರ್ನಾಟಕ .......ಬೆಂಗಳೂರು ..."......
೩. ಕೊಡಗು..................ಮಂಗಳೊರ್ ..".............
ಹಾಗೆಯೆ , ಕನ್ನಡದವರು ತಮಿಳ್, ತೆಲುಗು, ಬಂಗಾಳಿ, ಮರಾಠಿ , ಮತ್ತು ಬಿಹಾರಿಗಳಿಗೆ , ನಿಮ್ಮ ಜಿಲ್ಲೆಗಳಲ್ಲಿ ಕೆಲಸಕೊಟ್ಟು, ಅವರಿಂದಲೇ ಬಾಡಿಗೆ ಮನೆ ಪಡೆಯಿರಿ. ಏಕೆಂದರೆ ರಿಯಲ್ ಎಸ್ಟೇಟ್ ಮಾಫಿಯಾ ಜೊತೆ , ನಮ್ಮ ಭೂಮಿಯನ್ನು ನಮಗೆ ಮಾರಲು ಸಿದ್ಧವಾಗಿದ್ದಾನೆ, ಎಲ್ಲರೂ ಕನ್ನಡ ಮರೆತು ಬಿಡ್ರಣ್ಣ!!
ಈಗಾಗ್ಲೇ ಬೆಂಗಳೂರು ನಲ್ಲಿ ಬೇರೆ ರಾಜ್ಯದವರು ನಮಗೆ ಬಾಡಿಗೆ ಕೊಡುತ್ತಿದ್ದಾರೆ!! ಒಂದು ದಿನ ಲೇಟ್ ಆದಲ್ಲಿ ಸಾಮನ್ ಹೊರಗೆ ಹಾಕುತ್ತಾರೆ !!ಮಾಡಿ 4 ರಾಜ್ಯ !!
Basu Pattanashetty
We want north Karnatak special state good days for next genaration..
Ramesh Holennavar
We need the north Karnataka.development..
Not only Bangalore..
Major 90% source go from north Karnataka but non of the any Gvt not still support for the north Karnataka pep..Y? ????.
Every year 5lk students moving for higher education and job purpose..
But think of the Bangalore life style what now..
Plz think of our future generation ...
Metro railways only Bangalore to mysore..Bullet train only Bangalore to mysore..
IT park only
All bigg mnc only
Only in those ..Y. Should here...
Gollaleshwar D Golashetty
ಭಾವನಾತ್ಮಕವಾಗಿ ವಿಷಯವನ್ನು ತಿರಸ್ಕರಿಸದೆ .ಈ ವಿಷಯದ ಬಗ್ಗೆ ಚಚೆ೯ಯಾಗಬೇಕು . ಉತ್ತರ ಕನಾ೯ಟಕಕ್ಕೆ ಅನ್ಯಾಯವಾಗಿದೆ ಅನ್ನುವದನ್ನು ಮರೆಯಬಾರದು.
Arvind Patil
He wants to be a KCR of Karnataka...
ಗಿರೀಶ್ ಅಡಿಗ
ಭಾಷಾವಾರು ರಾಜ್ಯ ವಿಂಗಡಣೆ ಮಾಡಿ ಸರಕಾರವೆ ಪ್ರಾರಂಭದಲ್ಲೆ ತಪ್ಪು ಮಾಡಿದೆ. ಜನ ಭವಿಷ್ಯಕ್ಕೆ ಇಂಗ್ಲೀಷ್ ಶಿಕ್ಷಣ ವ್ಯಾಮೋಹಿಗಳು. ಪ್ರತಿಷ್ಟೆ, ಜಗಳಕ್ಕೆ ಮಾತ್ರ ರಾಜ್ಯ ಭಾಷೆ, ಮಾತ್ರ್ ಭಾಷೆ ಉಪಯೋಗಿಸುವುದು. ಇದು ಕನ್ನಡಿಗರು ಮಾತ್ರ ವಲ್ಲ. ಎಲ್ಲ ಭಾಷಿಗರು ಹೀಗೆ..
ಆಡಳಿತ ಅನುಕೂಲತೆಗಾಗಿ ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ತಮಿಳು ನಾಡು, ಕೇರಳ, ಉ.ಪ್ರ. ರಾಜಸ್ಥಾನ, ಒರಿಸ್ಸಾ, ಬಂಗಾಲ, ಅಸ್ಸಾಂ, ಕಾಶ್ಮೀರ, ಗುಜರಾತ್ ವಿಭಜನೆ ಆದರೆ ಕನ್ನಡಿಗರು ಒಪ್ಪಿಕೊಳ್ಳಬೇಕಾಗುತ್ತದೆ. ಅಂತಹ ಸಾದ್ಯತೆ ತಳ್ಳಿ ಹಾಕುವಂತಿಲ್ಲ.
Agasi Ravi
Yes. I support to katti. Y yake nauvu ivarige support madabaradu. Yella development blore matte Mysore ge maatra seemita agbekaa... Hydrabad Karnataka Uttar Karnataka develop agodu bedva.. Naavua galu muchikondu nodata irabekh..
Girish Kumar
ಬರೀ ಬೆಂಗಳೂರು ಅಭಿವ್ರದ್ದಿ ಆಗ್ತಾ ಇದೆ ಅಂತ ತಿಳಿದುಕೂಂಡಿರುವ ಎಲ್ಲರೂ ಒಮ್ಮೆ ಬಂದು ನೋಡಿ ಬೆಂಗಳೂರಿನ ಹತ್ತಿರ ಇರುವ ಸಾಸಲು, ಆರೂಡಿ , ಮುಂತಾದ ಹಲವು ದೂಡ್ಡಪ್ರದೇಶ ಗಳಲ್ಲಿ ಇಂದಿಗೂ ನೀವು ತಿಳಿದುಕೂಂಡಿರುವ ಅಭಿವೃದ್ಧಿಯ ದರ್ಶನ ಆಗಿಲ್ಲ ಸ್ವಾಮಿ, ಒಂದು ಆಸ್ಪತ್ರೆಗೆ ಹೋಗಬೇಕು ಅಂದರೆ ಕಲ್ಲು ಮಣ್ಣುಗಳ ಹೊಂಡಗಳನ್ನು ಸಾಗಬೇಕು , ಅಷ್ಟರಲ್ಲಿ ಪ್ರಾಣವೇ ಪರಾರಿಯಾಯಿತು ಆಗಿವೆ, ನಾನು ವಾಸಿಸುವ ದೊಡ್ಡಬಳ್ಳಾಪುರ ಹಾಗು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಡಿಯಲು ನೀರಿಲ್ಲ ಸ್ವಾಮಿ, ಬಿಂದಿಗೆ ನೀರು 5ರೂಪಾಯಿಗೆ ಕರೀದಿಸಿ ಕೂಲ್ಲಿರಾಷ್ಟ್ರಗಳಲ್ಲಿ ಉಪಯೋಗಿಸುವ ತರಹ ಬಳಸುತ್ತಾರೆ ಇದ್ದಾರೆ ಜನ.1500 ಅಡಿ ಕೊರೆದರೂ ಸಿಗದ ನೀರು, ಸಿಕ್ಕರೆ ವಿಷಪೂರಿತ, ಕುಡಿದು ಭಯಾನಕ ಕಾಯಿಲೆಗಳಿಗೆ ತುತ್ತಾದ ಪಾಪದ ಜನ.ರಾಜ್ಯದ ಒಟ್ಟು ಆದಾಯ ದಲ್ಲಿ 80% ಬರೀ ಬೆಂಗಳೂರು ಕಾಣಿಕೆ ಕೊಡುತ್ತದೆ. ನಮ್ಮ ದಕ್ಷಿಣ ಕರ್ನಾಟಕದ ಕೆರೆಗಳು , ಜಲಾಶಯಗಳು , ದೂಡ್ಡರಸ್ತೆಗಳು, ಮುಂತಾದವುಗಳು ಮೃಸೂರು ಮಹಾರಾಜರ ಉಧಾರ ರಾಜ್ಯಾಡಳಿತದಿಂದ ಸಿಕ್ಕಂತಹ ಬಳುವಳಿಗಳು.ನಮ್ಮ ರಾಜ್ಯ ಓಡೆಯುವ ಜನ ನಿಜಕ್ಕೂ ಕನ್ನಡಿಗರಲ್ಲ.ಅವರ ನೀಚತನಕ್ಕೆ ದಿಕ್ಕಾರವಿರಲಿ.ಉತ್ತರ ಕರ್ನಾಟಕದ ಘಟಾನುಗಟಿ ನಾಯಕರು ರಾಜ್ಯ ಆಳಿದ್ದಾರೆ, ಅವರನ್ನು ಒಮ್ಮೆ ಕೇಳ್ರೀ ಯಾಕೆ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿಯೈ ಸುಳಿಯಲಿಲ್ಲ ಅಂತಾ.ಬೆಂಗಳೂರಿನ ಭವ್ಯ 5ಸ್ಟಾರ್ ಹೋಟೆಲ್ ಗಳಲ್ಲಿ ಮಜಾ ಉಢಾಯಿಸುವ ನಿಮ್ಮ ನಾಯಕರನ್ನು ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಮಯ ಜನರಿಗೋಸ್ಕರ ಉಪಯೋಗಿಸುವ ಬುದ್ಧಿ ಹೇಳಿ ಬುದ್ಧಿವಂತರಾದ ನೀವು.
Santhosh Kumar
If the partition happens, north state will take another 100 years to stebilize, because the culprit senior politicians will cone to rule naturally and they need to grab all d resources as early as possible and they have the responsibility to store that for 10 generations for their own family. It s very difficult to come up for north karnataka without south, almost the job opportunities, reputed universities are in south only and the main state income coming from south, if the partions happens and south government may not allow north students , employees , bussiness people to south then, what s d position of them. If we speak about anything we should think 100 times, we are not for individuality, we are for all.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


