ನಾಳೆಯಿಂದ ಬೆಂಗಳೂರು ಸಾಹಿತ್ಯೋತ್ಸವ

ಬೆಂಗಳೂರು: ಹೆಸರಾಂತ ಸಾಹಿತಿಗಳ ಸಮಾಗಮದ ವೇದಿಕೆ ಎಂದೇ ಖ್ಯಾತಿ ಪಡೆದ ಬೆಂಗಳೂರು ಸಾಹಿತ್ಯೋತ್ಸವಕ್ಕೆ ಸಿಲಿಕಾನ್ ಸಿಟಿ ಮತ್ತೊಮ್ಮೆ ಸಾಕ್ಷಿಯಾಗುತ್ತಿದೆ.
ಎಲೆಕ್ಟ್ರಾನಿಕ್ ಸಿಟಿಯ ವೇಲಾಂಕಣಿ ಟೆಕ್ ಪಾರ್ಕ್ನಲ್ಲಿರುವ ಕ್ರೌನ್ ಪ್ಲಾಜಾ ಇದಕ್ಕೆ ವೇದಿಕೆ ಆಗುತ್ತಿದೆ.
ಸೆ.26ರಿಂದ 28ರವರೆಗ ಸಾಹಿತ್ಯೋತ್ಸವ ನಡೆಯಲಿದೆ. ಈ ಬಾರಿಯ ಸಾಹಿತ್ಯೋತ್ಸವದಲ್ಲಿ ಈಶಾನ್ಯ ಭಾಗ ಪ್ರಮುಖ ಆಕರ್ಷಣೆ ಆಗಿದೆ. ಇತ್ತಿಚೆಗಷ್ಟೇ ನಿಧನರಾದ ಹಿರಿಯ ಸಾಹಿತಿ ಡಾ.ಯು.ಆರ್ ಅನಂತಮೂರ್ತಿ ಅವರಿಗೆ ಸಾಹಿತ್ಯೋತ್ಸವವನ್ನು ಅರ್ಪಿಸಲಾಗಿದೆ.
ದೇಶದ ಪೂರ್ವ ಮತ್ತು ಈಶಾನ್ಯ ರಾಜ್ಯಗಳ ಸಾಹಿತ್ಯ ಮತ್ತು ಸಾಮಾಜಿಕ ಸ್ಥಿತಿಗತಿಗಳಲ್ಲದೆ, ಲಿಂಗ ತಾರತಮ್ಯದ ಸಮಸ್ಯೆಗಳು, ಎಲ್ಜಿಬಿಟಿ ಹಕ್ಕುಗಳು, ಪ್ರವಾಸ ಬರಹ, ದಲಿತ ಸಾಹಿತ್ಯ, ಆಸ್ಟ್ರೇಲಿಯಾದ ಮೂಲ ನಿವಾಸಿ ಬರಹಗಳು, ಕನ್ನಡ ಸಾಹಿತ್ಯ, ಭಾರತೀಯ ಭಾಷೆಗಳ ಪರಿಸ್ಥಿತಿ, ಮಾಧ್ಯಮದ ನೈತಿಕತೆ, ಸಂಗೀತ ಕ್ಷೇತ್ರದಲ್ಲಿನ ಸಾಧನೆಗಳು, ಮಕ್ಕಳ ಸಾಹಿತ್ಯದ ಜೊತೆಗೆ ಪ್ರೀತಗೀತಿ ಇತ್ಯಾದಿ ಸಂಗತಿಗಳ ಮೇಲೆ ಸಾರಿತ್ಯೋತ್ಸವ ಬೆಳಕು ಚೆಲ್ಲಲಿದೆ.
ಈ ಬಾರಿ ದೇಶ, ವಿದೇಶಗಳಿಂದ 150 ಹೆಸರಾಂತ ಸಾಹಿತಿಗಳು ಭಾಗವಹಿಸುತ್ತಿದ್ದಾರೆ. ಸಾಹಿತ್ಯ ಚರ್ಚೆಗಳ ಜೊತೆಗೆ ಮಕ್ಕಳ ಕೂಟವನ್ನೂ ಆಯೋಜಿಸಲಾಗಿದೆ. ಸಾಕ್ಷ್ಯ ಚರ್ಚೆಗಳ ಜೊತೆಗೆ ಮಕ್ಕಳ ಕೂಟವನ್ನೂ ಆಯೋಜಿಸಲಾಗಿದೆ.
ಸಾಕ್ಷ್ಯ ಚಿತ್ರಗಳ ಪ್ರದರ್ಶನವಿದೆ. ಗಾಯಕಿಯರಾದ ಬಾಂಬೆ ಜಯಶ್ರೀ, ಶುಭಾ ಮುದ್ಗಲ್ ಸಂಗೀತ ರಸದೌತಣ ಉಣಬಡಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


