

ಬೆಂಗಳೂರು: ಸಚಿವ ಸಂಪುಟ ಪುನಾರಚನೆ ಸತ್ಯ. ಆದರೆ, ಶನಿವಾರ ದೆಹಲಿಗೆ ಹೋಗುತ್ತಿರುವುದು ಈ ಕಾರಣಕ್ಕಲ್ಲ. ಈ ಸಂಬಂಧ ಅಲ್ಲಿ ಯಾವುದೇ ಚರ್ಚೆಗಳೂ ನಡೆಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, `ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರು ದೆಹಲಿಯಲ್ಲಿ ಶನಿವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ಸಭೆ ಕರೆದಿೀದ್ದಾರೆ. ಈ ಸಭೆಗೆ ಆಹ್ವಾನಿತನಾಗಿ ಹೋಗುತ್ತಿದ್ದೇನೆಯೇ ವಿನಾ ಯಾವುದೇ ರಾಜಕೀಯ ಚಟುವಟಿಕೆಗೆ ಅಲ್ಲ ಎಂದು ಹೇಳಿದರು.
ಬೆಂಗಳೂರಿನ ಹಾಸ್ಟೆಲ್‍ನಲ್ಲಿ ಗುಂಡಿನ ದಾಳಿಗೆ ಮೃತಪಟ್ಟ ವಿದ್ಯಾರ್ಥಿನಿ ಗೌತಮಿ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು. ಈ ಪ್ರಕರಣದಲ್ಲಿ ತಮಗೆ ನ್ಯಾಯ ಸಿಗಬೇಕು ಎಂದು ಆಕೆಯ ಪೋಷಕರು ನನ್ನನ್ನು ಭೇಟಿ ಮಾಡಿ ಕೋರಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ನಾನು ಈಗಾಗಲೇ ತನಿಖೆಗೆ ಆದೇಶಿಸಿದ್ದೇನೆ. ನ್ಯಾಯ ಖಂಡಿತ ದೊರಕುತ್ತದೆ. ಅವರು ಯಾವುದೇ ಪರಿಹಾರವನ್ನು ಸರ್ಕಾರದ ವತಿಯಿಂದ ಅಪೇಕ್ಷಿಸಿಲ್ಲ ಎಂದು ತಿಳಿಸಿದ ಸಿಎಂ, ಈ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿರುವ ಶಿರಿಷಾ ಎಂಬ ವಿದ್ಯಾರ್ಥಿನಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.