

ಬೆಂಗಳೂರು: ಮೇಕೆದಾಟು ಅಣೆಕಟ್ಟು ಯೋಜನೆಗೆ ಅಡ್ಡಿಪಡಿಸುತ್ತಿರುವ ತಮಿಳುನಾಡಿನ ಧೋರಣೆ ವಿರೋಧಿಸಿ ಏ.18ರಂದು ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ ಕರೆ ನೀಡಿರುವ `ಕರ್ನಾಟಕ ಬಂದ್'ಗೆ ರಾಜ್ಯಾದ್ಯಂತ ನಾನಾ ಸಂಘಟನೆ ಹಾಗೂ ಸಂಘ ಸಂಸ್ಥೆಗಳು ವ್ಯಾಪಕ ಬೆಂಬಲ ವ್ಯಕ್ತಪಡಿಸಿದೆ.
ಅಂದು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೂ ರಾಜ್ಯಾದ್ಯಂತ ಬಂದ್ ಆಚರಿಸಲಾಗುವುದು. ಅಗತ್ಯ ಸೇವೆಗಳಾದ ಬಸ್, ಆಟೋ, ರೈಲು ಸಂಚಾರಗಳಲ್ಲಿ ಅಂಗಡಿ ಮುಂಗಟ್ಟುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಏ.18ರಂದು ಮುಂಜಾನೆ ಟೌನ್‍ಹಾಲ್‍ನಿಂದ ಆರಂಭವಾಗುವ ಮೆರವಣಿಗೆಯಲ್ಲಿ 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಕೇವಲ ಮೇಕೆದಾಟು ಯೋಜನೆ ಮಾತ್ರವಲ್ಲದೇ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ, ಕೃಷ್ಣ ಯೋಜನೆ, ಬೆಳಗಾವಿ ಅಭಿವೃದ್ಧಿಗೆ ವಿಶೇಷ ಯೋಜನೆ, ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ, ವಿದ್ಯುತ್ ಸಂಪರ್ಕದ ಹೆಸರಲ್ಲಿ ಕೊಡಗಿನ 2 ಲಕ್ಷ ಮರಗಳ ನಾಶ, ಕಳಸಾ ಬಂಡೂರಿ ಯೋಜನೆ ಮತ್ತು ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ರಾಜ್ಯ ಬಂದ್‍ಗೆ ಕರೆ ನೀಡಿರುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಇಂದು ಮೆರವಣಿಗೆ: ಏ.15ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಿಂದ ಬಂದ್‍ಗೆ ಬೆಂಬಲಿಸುವಂತೆ ಮೆರವಣಿಗೆ ಏರ್ಪಡಿಸಲಾಗಿದೆ. ಮೈಸೂರು ಬಾಂಕ್ ವೃತ್ತದಿಂದ ಅವೆನ್ಯೂ ರಸ್ತೆ-ಚಿಕ್ಕಪೇಟೆ, ಬಳೇಪೇಟೆ, ಮಾರುಕಟ್ಟೆ, ಜಯನಗರ, ಗಾಂಧೀಬಜಾರ್, ಕೋರಮಂಗಲ ಸೇರಿದಂತೆ ವಿವಿಧ ಪ್ರದೇಶದಲ್ಲಿ ಮೆರವಣಿಗೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಹಿಟ್ಲರ್ ಸಂಸ್ಕೃತಿ: ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಮಾತನಾಡಿ, ತಮಿಳುನಾಡು ಪದೇ ಪದೇ ಕರ್ನಾಟಕದವರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುವ ಮೂಲಕ ಹಿಟ್ಲರ್ ಸಂಸ್ಕೃತಿ ಪ್ರದರ್ಶಿಸುತ್ತಿದೆ. ಕರ್ನಾಟಕ ನೆಲದಲ್ಲಿ ಯೋಜನೆ ಕೈಗೊಂಡರೆ ತಮಿಳುನಾಡು ವಿರೋಧಿಸುತ್ತಿರುವುದು ಸರಿಯಲ್ಲ. ಮೇಕೆದಾಟು ಯೋಜನೆಗೆ ರಾಜ್ಯದಿಂದ ಆಯ್ಕೆಯಾದ ಸಂಸದರು ಬೆಂಬಲ ನೀಡಬೇಕು. ಅದು ಆಗದಿದ್ದಲ್ಲಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಯಣ್ಣ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್, ನಟ ಪ್ರೇಮï ಭಾಗವಹಿಸಿದ್ದರು.
ಬಂದ್ ಸಮಯ
ಏ.18ರಂದು ಬೆಳಿಗ್ಗೆ 6 ರಿಂದ ಸಂಜೆ 6ರವರಗೆ
ಯಾವುದಕ್ಕೆ ರಿಯಾಯಿತಿ?
ಹಾಲು ಸರಬರಾಜು, ವೈದ್ಯಕೀಯ ಸೌಲಭ್ಯ, ಔಷಧ ಅಂಗಡಿ, ಆ್ಯಂಬುಲೆನ್ಸ್.
ಯಾರ ಬೆಂಬಲ?
ಚಲನಚಿತ್ರ ವಾಣಿಜ್ಯ ಮಂಡಳಿ, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ ಮತ್ತು ರಾಜ್ ಕುಟುಂಬ, ಕನ್ನಡ ರಕ್ಷಣಾ ವೇದಿಕೆ, ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ರಾಜ್ಯ ಸರ್ಕಾರದ ನೌಕರರ ಸಂಘ, ಲಾರಿ ಮಾಲಿಕರ ಸಂಘ, ಟೆಂಪೋ ವಾಹನ ಸಂಘ, ವಕೀಲರ ಸಂಘ, ರಾಜ್ಯ ಒಕ್ಕಲಿಗರ ಸಂಘ, ರೈತ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಸಂಘ, ಕೇಬಲ್ ಆಪರೇಟರ್‍ಗಳ ಸಂಘ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಲಿ.