

ಬೆಂಗಳೂರು: ಕಲಬುರಗಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಕಡೆ ಈಗ ಪೆಟ್ರೋಲ್, ಡೀಸೆಲ್ ಬರ ಕಾಣಿಸಿಕೊಂಡಿದೆ. ರಾಯಚೂರು, ಯಾದಗಿರಿ, ಬೀದರ್, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲೂ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಪೆಟ್ರೋಲ್ ಬಂಕ್‍ಗಳ ಮುಂದೆ ವಾಹನಗಳ ಸಾಲು ಕಳೆದೊಂದು ವಾರದಿಂದ ಮಾಮೂಲಿ ಎಂಬಂತಾಗಿದೆ. ಇದರ ಪರಿಣಾಮ ಅಗತ್ಯ ವಸ್ತುಗಳ ಪೂರೈಕೆ ಮೇಲೂ ಆಗುತ್ತಿದೆ. ಮಂಗಳೂರು ರಿಫೈ ನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‍ಪಿಎಲ್) ತಾಂತ್ರಿಕ ಕಾರಣಗಳಿಂದ ಒಂದು ತಿಂಗಳಿಂದ ಇಂಧನ ಪೂರೈಕೆ ಮಾಡುವುದನ್ನೇ ಸ್ಥಗಿತಗೊಳಿಸಿದೆ. ಇದರಿಂದಾಗಿ ಈ ಸಮಸ್ಯೆ ಸೃಷ್ಟಿಯಾ ಗಿದೆ ಎನ್ನಲಾಗಿದೆ. ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಸದ್ಯಗೋವಾದಮೂಲಕಇಂಧನಪೂರೈಕೆಗೆವ್ಯವಸ್ಥೆ ಮಾಡಲಾಗಿದ್ದರೂ ಈ ಜಿಲ್ಲೆಗಳಲ್ಲಿ ಬೇಡಿಕೆಯಿರುವಷ್ಟು ಇಂಧನ ಸಿಗುತ್ತಿಲ್ಲ ಎನ್ನಲಾಗುತ್ತಿದೆ.