ಐವರು ರೈತರ ಸಾವು

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದ್ದು, ಸೋಮವಾರವೂ ಐವರು ರೈತರು ಸಾವಿಗೆ ಶರಣಾಗಿದ್ದಾರೆ. ಹೊಳಲ್ಕೆರೆ ತಾಲೂಕಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದ್ದು, ಸೋಮವಾರವೂ ಐವರು ರೈತರು ಸಾವಿಗೆ ಶರಣಾಗಿದ್ದಾರೆ. ಹೊಳಲ್ಕೆರೆ ತಾಲೂಕಿನ ರಂಗಾಪುರದ ಕುಬೇಂದ್ರನಾಥ (65) ಲಕ್ಷಾಂತರ ಸಾಲ ಮಾಡಿದ್ದರು. ಈ ನಡುವೆ ಬೋರ್‍ವೆಲ್ ಬತ್ತಿದ್ದರಿಂದ ತೋಟ ಒಣಗಲಾರಂಭಿಸಿತ್ತು. ಹೀಗಾಗಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.ಬಂಗಾರಪೇಟೆ ತಾಲೂಕಿನ ಚಿಕ್ಕವಲಗವಾದಿ ಗ್ರಾಮದಲ್ಲಿ ನೇಣಿಗೆ ಕೊರಳೊಡ್ಡಿದ ರೈತ ಆನಂದ್(32) ಕೊರೆಸಿದ್ದ ಕೊಳವೆಬಾವಿ ವಿಫಲವಾಗಿತ್ತು. ಅಲ್ಲದೆ ಬೆಳೆ ಬೆಳೆಯಲು ರು. 2 ಲಕ್ಷ ಸಾಲ ಮಾಡಿದ್ದರು. ಶಿರಹಟ್ಟಿ ತಾಲೂಕಿನಮಾಚೇನಹಳ್ಳಿ ಗ್ರಾಮದ ರೈತ ಮಹಾಂತೇಶ ಶಂಕ್ರಪ್ಪ ಮೇಟಿ (30) ನಾಲ್ಕು ಲಕ್ಷಕ್ಕೂ ಮಿಗಿಲಾಗಿ ಸಾಲ ಹೊಂದಿ ದ್ದರು. ಮಳೆ ಇಲ್ಲದ ಹಿನ್ನೆಲೆಯಲ್ಲಿ ಬೆಳೆ ನಾಶವಾಗಿತ್ತು. ಹೀಗಾಗಿ ವಿಷ ಕುಡಿದು ಪ್ರಾಣ ಬಿಟ್ಟಿದ್ದಾರೆ. ಹಿರಿಯೂರು
ತಾಲೂಕು ಧರ್ಮಪುರ ಹೋಬಳಿಯ ಕೂಡ್ಲಹಳ್ಳಿ ಗ್ರಾಮದ ಪಾರ್ಥ-ಪ್ರಭು (45) ಸಾಲ ಬಾಧೆಯಿಂದ ನೇಣಿಗೆಶರಣಾಗಿದ್ದಾರೆ. ಬೆಳೆ ವೈಫಲ್ಯ ಮತ್ತು ಸಾಲ ಬಾಧೆಯಿಂದ
ತನ್ನ ಜಮೀನಿನಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪಾವಗಡ ತಾಲೂಕಿನ ಸಮೀಪದ ಕನಿಕಲದಂಡೆ ಗ್ರಾಮದ ರೈತ ನರಸಿಂಹಮೂರ್ತಿ(40) ತಮ್ಮ ಜಮೀನಿನಲ್ಲಿದ್ದ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com