

ಬೆಂಗಳೂರು: ವಿ ಸ್ಕೂಲ್ ಎಂದೇ ಹೆಸರಾಗಿರುವ, 2007ರಲ್ಲಿ ಸ್ಥಾಪನೆಯಾದ ‘ಪ್ರಿನ್. ಎಲ್.ಎನ್. ವೆಲಿಂಗ್‍ಕರ್ ಇನ್ಸ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸಂಸ್ಥೆ’ಗೆ ಈ ಸಾಲಿಗೆ ಬೆಂಗಳೂರು ಮ್ಯಾನೇಜ್‍ಮೆಂಟ್ ಅಸೋಸಿಯೇಷನ್‍ನಿಂದ ಬಿ ಸ್ಕೂಲ್ ಆಫ್ ದ ಯಿಯರ್ ಗೌರವ ದೊರೆತಿದೆ.
ಈ ಪ್ರಶಸ್ತಿಯನ್ನು ಉದ್ಯಮ ಆಧಾರಿತವಾದ ಶೈಕ್ಷಣಿಕ ಸಾಧನೆಗಾಗಿ ಈಚೆಗೆ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್‍ನಲ್ಲಿ ನಡೆದ ಬಿಎಂಎ ಸದಸ್ಯತ್ವ ದಿನ ಮತ್ತು 62ನೇ ವಾರ್ಷಿಕೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಯಿತು. ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು.
ವೆಲಿಂಗ್‍ಕರ್ ಬೆಂಗಳೂರು ಕ್ಯಾಂಪಸ್‍ನ ನಿರ್ದೇಶಕ ಮತ್ತು ಡೀನ್ ಡಾ. ಅನಿಲ್‍ರಾವ್ ಪೈಲಾ ಮತ್ತು ಸಿಬ್ಬಂದಿ ತಂಡವು ಪ್ರಶಸ್ತಿಯನ್ನು ಸ್ವೀಕರಿಸಿತು. ವಿ ಸ್ಕೂಲ್, ಇವರ ನಾಯಕತ್ವದಲ್ಲಿ ಪ್ರತಿಷ್ಠಿತ ಎನ್‍ಬಿಎ, ಎಐಯು, ಎಸ್‍ಎಕ್ಯೂಎಸ್ ಮಾನ್ಯತೆಗೂ ಪಾತ್ರವಾಗಿದೆ.
ವೆಲಿಂಗ್‍ಕರ್-ಬೆಂಗಳೂರಿನ ವಿಶೇಷವೆಂದರೆ ಇದು, ಉದ್ಯಮ ಆಧಾರಿತವಾದ ಕಾರ್ಯಕ್ರಮಗಳು ಹಾಗೂ ನವೀನ ವಿನ್ಯಾಸ, ಕಾರ್ಯಕ್ರಮಗಳು, ಇ-ಬ್ಯುಸಿನೆಸ್ ಕಾರ್ಯಕ್ರಮಗಳನ್ನು ಆಧರಿಸಿರುವುದು. ಸಂಸ್ಥೆಯು ಅನೇಕ ಉದ್ಯಮ ಆಧಾರಿತ ಸಂಪರ್ಕ ಕಾರ್ಯಕ್ರಮಗಳನ್ನು ಅಂದರೆ ವಿ ಕೆಫೆ, ಎಚ್.ಆರ್. ಷೋಕೇಸ್ ಮತ್ತು ಇತರೆ ಸಾಂಘಿಕ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಅಲ್ಲದೆ, ನವೀನ ಪ್ರಯೋಗಾಲಯ, ಪ್ರೊಟೊಟೈಪ್ ಲ್ಯಾಬ್, ಕೇಸ್ ಸೆಂಟರ್, ಸಂಶೋಧನಾ ಕೇಂದ್ರ ಈ ಪೈಕಿ ಕೆಲವು. ಸಂಸ್ಥೆಯು ಈಗಾಗಲೇ ಇನ್ಫೋಸಿಸ್, ರಾಬಟ್ರ್ಸ್ ಬಾಷ್, ಟೈಟಾನ್, ಬೈಕಾನ್, ಡೆಲ್, ಇಎನ್‍ವೈ ಸೇರಿದಂತೆ ಕೆಲಸ ಸಂಸ್ಥೆಗಳನ್ನು ಒಳಗೊಂಡು ಸಂವಹನ ಕಾರ್ಯಗಳನ್ನು ಕೈಗೊಂಡಿದೆ.
ವೆಲಿಂಗ್‍ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಡೆವಲಪ್‍ಮೆಂಟ್ ಅಂಡ್ ರೀಸರ್ಚ್ ದೇಶದಲ್ಲಿ ಎರಡು ಕ್ಯಾಂಪಸ್‍ಗಳನ್ನು ಹೊಂದಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿ ಇವು ಕಾರ್ಯ ನಿರ್ವಹಿಸುತ್ತಿವೆ. ಮುಂಬೈ ಕ್ಯಾಂಪಸ್ 1977ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು, ಎಸ್‍ಪಿ. ಮಂಡಲಿ ಟ್ರಸ್ಟ್ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ದೇಶದಲ್ಲಿನ ಹಳೆಯ ಸಂಸ್ಥೆಯಾಗಿ ಗುರುತಿಸಿಕೊಳ್ಳುತ್ತಿದ್ದು, ಒಟ್ಟು 43 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.