ಮತಗಟ್ಟೆಗಳಲ್ಲಿ ಸ್ಮಾರ್ಟ್ ಟ್ಯಾಬ್ ಪ್ರಯೋಗ

ಮಹದೇವಪುರದಲ್ಲಿ 20 ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ `ಸ್ಮಾರ್ಟ್ ಟ್ಯಾಬ್ ಆಧರಿತ ಚುನಾವಣೆ ನಿರ್ವಹಣೆ ವ್ಯವಸ್ಥೆ' ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು; ಮಹದೇವಪುರದಲ್ಲಿ 20 ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ `ಸ್ಮಾರ್ಟ್ ಟ್ಯಾಬ್ ಆಧರಿತ ಚುನಾವಣೆ ನಿರ್ವಹಣೆ ವ್ಯವಸ್ಥೆ' ಅಳವಡಿಸಲು ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ. ಕಿಯೋನಿಕ್ಸ್ , ನೀಶೆಪೋರ್  ಟೆಕ್ನಾಲಜೀಸ್ ಹಾಗೂ ವಿ. ಮುಕುತಿ ಟೆಕ್ನಾಲಜೀಸ್ ಸಂಸ್ಥೆಗಳು ಸಹಯೋಗದಲ್ಲಿ ಮತಗಟ್ಟೆಗಳಲ್ಲಿ ಪೈಲಟ್ ಯೋಜನೆ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದ್ದವು. ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 20 ಮತಗಟ್ಟೆಗಳಲ್ಲಿ ಪೈಲಟ್ ಯೋಜನೆಗೆ ಅವಕಾಶ ನೀಡಬೇಕು.

 ಕೆಲಸ ಹೇಗೆ?
ಸೂಕ್ಷ್ಮ ಮತಗಟ್ಟೆಗಳಲ್ಲಿ ಸ್ಮಾರ್ಟ್ ಟ್ಯಾಬ್ ಅಳವಡಿಸಿದ್ದು, ಮತದಾನ ಪೂರ್ಣಗೊಳ್ಳುವವರೆಗೂ ವೀಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ವೀಡಿಯೋ ರೆಕಾರ್ಡ್ ಆಗುವ ಹಾಗೂ ನಿರ್ವಹಣೆ ಮಾಡುವ ಸಿಬ್ಬಂದಿ ಬೇರೆಡೆ ಇರುತ್ತಾರೆ. ಸಿಸಿಟಿವಿ ಕ್ಯಾಮೆರಾ ಮಾದರಿಯಲ್ಲಿ ಇದನ್ನು ಅಳವಡಿಸಲಾಗುತ್ತದೆ. ಒಂದು ದಿನಕ್ಕೆ ಮಾತ್ರ ಈ ವ್ಯವಸ್ಥೆ ಬೇಕಿದ್ದು, ಟ್ಯಾಬ್ ಅಳವಡಿಸುವುದರಿಂದ ಸಿಸಿಟಿವಿ ಕ್ಯಾಮೆರಾ ಬಳಸುವ ಅನಿವಾರ್ಯತೆ ನಿವಾರಣೆಯಾಗಿ ವೆಚ್ಚ ಕಡಿಮೆಯಾಗುತ್ತದೆ.

ಕಾಂಗ್ರೆಸ್ ಕಾರ್ಯ ಕರ್ತನ ಮೇಲೆ ಹಲ್ಲೆ
ಬೆಂಗಳೂರು: ಜೋಗುಪಾಳ್ಯದಲ್ಲಿ ಶುಕ್ರವಾರ ನಸುಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಚಂದ್ರಣ್ಣ (50) ಎಂಬುವರ ತಲೆಗೆ ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾರೆ. 5 ಗಂಟೆ ಸುಮಾರಿಗೆ ಚಂದ್ರಣ್ಣ ಯೋಗ ತರಗತಿಗೆ ತೆರಳುವಾಗ ಬೈಕ್‍ನಲ್ಲಿ ಬಂದ ಯುವಕರು, ಕಲ್ಲಿನಿಂದ ಹೊಡೆದಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೋಗುಪಾಳ್ಯ ವಾರ್ಡ್ ಬಿಜೆಪಿ ಅಭ್ಯರ್ಥಿ ಗೌತಮ್ ಬೆಂಬಲಿಗರು ಕೃತ್ಯದ ಹಿಂದೆ ಇದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕೆಲ ಕಾಲ ಪ್ರತಿಭಟನೆ ನಡೆಸಿದರು. ಆದರೆ, ಘಟನೆಗೂ, ನನಗೂ ಯಾವುದೇ ಸಂಬಂಧವಿಲ್ಲ ಎಂದು ಗೌತಮ್ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರಾಗಿದ್ದ ಚಂದ್ರಣ್ಣ, ಹಿಂದಿನ 4 ಚುನಾವಣೆಗಳಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.ಆದರೆ, ಈ ಬಾರಿಯೂ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದರು. ಇದರಿಂದ ಕುಪಿತಗೊಂಡ ಗೌತಮ್ ಹಲ್ಲೆ ಮಾಡಿಸಿದ್ದಾರೆ ಎಂದು ಚಂದ್ರಣ್ಣ ಅಳಿಯ ಗಿರೀಶ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com