

ಬೆಂಗಳೂರು: ಅಪರಾಧ ಸಂಭವಿಸಿದ ಸ್ಥಳಕ್ಕೆ ಮೊದಲು ಭೇಟಿ ನೀಡುವ ಪೊಲೀಸ್ ಸಿಬ್ಬಂದಿ ಆರಂಭದಲ್ಲೇ ಅನುಸರಿಸಬೇಕಾದ ಕ್ರಮಗಳ ಮಾರ್ಗದರ್ಶಿ ಸೂಚನೆಗಳು ಇನ್ನುಮುಂದೆ ಮೊಬೈಲ್ ಫೋನ್ ಆ್ಯಪ್‍ನಲ್ಲೇ ಲಭ್ಯವಾಗಲಿದ್ದು ಸ್ಥಳದಲ್ಲೇ ವಿವರ ಅಪ್‍ಡೇಟ್ ಮಾಡಬಹುದು.
ಸ್ಮಾರ್ಟ್ ಪೊಲೀಸಿಂಗ್ ವ್ಯವಸ್ಥೆಗಾಗಿ ಟಾರ್ಗೆಟ್ ಕಾರ್ಪೊರೇಷನ್ ಹಾಗೂ ಇಂಡಿ ಯಾನ ವಿಶ್ವವಿದ್ಯಾಲಯ ಜಂಟಿಯಾಗಿ `ಫಸ್ಟ್ ರೆಸ್ಪಾಂಡರ್ ಮೊಬೈಲ್ ಟ್ರೈನಿಂಗ್ ಅಪ್ಲಿಕೇಷನ್'
ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಿವೆ. ಪೊಲೀಸ್ ಸಿಬ್ಬಂದಿಗಾಗಿಯೇ ಅಭಿವೃದ್ಧಿಪಡಿಲಾಗಿರುವ ಆ್ಯಪ್‍ಗೆ ಗೃಹಸಚಿವ ಕೆ.ಜೆ. ಜಾರ್ಜ್ ಅವರು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಚಾಲನೆ ನೀಡಿದರು.
ದೇಶದಲ್ಲೇ ಮೊದಲು: ಈ ವೇಳೆ ಮಾತನಾಡಿದ ಜಾರ್ಜ್, ತಂತ್ರಜ್ಞಾನ ಬಳಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯ ಪೊಲೀಸ್ ಇಲಾಖೆ ಮೊಬೈಲ್ ಆ್ಯಪ್ ಬಳಕೆ ಮೂಲಕ ಮತ್ತೊಂದು ಹೊಸತನ್ನು ಅಳವಡಿಸಿಕೊಂಡಿದೆ. ಡಿಜಿಟಲ್ ಇಂಡಿಯಾ ಅಂಗವಾಗಿ ಪ್ರಧಾನಿಯವರು ದೇಶದ ಮೂರು ಠಾಣೆಗಳ ಪೈಕಿ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯನ್ನು
ಆಯ್ಕೆ ಮಾಡಿಕೊಂಡಿರುವುದು ಇದಕ್ಕೆ ನಿದರ್ಶನ. ಮೊರಕ್ಕೋದಲ್ಲಿ ತಲೆಮರೆಸಿಕೊಂಡಿದ್ದ ಬನ್ನಂಜೆ ರಾಜನನ್ನು ಪತ್ತೆ ಮಾಡಿ ಬಂಧಿಸಿ ಕರೆತರುವ ಅತ್ಯಂತ ಸೂಕ್ಷ್ಮ ಕೆಲಸವನ್ನು ರಾಜ್ಯ ಪೊಲೀಸರು ಅತಿ ಚಾಣಾಕ್ಷತದಿಂದ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಪೊಲೀಸರು ಮತ್ತಷ್ಟು ತಾಂತ್ರಿಕತೆ ಮೈಗೂಡಿಸಿಕೊಂಡು ನಾಗರೀಕರಿಗೆ ಹತ್ತಿರವಾಗುವ ಕೆಲಸ ಮಾಡಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದರು.
ಕೊಲೆ, ಮಹಿಳೆಯರ ವಿರುದ್ಧದ ಅಪರಾಧಗಳು, ಸರಗಳವು, ಕಳ್ಳತನ ಸೇರಿದಂತೆ ಯಾವುದೇ ಅಪರಾಧ ಕೃತ್ಯ ನಡೆದಾಗ ಘಟನಾ ಸ್ಥಳದಲ್ಲಿ ದೊರೆಯುವ ಭೌತಿಕ ಸಾಕ್ಷಗಳು,
ಸಂತ್ರಸ್ಥರು-ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ತನಿಖೆಗೆ ಪೂರಕವಾಗುತ್ತವೆ. ಹೀಗಾಗಿ ಇವುಗಳ ಸಂಗ್ರಹ ಕಾರ್ಯ ಕ್ರಮಬದ್ಧವಾಗಿರಬೇಕು. ಇದರಲ್ಲಿ ಸಿಬ್ಬಂದಿ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಅಪರಾಧದ ನೈಜ ಚಿತ್ರಣ ತನಿಖೆ ವೇಳೆ ಕೈತಪ್ಪಿ ಹೋಗಬಹುದು. ಅದರಿಂದ ನಿಜವಾದ ಆರೋಪಿ ಪಾರಾಗಲುಬಹು ದು. ಹೀಗಾಗಿ ಯಾವ ಮಾದರಿಯ ಅಪರಾಧಕ್ಕೆ ಯಾವ ರೀತಿಯಲ್ಲಿ ಸಾಕ್ಷ್ಯಗಳನ್ನು ಕಲೆ ಹಾಕಬೇಕು ಎಂಬ ಮಾಹಿತಿಯುಳ್ಳ ಆ್ಯಪ್ ರಚಿಸಲಾಗಿದೆ. ಪ್ರಾಯೋಗಿಕವಾಗಿ ಈ ಆ್ಯಪ್ ಕಾರ್ಯನಿರ್ವಹಿಸಲಿದೆ ಎಂದು ಟಾರ್ಗೇಟ್ ಇಂಡಿಯಾ ಮುಖ್ಯಸ್ಥ ಅರವಿಂದ ವರ್ಮಾಹೇಳಿದರು.
ಸಿಬ್ಬಂದಿ ಮೊದಲು ಘಟನೆಯ ವಿವರ, ಲಭ್ಯವಾದ ಸಾಕ್ಷ್ಯಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಬರೆದುಕೊಂಡು ಹಿರಿಯ ಅಧಿಕಾರಿಗಳಿಗೆ ತಿಳಿಸುತ್ತಿದ್ದರು. ಈಗ
ಮೊಬೈಲ್ ಆ್ಯಪ್‍ನಲ್ಲೇ ವಿವರಗಳನ್ನು ದಾಖಲು ಮಾಡಬಹುದು. ಅಧಿಕಾರಿಗಳು ಸಹ ಆ್ಯಪ್ ಬಳಸುವುದರಿಂದ ಶೀಘ್ರವೇ ಘಟ ನೆಯ ವಿವರಗಳು ಅವರು ಪರಿಶೀಲಿಸಬಹುದು. ಇದು ತನಿಖೆಗೆ ಅನುಕೂಲವಾಗಲಿ ದೆ ಎಂದು ಅವರು ವಿವರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್, ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಕೇಂದ್ರಗಳಎಸ್ಪಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಆ್ಯಪ್ ಬಳಕೆ ಹೇಗೆ?:
ಕಾನ್‍ಸ್ಟೇಬಲ್‍ಗಳು ತಮ್ಮ ಸ್ಮಾರ್ಟ್ ಫೋನ್‍ನಲ್ಲಿ ಪ್ಲೇಸ್ಟೋರ್ ಹೋಗಿ ಆ್ಯಪ್ ಡೌನ್‍ಲೋಡ್ ಮಾಡಬೇಕು. ನಂತರ ತಮ್ಮ ಹೆಸರು, ಹುದ್ದೆ, ಠಾಣೆ ಹೆಸರು, ಬ್ಯಾಡ್ಜ್ ಸಂಖ್ಯೆ ಹಾಗೂ ಇಲಾಖೆಯಿಂದ ನೀಡುವ ರಹಸ್ಯ ಸಂಖ್ಯೆಯನ್ನು ದಾಖಲಿಸಿ ಲಾಗಿನ್ ಆದಾಗ ಆ್ಯಪ್‍ನ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಅಪರಾಧ ಸ್ವರೂಪದ ಪಟ್ಟಿ ಇರುತ್ತದೆ.
ಕಳ್ಳತನ ಆಗಿದ್ದರೆ ಆ ಪಟ್ಟಿಯಲ್ಲಿ ಕಳ್ಳತನ ಪ್ರಕರಣವನ್ನು ಆಯ್ಕೆ ಮಾಡಬೇಕು. ಆಗ ಆ ಪ್ರಕರಣಕ್ಕೆ ಅನುಸರಿಸಬೇಕಾದ ಕ್ರಮಗಳು ಏನು? ವಿಚಾರಣೆ ಹೇಗೆ? ಎಂಬ ಮಾಹಿತಿ ಆ್ಯಪ್‍ನಲ್ಲಿ ಪ್ರಕಟವಾಗುತ್ತದೆ. ಸಿಬ್ಬಂದಿ ಅದಕ್ಕೆ ತಕ್ಕಂತೆ ಮಾಹಿತಿ ಪಡೆಯುತ್ತಾ ಅವುಗಳನ್ನು ಆ್ಯಪ್‍ನಲ್ಲಿ ದಾಖಲಿಸುತ್ತಾ ಹೋಗಬೇಕು. ಪೂರ್ಣಗೊಂಡ ನಂತರ ಸಬ್‍ಮಿಟ್ ಮಾಡಬೇಕು. ನಂತರ ಆ ಎಲ್ಲ ವಿವರ ಈ ಆ್ಯಪ್‍ನ ಡೆಟಾ ಸಂಗ್ರಹಕ್ಕಾಗಿ ಮಾಡಲಾಗಿರುವ ಸರ್ವರ್ ನಲ್ಲಿ ಸಂಗ್ರಹವಾಗುತ್ತವೆ. ಇದನ್ನು ಪೊಲೀಸ್ ಐಟಿ ವೆಬ್‍ಸೈಟ್‍ಗೆ ಸಂಪರ್ಕ ಕಲ್ಪಿಸುತ್ತಿರುವು ದರಿಂದ ಹಿರಿಯ ಅಧಿಕಾರಿಗಳು ವಿವರ ತಿಳಿದುಕೊಳ್ಳಬಹುದು.