

ಬೆಂಗಳೂರು: `ನಾವು ಅಸಹಿಷ್ಣು ಭಾರತದೆಡೆಗೆ ಸಾಗುತ್ತಿದ್ದೇವೆಯೇ ಸಹಿಷ್ಣು ಹಾಗೂ ಅಸಹಿಷ್ಣುತೆ ಕುರಿತ ಚರ್ಚೆಗೆ ವೇದಿಕೆಯಾಗಿದ್ದು `ಬೆಂಗಳೂರು ಸಾಹಿತ್ಯ ಉತ್ಸವ'ದ ಕೊನೆ ದಿನ.
ದೇಶದಲ್ಲಿ ಎಲ್ಲೆಡೆ ಕೇಳಿಬರುತ್ತಿರುವ ಅಸಹಿಷ್ಣುತೆ ನಿವಾರಣೆ ಹಾಗೂ ಅದಕ್ಕೆ ಪರಿಹಾರ ಡುಕೊಳ್ಳುವ ಬದಲು ಚರ್ಚೆ ರಾಜಕೀಯ ಕೆಸರೆರಚಾಟಕ್ಕೆ ನಾಂದಿಯಾಯಿತು. ಬಿಜೆಪಿ, ಕಾಂಗ್ರೆಸ್ ಮುಖಂಡರ ನಡುವೆ ಜಟಾಪಟಿಗೆ ವೇದಿಕೆಯಾಯಿತು.
ಧರ್ಮಶಾಸ್ತ್ರ, ಜಾತ್ಯತೀತತೆ, ನಾಗರಿಕತೆ ನಡುವಿನ ತರ್ಕಬದ್ಧ , ತಾರ್ಕಿಕ ಚಿಂತನೆ ಮತ್ತು ಕುರುಡು ನಂಬಿಕೆಗಳ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಸಚಿವ ದಿನೇಶ್ ಗುಂಡೂರಾವ್, ಹಾಗೂ ಖಂಡ ಸಂಬಿತ್ ಪಾತ್ರ ಅವರ ನಡುವಿನ ಚರ್ಚೆ, ಅಸಹಿಷ್ಣುತೆಗೆ ಉತ್ತರ ಹುಡುಕುವ ಬದಲು ಮಾತಿನ ಜಟಾಪಟಿಗೆ ನಾಂದಿಯಾಯಿತು.
ಹಿರಿಯ ವಿದ್ವಾಂಸ ಡಾ. ಎಂ.ಎಂ.ಕಲಬುರ್ಗಿ ಹಂತಕರನ್ನು ಸರ್ಕಾರ ಇದುವರೆಗೂ ಬಂಧಿಸಿಲ್ಲ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಅಲ್ಲಿ ಸೇರಿದ್ದ ಗಣ್ಯರು ಸರ್ಕಾರವನ್ನು ಆಗ್ರಹಿಸಿದರು. ಹೀಗೆ ಆರಂಭವಾದ ಚರ್ಚೆ ಪ್ರಧಾನಿ ಮೋದಿ, ಚರ್ಚ್ ದಾಳಿ, ಬಾಬ್ರಿ ಮಸೀದಿ ಧ್ವಂಸ, ದಾದ್ರಿ ಘಟನೆಗಳು ಚರ್ಚೆಗೆ ಗ್ರಾಸವಾದವು. ದೇಶದಲ್ಲಿ ಮರುಕಳಿಸುತ್ತಿರುವಂತಹ ಘಟನೆಗೆ ಆರ್ ಎಸ್ ಎಸ್ ಹಾಗೂ ಅದರ ಸಿದ್ಧಾಂತಗಳು ಕಾರಣ ಎಂಬ ಅಭಿಪ್ರಾಯಗಳು ವ್ಯಕ್ತವಾದವು.
ಪ್ರಧಾನಿ ಮೋದಿ ಅವರು ವಿದೇಶಗಳಿಗೆ ಹೋದಲೆಲ್ಲಾ ಕಾಂಗ್ರೆಸ್ ಪಕ್ಷವನ್ನು ಹೀಯಾಳಿಸುವುದು ಸರಿಯಲ್ಲ. ಇದರಿಂದ ತಮಗೆ ಮಾತ್ರವಲ್ಲ ದೇಶಕ್ಕೂ ಹಾನಿ. ಜನರಿಗೆ ಉತ್ತಮ ಸಂದೇಶ ನೀಡಬೇಕು. ದೇಶವನ್ನು ಹಾಗೂ ದೇಶವನ್ನು ಅಭಿವೃದ್ಧಿಯೆಡೆಗೆ ಡೊಯ್ಯುವ ಕೆಲಸ ಆಗಬೇಕು ಎಂದು ಕೆಲವರು ಆಗ್ರಹಿಸಿದರು.