ರಾಜಧಾನಿ ಮಕ್ಕಳ ಸಾಗಾಟಕ್ಕೆ ಹಾಟ್‍ಸ್ಪಾಟ್‍ವೇ?

ಸಿಲಿಕಾನ್ ಸಿಟಿ ಮಕ್ಕಳ ಕಳ್ಳಸಾಗಾಟದ ಕೇಂದ್ರವಾಗುತ್ತಿದೆಯೇ? ಹೌದು! ಇತ್ತೀಚಿಗೆ ನಡೆದ ಕೆಲವು ಪ್ರಕರಣಗಳು...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on: 

ಬೆಂಗಳೂರು: ಸಿಲಿಕಾನ್ ಸಿಟಿ ಮಕ್ಕಳ ಕಳ್ಳಸಾಗಾಟದ ಕೇಂದ್ರವಾಗುತ್ತಿದೆಯೇ? ಹೌದು!  ಇತ್ತೀಚಿಗೆ ನಡೆದ ಕೆಲವು ಪ್ರಕರಣಗಳು ಇದಕ್ಕೆ ಪುಷ್ಠಿ ನೀಡುವಂತಿವೆ. 

ಮಕ್ಕಳ ಕಳ್ಳಸಾಗಣೆ ಆರೋಪದ ಮೇಲೆ ಬೆಂಗಳೂರು ಮೂಲದ ಇನ್ಫೋಸಿಸ್‍ನ  ಮ್ಯಾನೇಜರ್ ಜೋಸ್ ಫೀನಾ ಅಲಿಯಾಸ್ ಜಾಸ್ಮಿನಾ ಎಂಬ ಮಹಿಳೆಯನ್ನು ಮಧ್ಯಪ್ರದೇಶ  ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ 1 ತಿಂಗಳ ಹಿಂದೆ ಕೇರಳ ಪೊಲೀಸರು ಮಕ್ಕಳ ಕಳ್ಳ  ಸಾಗಣೆ ತಂಡವನ್ನು ಪತ್ತೆ ಹಚ್ಚಿದ್ದರು. ಈ ಜಾಲದಲ್ಲಿ ಕರ್ನಾಟಕ ಮೂಲದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು.

ಈ  ಜಾಲ ಚಿಕ್ಕಮಕ್ಕಳನ್ನು ಅಪಹರಣ ಮಾಡಿ ವೇಶ್ಯಾವಾಟಿಕೆ ಅಡ್ಡೆಗೆ ಬಳಸಿಕೊಳ್ಳುತ್ತಿದ್ದರು  ಎಂದು ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಈ ಜಾಲದ ಹಿಂದೆ ಕರ್ನಾಟಕದಲ್ಲೂ ಸಕ್ರಿಯವಾಗಿದೆ ಎಂಬ ಅಂಶವನ್ನು ಹೊರಹಾಕಿದ್ದರು. ಆದರೆ, ಇತ್ತಿಚೀಗೆ   ಯಾವುದೇ ಮಕ್ಕಳ ಕಳ್ಳಸಾಗಣೆ ಪ್ರಕರಣಗಳ ಕಂಡು ಬಂದಿಲ್ಲ. ಬೆಂಗಳೂರು ಮಕ್ಕಳ ಕಳ್ಳ  ಸಾಗಣೆಗೆ ಹಾಟ್ ಸ್ಪಾಟ್ ಇರಬಹುದು. ಆದರೆ, ಇದನ್ನು ಕಂಡು ಹಿಡಿಯಲು ಗುಪ್ತಚರ ಇಲಾಖೆಯಲ್ಲಿ ದೊಡ್ಡ ದಂಡೆ ಇದೆ. ಕೆಲಸದಲ್ಲಿರುವ ದಂಪತಿ  ಅನೇಕ ಕಾರಣಗಳಿಗಾಗಿ ಬಾಲಕಾರ್ಮಿಕರನ್ನು ಬಾಡಿಗೆಗೆ ಪಡೆಯುತ್ತಾರೆ. ವರ್ಷ ಪೂರ್ತಿ ಬಾಲಕಾರ್ಮಿಕರು ಮಾಲೀಕರೊಂದಿಗೆ ಉಳಿಯುತ್ತಾರೆ. ಇವರಿಗೆ ನಗರ ಜೀವನಕ್ಕಿಂತ ಕಡಿಮೆ ವೇತನವನ್ನು ನೀಡುತ್ತಾರೆ ಎಂದು  ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳ ಕಳ್ಳಸಾಗಣೆ ಎಂಬುದು ದೊಡ್ಡ ಜಾಲ.  ಇದನ್ನ ಪತ್ತೆ ಮಾಡಲು ಬಹಳಷ್ಟು ಸಮಯಬೇಕಾಗುತ್ತದೆ. ಇದಕ್ಕೆ ಪೂರ್ವ ತಯಾರಿ ಅಗತ್ಯವಾಗಿದೆ. ಆದ್ದರಿಂದ ಫೆಬ್ರವರಿಯಲ್ಲಿ   ಈ ಬಗ್ಗೆ ಕಾರ್ಯಾಚರಣೆ ಕೈಗೊಳ್ಳುತ್ತೇವೆ. 
● ಕೃಪಾ ಆಳ್ವಾ, ಅಧ್ಯಕ್ಷರು, ಮಕ್ಕಳ ರಕ್ಷಣೆ ಮತ್ತು ಹಕ್ಕುಗಳ ಆಯೋಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com