

ಬೆಂಗಳೂರು: ಅನಿರೀಕ್ಷಿತ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಗುರುವಾರ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಅವರನ್ನು ವಜಾಗೊಳಿಸಿದೆ.
ಇದರೊಂದಿಗೆ ನಾಗರಾಜು ಕೆಎಂಎಫ್ ಅಧಿಕಾರ ಹಿಡಿದ ಕೇವಲ ಮೂರೇ ತಿಂಗಳಲ್ಲಿ ಹುದ್ದೆಯಿಂದ ಕೆಳಗಿಳಿಯುವಂತಾಗಿದೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ)
ಹುದ್ದೆಗೆ ಸರ್ಕಾರ ನೇಮಿಸಿದ್ದ ಹಿರಿಯ ಐಎಎಸ್ ಅಧಿಕಾರಿಯನ್ನು ನಾಗರಾಜು ಪುರಸ್ಕರಿಸದೆ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದ ಸಹಕಾರ ಇಲಾಖೆ ತ್ವರಿತವಾಗಿ ಅದಕ್ಕೆ ಉತ್ತರವನ್ನೂ ಪಡೆದಿತ್ತು. ಅಷ್ಟೇ ವೇಗವಾಗಿ ಹುದ್ದೆಯಿಂದ ವಜಾಗೊಳಿಸುವ ಆದೇಶವನ್ನೂ ಹೊರಡಿಸಿ ಪ್ರತ್ಯುತ್ತರ ನೀಡಿದೆ.
ಅಧಿಕಾರ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಅಧ್ಯಕ್ಷ ನಾಗರಾಜು ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ದಿಢೀರ್ ಆದೇಶ ಹೊರಡಿಸಿದೆ. ಅಧ್ಯಕ್ಷ ನಾಗರಾಜು ಇಲಾಖೆ ಕಾಯ್ದೆಯನ್ನು ಉಲ್ಲಂಘಿಸಿರುವುದಲ್ಲದೆ, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಆದ್ದರಿಂದ ಅವರನ್ನು ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷ ಸ್ಥಾನದಿಂದ
ವಜಾಗೊಳಿಸಲಾಗಿದೆ ಎಂದು ಸಹಕಾರ ಇಲಾಖೆ ಜಂಟಿ ನಿರ್ದೇಶಕರು ಆದೇಶಿಸಿದ್ದಾರೆ. ಕಳೆದೊಂದು ವಾರದಿಂದ ಎಂಡಿ ಹುದ್ದೆಯ ಹಗ್ಗಜಗ್ಗಾಟ ಮತ್ತು ಕುರ್ಚಿ ಕಟ್ಟಾಟ ಅಧ್ಯಕ್ಷರ ನಿರ್ಗಮನದೊಂದಿಗೆ ಅಂತ್ಯವಾಗಿದೆ.
ಸಹಕಾರ ಇಲಾಖೆ ಹೊರಡಿಸಿರುವ ಆದೇಶ ಶುಕ್ರವಾರ ವ್ಯವಸ್ಥಾಪಕ ನಿರ್ದೇಶಕರ ಕೈ ಸೇರಲಿದ್ದು, ನಂತರ ಅಧ್ಯಕ್ಷರು ಅಧಿಕಾರ ತ್ಯಜಿಸಬೇಕಾಗುತ್ತದೆ. ನಿಯಮದಂತೆ ಈಗ ಕೆಎಂಎಫ್ ಗೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಬೇಕಿದ್ದು, ಇನ್ನು 15 ದಿನಗಳ ಒಳಗಾಗಿ ಎಂಡಿ ಮಂಡಳಿಯ ನಿರ್ದೇಶಕರ ಸಭೆ ಕರೆಯಬೇಕಿದೆ. ಅದರಲ್ಲಿ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಬಳಿಕ ಸಹಕಾರ ಇಲಾಖೆ ಅಧಿಕಾರಿಗಳು ಚುನಾವಣೆ ನಡೆಸಲಿದ್ದು, ಅದರಲ್ಲಿ ಹೊಸ ಅಧ್ಯಕ್ಷರ ಆಯ್ಕೆಯೂ ನಡೆಯಲಿದೆ.
ಏನಿದು, ಏಕೆ ಹೀಗಾಯ್ತು? ಕೆಎಂಎಫ್ ಎಂಡಿ ಹುದ್ದೆಗೆ ಸರ್ಕಾರ ಐಎಎಸ್ ಅಧಿಕಾರಿ ಎಸ್.ಎನ್ ಜಯರಾಮ್ ಅವರನ್ನು ನೇಮಿಸಿತ್ತು. ಆದರೆ ಈ ಹಿಂದೆ ಇದೇ ಹುದ್ದೆ ಸಿಗಲಿಲ್ಲ ಎಂದು ಹೈಕೋರ್ಟ್‍ನಲ್ಲಿ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದರು. ಇದರಲ್ಲಿ ಜಯವನ್ನೂ ಸಾಧಿಸಿದ್ದರು. ಅದರಂತೆ ಕೆಎಂಎಫ್ ಅಧ್ಯಕ್ಷ ನಾಗರಾಜು, ರಾಮಲಿಂಗಾ ರೆಡ್ಡಿ ಅವರನ್ನು ಎಂಡಿ ಹುದ್ದೆ ವಹಿಸಿಕೊಳ್ಳಲು ಅವಕಾಶ ನೀಡಿದ್ದರು. ಆದರೆ ಸಹಕಾರ ಇಲಾಖೆ ಬುಧವಾರವಷ್ಟೇ ಅಧ್ಯಕ್ಷರಿಗೆ ನೋಟಿಸ್ ನೀಡಿ, ಸರ್ಕಾರ ನೇಮಿಸಿದ್ದ ಅ„ಕಾರಿಗೆ ಅವಕಾಶ ನೀಡದೆ ಆದೇಶ ಉಲ್ಲಂಘಿಸಿದ್ದೇಕೆ ಎಂದು ಪ್ರಶ್ನಿಸಿತ್ತು.
ಎಂಡಿ ಹುದ್ದೆಗೆ ಐಎಎಸ್ ಅಧಿಕಾರಿ ಎಸ್.ಎನ್ ಜಯರಾಮ್ ಕಾರ್ಯ ನಿರ್ವಹಿಸಲು ಅವಕಾಶ ನೀಡದಿರಲು ಕಾರಣ ಕೇಳಿತ್ತು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ನಾಗರಾಜು, ಕೆಎಂಎಫ್ ಎಂಡಿಯಾಗಿದ್ದ ರಾಮಲಿಂಗೇಗೌಡರನ್ನು ಪುನರ್ ನೇಮಿಸುವಂಂತೆ ಹೈಕೋರ್ಟ್ 2014ರ ನ.25ರಂದು ಆದೇಶಿತ್ತು. ಅದರಂತೆ ಮಹಾಮಂಡಳಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕೆಂದು ರಾಮಲಿಂಗೇಗೌಡರಿಗೆ ಎಂಡಿ ಹುದ್ದೆ ನೀಡಲಾಗಿದೆ. ಒಂದೊಮ್ಮೆ ಸರ್ಕಾರ ನೇಮಿಸಿದ್ದ ಜಯರಾಮï ಅವರನ್ನು ನೇಮಿಸಿದ್ದರೆ ಕೆಎಂಎಫ್ ಹೈಕೋರ್ಟ್ ಆದೇಶ ಉಲ್ಲಂಘಿಸಿದಂತಾಗುತ್ತಿತ್ತು. ಆದ್ದರಿಂದ ರಾಮಲಿಂಗೇಗೌಡರಿಗೆ ಹುದ್ದೆ ನೀಡುವುದು ಅನಿವಾರ್ಯ ಎಂದು ಉತ್ತರಿಸಿದ್ದರು. ಹೀಗಾಗಿ ಸಿಟ್ಟಿಗೆದ್ದ ಇಲಾಖೆ ವಜಾ ಆದೇಶ ಹೊರಡಿಸಿತ್ತು.