

ಬೆಂಗಳೂರು: ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮಕ್ಕೆ ಈಗ ಭಾರತೀಯರು ಲಗ್ಗೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ ಇಲಾಖೆ ನಗರದಲ್ಲಿ ತನ್ನ ವಾರ್ಷಿಕ ರೋಡ್ ಶೋ ಪ್ರಚಾರವನ್ನು ಅದ್ದೂರಿಯಾಗಿ ನಡೆಸಿತು.
ನಗರದ ಖಾಸಗಿ ಹೋಟೆಲ್ನಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮಕ್ಕೆ ಪೂರಕ ವಾದ ಸುಮಾರು 63 ಸಂಸ್ಥೆಗಳು ಭಾಗವಹಿಸಿ, ಅಲ್ಲಿನ ಪ್ರವಾಸೋದ್ಯಮ ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿ ದವು. ಟರ್ನ್ಬೆರ್ರಿ ಹೋಟೆಲ್, ಗ್ಯಾರಿ ಕಸ್ರ್ಟನ್ ಟ್ರಾವೆಲ್ ಆ್ಯಂಡ್ ಟೂರ್ಸ್, ಪಾರ್ಲ್ ವೆಲ್ಲಿಂಗ್ಟನ್ ಟೂರಿಸಂ, ಕಾಂಗೊ ವೈಲ್ಡ್ಲೈಫ್ ರ್ಯಾಂಚ್, ನೆಲ್ಸನ್ ಮಂಡೇಲಾ ಟೂರಿಸಂ, ಡಬಲ್ ಟ್ರೀ ಹಿಲ್ಟನ್ ಕೇಪ್ ಟೌನ್, ಆಫ್ರಿಕನ್ ಫ್ರೈಡ್ ಟೂರ್ಸ್, ಇನ್ ಸ್ಪಿರೇಷನ್ ಪ್ಲೆಸ್ ಹಾಗೂ ಲೂಕಿಂಬಿ ಸಫಾರಿ ಲಾಡ್ಜ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಇದಕ್ಕೆ ಸಾಕ್ಷಿಯಾದವು.
ಅಲ್ಲದೇ, ಎಕ್ಸ್ಟ್ರಾರ್ಡಿನರಿ, ತ್ಸೂಗೊಸನ್, ಬಿಯಾಂಡ್ ಮತ್ತು ಸನ್ ಇಂಟರ್ ನ್ಯಾಷನಲ್ನಂಥ ಸರಬರಾಜು ಸಂಸ್ಥೆ ಗಳು, ಈ ವರ್ಷ ಮತ್ತೆ ರೋಡ್ಶೋನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪ್ರಮುಖವಾಗಿ ಈ ಸಂಸ್ಥೆಗಳು, ದಕ್ಷಿಣ ಆಫ್ರಿಕಾ ಪ್ರವಾ ಸೋದ್ಯಮಕ್ಕೆ ಹೊರಡುವ ಭಾರತೀಯ ಪ್ರಜೆಗಳಿಗೆ, ಅಲ್ಲಿ ತಾವು ನೀಡುವ ವಿಶೇಷ ಆತಿಥ್ಯ ಕುರಿತು ಮಾಹಿತಿ ವಿನಿಮಯ ಮಾಡಿದವು. ಇದೇ ವೇಳೆ, ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮದ ಪರಿಸ್ಥಿತಿ ಮತ್ತು ಪ್ರಗತಿ ಕುರಿತು ಪ್ರವಾಸೋದ್ಯಮ ಇಲಾಖೆಯ ಮುಖ್ಯಸ್ಥೆ ಹನ್ನೆಲಿ ಸ್ಲಾಬರ್ ವಿವರ ನೀಡಿದರು. `ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮಕ್ಕೆ ಈಗ ಭಾರತವೇ ಪ್ರಮುಖ ಮಾರುಕಟ್ಟೆ.
ಪ್ರವಾಸೋದ್ಯಮ ಕ್ಕಾಗಿ ಪ್ರತಿ ವರ್ಷ ಅಲ್ಲಿಗೆ ಭೇಟಿ ನೀಡುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಾವೀಗ, ಭಾರತವನ್ನು ಹೆಚ್ಚು ಕೇಂದ್ರಿಕರಿಸಿ ದ್ದೇವೆ. ಅಲ್ಲಿ ಪ್ರವಾಸಕ್ಕೆ ಯೋಗ್ಯವಾಗಿರುವ ವೈಲ್ಡ್ ಲೈಫ್, ಸಫಾರಿ, ವೈಟ್ ಶಾರ್ಕ್ ಪಾರ್ಕ್ ಹಾಗೂ ವಿವಿಧ ಸಾಹಸ ತಾಣಗಳನ್ನು ಮತ್ತಷ್ಟು ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ. ಜತೆಗೆ, ಅಲ್ಲಿಗೆ ಪ್ರವಾಸಕ್ಕೆ ಹೊರ ಡುವ ಭಾರತೀಯರಿಗೆ ಲಭ್ಯವಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ, ಮಾರುಕಟ್ಟೆ ಸೃಷ್ಟಿಸುವ ಕಾರಣಕ್ಕೆ ಖಾಸಗಿ ಸಂಸ್ಥೆಗಳಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ ಎಂದು ಸ್ಲಾಬರ್ ತಿಳಿಸಿದರು.