

ಕನ್ನಡಪ್ರಭ ವಾರ್ತೆ, ಬೆಂಗಳೂರು: ಮಾರ್ಕೊಪೋಲೊ ಬಸ್ ಖರೀದಿ ಅವ್ಯವಹಾರಕ್ಕೆ ಕಾರಣರಾದ ಸಾರಿಗೆ ಇಲಾಖೆ ತಾಂತ್ರಿಕ ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈಸೂರು ನಗರ ಸಾರಿಗೆಯ 40 ಮತ್ತು ಬಿಎಂಟಿಸಿಯ 90 ಮಾರ್ಕೋಪೋಲೋ ಬಸ್‌ಗಳನ್ನು ಸ್ಕ್ಯಾ ಮಾಡುವುದಕ್ಕೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಸಂಸ್ಥೆಗೆ ವಿಪರೀತ ನಷ್ಟವಾಗುತ್ತಿದ್ದರಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.
ಇನ್ನು ಮುಂದೆ ಬಸ್ ಖರೀದಿ ಮಾಡುವ ಸಂದರ್ಭದಲ್ಲಿ 3 ತಿಂಗಳ ಕಾಲ ಟ್ರಯಲ್ ಸಂಚಾರ ನಡೆಸಿ ಚಾಲಕರು ಮತ್ತು ತಾಂತ್ರಿಕ ವಿಭಾಗದ ಸಲಹೆ ಪಡೆಯಲಾಗುವುದ. ತಾಂತ್ರಿಕ ವಿಭಾಗದ ಸಲಹೆ ಪಡೆಯಲಾಗುವುದು. ತಾಂತ್ರಿಕ ವಿಭಾಗದ ಸಲಹೆ ಪಡೆಯಲಾಗುವುದು.
ತಾಂತ್ರಿಕ ಸಮಿತಿ ನೀಡುವ ಸಲಹೆ ಕಡ್ಡಾಯ. ಈ ಹಿಂದೆ ಮಾರ್ಕೋಪೋಲೋ ಬಸ್ ಖರೀದಿ ಮಾಡುವಾಗ ತಾಂತ್ರಿಕ ಸಮತಿಯ ದೋಷದಿಂದ ಸಂಸ್ಥೆಗೆ ನಷ್ಟವಾಗಿದೆ. ಈ ಬಗ್ಗೆ ಅಗತ್ಯ ಬಿದ್ದರೆ ತನಿಖೆ ನಡೆಸುತ್ತೇವೆ ಎಂದರು.
ಇನ್ನು ಮುಂದೆ ಬಸ್ ಖರೀದಿ ಮಾಡುವ ಸಂದರ್ಭದಲ್ಲಿ 3 ತಿಂಗಳ ಕಾಲ ಟ್ರಯಲ್ ಸಂಚಾರ ನಡೆಸಿ ಚಾಲಕರು ಮತ್ತು ತಾಂತ್ರಿಕ ವಿಭಾಗದ ಸಲಹೆ ಪಡೆಯಲಾಗುವುದು. ತಾಂತ್ರಿಕ ವಿಭಾಗದ ಸಲಹೆ ಪಡೆಯಲಾಗುವುದು. ತಾಂತ್ರಿಕ ಸಮತಿ ನೀಡುವ ಸಲಹೆ ಕಡ್ಡಾಯ. ಈ ಹಿಂದೆ ಮಾರ್ಕೋಪೋಲೋ ಬಸ್ ಖರೀದಿ ಮಾಡುವಾಗ ತಾಂತ್ರಿಕ ಸಮಿತಿಯ ದೋಷದಿಂದ ಸಂಸ್ಥೆಗೆ ನಷ್ಟವಾಗಿದೆ. ಈ ಬಗ್ಗೆ ಅಗತ್ಯ ಬಿದ್ದರೆ ತನಿಖೆ ನಡೆಸುತ್ತೇವೆ ಎಂದರು.
ಸಾರಿಗೆ ಇಲಾಖೆಯ ಹಳೆ ನಿಯಮ ಬದಲಾಯಿಸಿ ಕೇಂದ್ರ ಸರ್ಕಾರ ಹೊಸ ಮದೂದೆ ಜಾರಿಗೆ ತರುತ್ತಿದೆ. ಈ ಬಗ್ಗೆ ಎಲ್ಲ ರಾಜ್ಯಗಳ ಅಭಿಪ್ರಾಯವನ್ನು ಕೇಳಲಾಗಿದೆ. ಆರ್‌ಟಿಓ ಖಾಸಗೀಕರಣ, ಕುಡಿದು ವಾಹನ ಚಾಲನೆ ಸೇರಿದಂತೆ ಹಲವು ವಿಚಾರಗಳ ನಿಯಮ ಬದಲಾವಣೆಯಾಗುತ್ತದೆ. ರಾಜ್ಯ ಸರ್ಕಾರ ಈಗಾಗಲೇ ತನ್ನ ಅಭಿಪ್ರಾಯ ತಿಳಿಸಿದೆ ಎಂದರು.
ಸಾರಿಗೆ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಮಾಡುತ್ತಿರುವ ಆರೋಪ ನಿರಾಧಾರ. ಈ ಬಗ್ಗೆ ಅವರ ಬಳಿ ಸೂಕ್ತ ದಾಖಲೆಗಳಿದ್ದರೆ ನೀಡಲಿ. ಅವರು ಹೇಳುವ ತನಿಖೆಯನ್ನೇ ಮಾಡುತ್ತೇವೆ ಎಂದು ಹೇಳಿದರು. ಬಿಬಿಎಂಪಿ ವಿಭಜನೆ ಸಂಬಂಧ ತಜ್ಞರ ಸಮತಿ ಇನ್ನೂ ತನ್ನ ಅಂತಿಮ ವರದಿಯನ್ನು ಸಲ್ಲಿಸಿಲ್ಲ. ಪಕ್ಷ ನೇಮಿಸಿರುವ ಸಮತಿ ಇನ್ನೊಂದು ವಾರದಲ್ಲಿ ತನ್ನ ವರದಿ ನೀಡುತ್ತದೆ. ಈ ವರದಿ ಆಧಾರದ ಮೇಲೆ ಬಿಬಿಎಂಪಿ ವಿಭಜನೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಆದರೆ ಇದೇ ಆಧಾರದ ಮೇಲೆ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವುದಿಲ. ಹಿಂದೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 3 ವರ್ಷ ಚುನಾವಣೆಯನ್ನು ಮುಂದೂಡಲಾಗಿತ್ತು.
ನಾವು ಆ ರೀತಿ ಮಾಡುವುದಿಲ್ಲ ಎಂದರು. ಪಕ್ಷದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕು ಎಂದು ಎದ್ದಿರುವ ಕೂಗಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕು. ಆದರೆ ಈ ಅವಧಿಗೆ ಸಿದ್ದರಾಮಯ್ಯನವರೇ ಮುಂದುವರಿಯುತ್ತಾರೆ ಎಂದರು.
160 ಖಾಸಗಿ ಬಸ್‌ಗಳ ಜಪ್ತಿ
ಬೆಂಗಳೂರು: ಪರವಾನಗಿ ಇಲ್ಲದೆ ನಿಯಮಬಾಹಿರವಾಗಿ ಸಂಚಿರಿಸುತ್ತಿದ್ದ ಹಾಗೂ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ 160 ಖಾಸಗಿ ಬಸ್‌ಗಳ ವಿರುದ್ಧ ರಾಜ್ಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ದೂರು ದಾಖಲಿಸಿ, ದಂಡ ವಿಧಿಸಿದ್ದಾರೆ. ಮಂಗಳವಾರ ನಗರದ ಮೈಸೂರು ರಸ್ತೆ, ನಾಯಂಡಹಳ್ಳಿ, ದೀಪಾಂಜಲಿ ನಗರ, ಮಾಗಡಿ ಮುಖ್ಯರಸ್ತೆ ಸೇರಿದಂತೆ ಹಲವೆಡೆ ನಡೆಸಿದ ದಾಳಿಯಲ್ಲಿ ಕಾನೂನು ಉಲ್ಲಂಘಿಸಿ ಸಂಚಿರುಸತ್ತಿದ್ದ 160 ಬಸ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಎಲ್ಲ ಬಸ್‌ಗಳು ಬಿಎಂಟಿಸಿ ಬಸ್‌ಗಳು ಸಂಚರಿಸುವ ಮಾರ್ಗದಲ್ಲಿ ಸಂಚರಿಸಿ, ಕಾನೂನು ಬಾಹಿರವಾಗಿ ಕಡಿಮೆ ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಹಠಾತ್ ದಾಳಿ ಮಾಡಿ ಪರವಾನಗಿ ಇಲ್ಲದ, ನಿಯಮ ಉಲ್ಲಂಘಿಸಿದ ಬಸ್ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ನರೇಂದ್ರ ಹೋಲ್ಕರ್ ತಿಳಿಸಿದ್ದಾರೆ.