

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಜೆ.ಪಿ.ನಗರದಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಲತಿಕಾ(24) ಮೃತರು. ಆರೋಪಿ ಅಮರ್‌ಸಿಂಗ್(27) ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಜೆ.ಪಿ.ನಗರ 7ನೇ ಹಂತ ಮುನಿರೆಡ್ಡಿ ಬಡಾವಣೆ 5ನೇ ಕ್ರಾಸ್‌ನಲ್ಲಿ ಟಿ.ಜದೀಶಯ್ಯ ಎಂಬವರು ಎರಡು ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದಾರೆ. ಅಲ್ಲಿ ಗಾರೆ ಕೆಲಸ ಮಾಡುತ್ತಿದ್ದ ದಂಪತಿ, ನಿರ್ಮಾಣ ಹಂತದ ಕಟ್ಟಡದ ನಿರ್ಮಿಸುತ್ತಿದ್ದಾರೆ. ಅಲ್ಲಿ ಗಾರೆ ಕೆಲಸ ಮಾಡುತ್ತಿದ್ದ ದಂಪತಿ, ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿಯೇ ಶೆಡ್ ಹಾಕಿಕೊಂಡು ವಾಸವಿದ್ದರು.
ಹೀಗಾಗಿ ಗುರುತಿನ ಚೀಟಿ ನೀಡುವಂತೆಗೆ ದಪಂತಿಗೆ ಮಾಲೀಕರು ಸೂಚಿಸಿದ್ದರು. ಇದಕ್ಕೆ ಅಮರ್‌ಸಿಂಗ್ ಹಿಂದೇಟು ಹಾಕಿದ್ದ. ಲತಿಕಾ ಇಬ್ಬರ ಗುರುತಿನ ಚೀಟಿಗಳನ್ನು ಮಾಲೀಕರಿಗೆ ನೀಡಿದ್ದಳು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿತ್ತು. ಸೋಮವಾರ ಸಂಜೆ 4.30 ಸುಮಾರಿಗೆ ಪತ್ನಿಯ ಹತ್ಯೆ ಮಾಡಿ ಪತಿ ಪರಾರಿಯಾಗಿದ್ದಾನೆ. ಸಹೋದ್ಯೋಗಿಗಳ ಮೂಲಕ ಘಟನೆ ಬೆಳಕಿಗೆ ಬಂದಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಬಿ.ಎಸ್.ಲೋಕೇಶ್‌ಕುಮಾರ್ ತಿಳಿಸಿದರು.