

ಹೊನ್ನಾಳಿ(ದಾವಣಗೆರೆ): ಅಸ್ಸಾಂ ಬಾಂಬ್ ಸ್ಫೋಟ ಸಂಬಂಧ ದಾವಣಗೆರೆಯ ಹೊನ್ನಾಳಿ ಪೊಲೀಸರು ಜೆಎಂಬಿ ಉಗ್ರ ಸಂಘಟನೆಯ ಓರ್ವ ಉಗ್ರನೊರ್ವನನ್ನು ಬಂಧಿಸಿದ್ದಾರೆ.
ಅಸ್ಸಾಂ ಸ್ಫೋಟದ ಬಳಿಕ ತಲೆ ಮರೆಸಿಕೊಂಡಿದ್ದ ಜಾಮಾಯಿತುಲ್ ಮುಜ್ಜಾಯಿದ್ದೀನ್ ಬಾಂಗ್ಲಾದೇಶ್(ಜೆಎಂಬಿ) ಸಂಘಟನೆಯ ಉಗ್ರ ಪಬನೂರ್ ಹುಸೇನ್ ಎಂಬಾತನನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ. ಪಬನೂರ್ ಹುಸೇನ್ ಕಳೆದ 15 ದಿನಗಳಿಂದ ದಾವಣಗೆರೆ ಶಿವಮೊಗ್ಗ ಹೆದ್ದಾರಿಯ ರಸ್ತೆ ಕಾಮಗಾರಿಯಲ್ಲಿ ಕೂಲಿಯಾಳಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಹೊನ್ನಾಳಿ ಪೊಲೀಸರು ಇಂದು ಕಾರ್ಯಾಚರಣೆ ನಡೆಸಿ ಉಗ್ರನನ್ನು ಬಂಧಿಸಿದ್ದು, ಆತನನನ್ನು ಹೊನ್ನಾಳಿ ಜೆಎಂಎಫ್‌ಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.