

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿಪೂರ್ವ ಕಾಲೇ ಜುಗಳಲ್ಲಿ ದ್ವಿತೀಯ ಪಿಯುಸಿ ದಾಖಲು ದಿನಾಂಕವನ್ನು ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯದ ಮೇರೆಗೆ ಜುಲೈ 15ರವರೆಗೆನ ದ್ವಿತೀಯ ಪಿಯುಸಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿ ಕೊಳ್ಳಲು ಕಾಲೇಜುಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಇಲಾಖೆ ತಿಳಿಸಿದೆ. ದಾಖಲಾತಿಗೆ ನಿಗದಿಪಡಿಸಿರುವ ಶುಲ್ಕಗಳೊಂದಿಗೆ ವಿದ್ಯಾರ್ಥಿ ಗಳಿಂದ ಅವರ ಹಾಜರಾತಿಯನ್ನು ಶೇ. 75ರಷ್ಟು ಕಾಯ್ದಿರಿಸಿಕೊಳ್ಳುವ ಕುರಿತು ಮುಚ್ಚಳಿಕೆ ಪಡೆದು ಕೊಂಡ ನಂತರವೇ ಕಾಲೇಜಿನ ಪ್ರಾಂಶುಪಾಲರು ನಿಯಮಾನುಸಾರ ದಾಖಲಾತಿ ಮಾಡಿ ಕೊಳ್ಳಲು ಸೂಚಿಸಲಾಗಿದೆ. ಶುಲ್ಕದೊಂದಿಗೆ ದಂಡ ಶುಲ್ಕ ರು.504, ವಿಶೇಷ ದಂಡ ಶುಲ್ಕ ರು.1680 ಸೇರಿ ಒಟ್ಟು ರು. 2184 ನಿಗದಿಪಡಿಸಲಾಗಿದೆ.