ಏಳು ರೈತರ ಆತ್ಮಹತ್ಯೆ

ಇಬ್ಬರು ಮಹಿಳೆಯರು ಸೇರಿದಂತೆ ರಾಜ್ಯದಲ್ಲಿ ಗುರುವಾರ ಒಟ್ಟು ಏಳು ರೈತರು ಆತ್ಮಹತ್ಯೆಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಇಬ್ಬರು ಮಹಿಳೆಯರು ಸೇರಿದಂತೆ ರಾಜ್ಯದಲ್ಲಿ ಗುರುವಾರ ಒಟ್ಟು ಏಳು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಡೂರು ತಾಲೂಕಿನ ಪಂಚನಹಳ್ಳಿ ಹೋಬಳಿಯ ಹೋಚಿಹಳ್ಳಿ ಗ್ರಾಮದ ಮುದಿಯಪ್ಪ (60) ನೇಣು ಬಿಗಿದುಕೊಂಡಿದ್ದಾರೆ. ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. 4 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಮಳೆ ಇಲ್ಲದೆ ಬೆಳೆಯೂ ನಾಶಗೊಂಡಿತ್ತು. ಇದೇ ತಾಲೂಕಿನ ಎಮ್ಮೇದೊಡ್ಡಿಯ ಲಕ್ಕೇನಹಳ್ಳಿ ತಾಂಡಾದ ನಾಗಾನಾಯ್ಕ (60) ಅವರೂ ಕೃಷಿ ಸಾಲ, ಬೆಳೆ ನಷ್ಟದ ಹಿನ್ನೆಲೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಅವರು 4.50 ಲಕ್ಷ ಸಾಲವಿತ್ತು. ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದ ಕೆ.ಆರ್.ಮಹೇಶ (32) 2.50 ಲಕ್ಷ ಸಾಲ ಮಾಡಿದ್ದರು. ಕೃಷಿಗಾಗಿ 2 ಕೊಳವೆಬಾವಿ ಕೊರೆಸಿದ್ದರು. ಆದರೆ, ನೀರು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡಿ
ದ್ದಾರೆ. ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಜಗದೀಶ ವಾಮಪ್ಪ ಇಟ್ಟಗಿ (35) ವಿಷ ಸೇವಿಸಿದ್ದಾರೆ. ಬೆಳೆ ಮಳೆ ಇಲ್ಲದೆ ಒಣಗಿತ್ತು. ಸಾಲಕ್ಕೆ ಹೆದರಿ ಈ ನಿರ್ಧಾರಕ್ಕೆ
ಬಂದಿದ್ದಾರೆ. ಸಿರುಗುಪ್ಪ ತಾಲೂಕಿನ ಬಿ.ಜಿ. ದಿನ್ನಿಯ ವೀರೇಶ ವೀರಪ್ಪ (45) ಕ್ರಿಮಿನಾಶ ಸೇವಿಸಿದ್ದಾರೆ. ಅವರು ಬೆಳೆದಿದ್ದ ಹತ್ತಿ ಬೆಳೆ ನಾಶವಾಗಿತ್ತು. ಮಗಳ ಮದುವೆಗೆ ಮಾಡಿದ್ದ ಸಾಲವೂ ಇನ್ನಿಲ್ಲದಂತೆ ಬಾಧಿಸುತ್ತಿತ್ತು. ಜತೆಗೆ, 45 ಲಕ್ಷ ರೂಪಾಯಿ ಸಾವಿರ ಕೃಷಿ ಸಾಲ
ಮಾಡಿದ್ದರು.

ಪ್ರಾಣ ಬಿಟ್ಟ ರೈತ ಮಹಿಳೆಯರು:
ಬಗರ್ ಹುಕುಂ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆ ಜೋಳವನ್ನು ಅರಣ್ಯ ಇಲಾಖೆ ಸಿಬ್ಬಂದಿ ನಾಶಪಡಿಸಿದ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಶಾಂತಮ್ಮ ಎಂಬುವವರು ವಿಷ ಕುಡಿದಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ಮೃತಪಟ್ಟಿದ್ದಾರೆ. ಹೊಸದುರ್ಗ ತಾಲೂಕಿನ ಶ್ರೀರಾಂಪುರದ ಶಿವಮ್ಮ (35) ಎಂಬುವರು ಕೃಷಿಗಾಗಿ ಮಾಡಿದ್ದ ಸಾಲಕ್ಕೆ ಹೆದರಿ ವಿಷ ಕುಡಿದು ಸಾವಿಗೀಡಾಗಿದ್ದಾರೆ.
ಶಿವಮ್ಮ 50 ಸಾವಿರ ರೂಪಾಯಿ ಬೆಳೆಸಾಲ ಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com