

ಬೆಂಗಳೂರು: ಪ್ರತಿ ಗ್ರಾಮದ ಯೋಜನೆ ರೂಪುರೇಷೆ ರಾಜ್ಯ, ಜಿಲ್ಲೆ ತಾಲೂಕು ಮಟ್ಟದ ಬದಲು ಗ್ರಾಮ ಮಟ್ಟದಲ್ಲೇ ಸಿದ್ಧವಾಗಬೇಕೆಂಬ ಉದ್ದೇಶದೊಂದಿಗೆ ಸರ್ಕಾರ ಕಾರ್ಯತಂತ್ರ ರೂಪಿಸಿದೆ. ಈ ಕುರಿತಾಗಿ ಮಂಗಳವಾರ ವಿಕಾಸ ಸೌಧದಲ್ಲಿ ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ವಿಜಯಾನಂದ್ ಅವರ ಮಾರ್ಗದರ್ಶನದಲ್ಲಿ ನಡೆದ ಸಭೆಯ ನಂತರ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್, ಅಕ್ಟೋಬರ್ 2ರೊಳಗೆ ಪ್ರತಿ ಗ್ರಾಮದ ಯೋಜನೆ ವರದಿ ಸಿದಟಛಿಪಡಿಸಲು ಗಡುವು ಹಾಕಿಕೊಳ್ಳಲಾಗಿದೆ ಎಂದರು. ಗ್ರಾಮೀಣ ಭಾಗದಿಂದಲೇ ಸರ್ಕಾರದಯೋಜನೆಗಳು ಅನುಷ್ಠಾನವಾಗಬೇಕು, ಆಗ ಮಾತ್ರ ತಳಮಟ್ಟದಿಂದ ಮೇಲ್ಬಾಗದ ವರೆಗೆ ಎಲ್ಲಾ ಜನರಿಗೆ ಯೋಜನೆಗಳ ಪ್ರತಿಫಲ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಕೇರಳದಲ್ಲಿ
ಇಂತಹ ಯೋಜನೆಯನ್ನು ಜಾರಿಗೊಳಿಸಿದೆ. ಅಲ್ಲಿ ಈ ಕೆಲಸ ಮಾಡಿದ್ದ ವಿಜಯಾನಂದ್
ಅವರೊಂದಿಗೆ ಸಾಕಷ್ಟು ವಿಚಾರ ವಿನಿಮಯ ಮಾಡಲಾಗಿದೆ ಎಂದರು.
ತಿಳಿದು ಮಾತನಾಡಲಿ: ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ನಡೆದ 550 ಕೋಟಿ ಹಣ ಬೇರೆ ಖಾತೆಗೆ ವರ್ಗಾವಣೆಯಾದ ಪ್ರಕರಣದಲ್ಲಿ ಎಚ್.ಡಿ. ಕುಮಾರ ಸ್ವಾಮಿಯವರು ಮಾಹಿತಿ ತಿಳಿಯದೇ ಏನೇನೋ ಮಾತನಾಡುತ್ತಿದ್ದಾರೆ. ಸರ್ಕಾರ ಯಾವುದೇ ಕ್ರಮಕೈ
ಗೊಂಡಿಲ್ಲ ಎಂದು ಅವರು ಹೇಳಿಕೆ ನೀಡಿರುವುದು ಸರಿಯಲ್ಲ, ಈ ಬಗ್ಗೆ ತನಿಖೆ
ನಡೆಯುತ್ತಿದ್ದು, 2ನೇ ಮಧ್ಯಂತರ ವರದಿ ಬರಬೇಕಿದೆ. ಇನ್ನೊಂದು ವಾರದಲ್ಲಿ ವರದಿ
ಕೈಸೇರುವ ನಿರೀಕ್ಷೆ ಇದೆ. ತಪ್ಪಿತಸ್ಥ ಅಧಿಕಾರಿಯ ವಿರುದಟಛಿ ಈಗಾಗಲೇ ಕ್ರಮಕೈ
ಗೊಂಡಿದ್ದು, ಹಣ ದುರುಪಯೋಗವಾಗದಂತೆಯೂ ಸರ್ಕಾರ ಎಚ್ಚರಿಕೆ ವಹಿಸಿದೆ.
ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಯಾವುದೇ ಕಾರಣಕ್ಕೂ ತೆಗೆಯದಂತೆ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಕುಮಾರಸ್ವಾಮಿ ಅವರುವಿಚಾರವನ್ನು ಇನ್ನಷ್ಟು ತಿಳಿದುಕೊಂಡು ಹೇಳಿಕೆ ನೀಡಬೇಕುಎಂದು ಪ್ರತಿಕ್ರಿಯಿಸಿದರು.
ಹೇಗೆ ನಡೆಯುತ್ತದೆ?
ಗ್ರಾಮಸಭೆ, ವಾರ್ಡ್ ಸಭೆಗಳ ಮೂಲಕ ಆ ಪ್ರದೇಶಕ್ಕೆ ಏನೆಲ್ಲಾ ಯೋಜನೆಗಳು ಅನುಷ್ಠಾನವಾಗಬೇಕೆಂದು ಚರ್ಚಿಸಿ ನಿರ್ಧರಿಸಲಾಗುತ್ತದೆ. ಈಕುರಿತು ಈಗಾಗಲೇ ಕಾರ್ಯಪಡೆ ರಚಿಸಲಾಗಿದೆ. ರಾಜ್ಯಮಟ್ಟ, ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿಸಭೆಗಳನ್ನು ನಡೆಸಲಾಗುತ್ತದೆ. ಅ.2ರೊಳಗಾಗಿಗ್ರಾಮೀಣ ಭಾಗದಲ್ಲಿ ಯೋಜನೆ ವರದಿ ಸಿದ್ಧ
ವಾಗುವಂತೆ ಕ್ರಮಕೈಗೊಳ್ಳಲು ಟಾಸ್ಕ್ ಫೋರ್ಸ್‍ಗೆತಿಳಿಸಲಾಗಿದೆ ಎಂದು ತಿಳಿಸಿದರು.