

ವಿಧಾನಪರಿಷತ್: ಡಿ.ಕೆ.ರವಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಬುಧವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು. ಆಹೋರಾತ್ರಿ ಧರಣಿ ಅಂಗವಾಗಿಸದನದಲ್ಲೇ ಮಲಗಿದ್ದ ಸದಸ್ಯರು ಮುಂಜಾನೆ ಶಾಸಕರ ಭವನದಲ್ಲಿ ಬೆಳಗಿನ ಉಪಹಾರ ಮತ್ತು ಇತ್ಯಾದಿ ಕಾರ್ಯ ಮುಗಿಸಿ ಮತ್ತೆ ಸದನಕ್ಕೆ ಬಂದು ಜಮಾಯಿಸಿದರು. ಆದರೆ ಬರುವಾಗ ಎಲ್ಲಾ ಸದಸ್ಯರು ತೋಳಿಗೆ ಕಪ್ಪು ಪಟ್ಟಿ ಕಟ್ಟಿ, ಕೈಯಲ್ಲಿ
ಬಿsತ್ತಿ ಪತ್ರ ಹಿಡಿದು ಬಂದಿದ್ದರು. ಎಂದಿನಂತೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸದನದಲ್ಲಿ ಕಲಾಪ ಆರಂಭಿಸಲು ಮುಂದಾಗುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ಸರ್ಕಾರದ ವಿರುದಟಛಿ ಘೋಷಣೆ ಕೂಗಲಾರಂಭಿಸಿದರು. ರವಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಭಿತ್ತಿಪತ್ರಗಳನ್ನೂ ಪ್ರದರ್ಶಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಆಗ ಸದನದಲ್ಲಿ ಭಿತ್ತಿಪತ್ರ ಪ್ರದರ್ಶಿಸಿದ್ದಕ್ಕೆ ಸಭಾಪತಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಪ್ರತಿ ಪಕ್ಷದವರು ಯಾವ ಮಾತಿಗೂ ಗಮನ ನೀಡದೆ ಕೇವಲ ಘೋಷಣೆಗಳಲ್ಲೇ ಮುಳುಗಿದರು. ಇದನ್ನು ವಿರೋಧಿಸಲು ಆಡಳಿತ ಪಕ್ಷದ ಸದಸ್ಯರು ಮುಂದಾದಾಗ ಸದನದಲ್ಲಿ ಭಾರೀ ಗದ್ದಲ ಉಂಟಾಯಿತು. ಏನಾಗುತ್ತಿದೆ ಎನ್ನುವುದೇ ತಿಳಿಯದಂತಾಯಿತು. ಆಗ ಸದನವನ್ನು ಕೆಲಕಾಲ ಮುಂದೂಡಲಾಯಿತು. ಮತ್ತೆ ಸದನ ಆರಂಭವಾದಾಗ ಸಭಾನಾಯಕ ಎಸ್.ಆರ್.ಪಾಟೀಲ್ ಸದನದಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯಬೇಕಿರುವುದರಿಂದ ಧರಣಿ ವಾಪಸ್ ಪಡೆಯಬೇಕೆಂದು ವಿನಂತಿಸಿ ದರು. ರಾಜ್ಯದ ರೈತರು, ಬಡವರ ಅನೇಕ
ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಬೇಕಿದೆ. ಆದ್ದರಿಂದ ಪ್ರತಿಭಟನೆಯಿಂದ ಕಾಲ ವ್ಯರ್ಥವಾಗುತ್ತದೆ. ಆದ್ದರಿಂದ ಧರಣಿಯನ್ನು ಹಿಂತೆಗೆದುಕೊಳ್ಳಬೇಕುಎಂದುಕೇಳಿಕೊಂಡರು. ಆಗಪ್ರತಿಪಕ್ಷಸದಸ್ಯರುಕೂಗಾಡಿದರು. ನಂತರ ಮತ್ತೆ ಹೇಳಿಕೆ ನೀಡಿದ ಎಸ್.ಆರ್.ಪಾಟೀಲ್, ಈಗಾಗಲೇ ಸಿಐಡಿ ಅಧಿಕಾರಿಗಳು ತನಿಖೆ ಆರಂಬಿsಸಿ ದ್ದಾರೆ. ಅವರಿಂದ ತನಿಖಾ ವರದಿ ಬರುವ ಮುನ್ನವೇ ಪೋಲೀಸರಿಂದ ನಡೆಯುತ್ತಿರುವ ತನಿಖೆಯ ಮಧ್ಯಂತರ ವರದಿ ಪಡೆದು ಸದನದಲ್ಲಿ ಮಂಡಿಸಲಾಗುತ್ತದೆ. ಈ ಬಗ್ಗೆ ಚರ್ಚಿಸೋಣ. ಅದರ ಬಗ್ಗೆ ಅತೃಪ್ತಿ ಇದ್ದರೆ ನಂತರ ಸಿಬಿಐ ತನಿಖೆಗೆ ಒಪ್ಪಿಸುವ ಬಗ್ಗೆ ಸರ್ಕಾರ ಚಿಂತಿಸುತ್ತದೆ ಎಂದರು. ಇದನ್ನು ಒಪ್ಪದ ಪ್ರತಿಪಕ್ಷ ನಾಯಕ ಈಶ್ವರಪ್ಪ, ಸರ್ಕಾರ ಹೇಳಿದ್ದನ್ನೇ ಹೇಳುತ್ತಿದೆ. ನಮಗೆ ಸಿಐಡಿ ಬಗ್ಗೆ ನಂಬಿಕೆ ಇಲ್ಲ. ಆದ್ದರಿಂದ ಸಿಬಿಐಗೆ ವಹಿಸಬೇಕೆಂದು ಪಟ್ಟು ಹಿಡಿದರು.