ವಾಟ್ಸಾಪ್ ನಲ್ಲಿ ಬಿ.ಕಾಂ ಪ್ರಶ್ನೆಪತ್ರಿಕೆ ಬಯಲು

ಇಂದು ನಡೆಯಬೇಕಿದ್ದ ಬಿಕಾಂ ಪ್ರಶ್ನೆ ಪತ್ರಿಕೆ ನಿನ್ನೆ ರಾತ್ರಿಯಿಂದ ವಾಟ್ಸಾಪ್ ನಲ್ಲಿ ಹರಿದಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇಂದು ನಡೆಯಬೇಕಿದ್ದ ಬಿಕಾಂ ಪ್ರಶ್ನೆ ಪತ್ರಿಕೆ ನಿನ್ನೆ ರಾತ್ರಿಯಿಂದ ವಾಟ್ಸಾಪ್ ನಲ್ಲಿ ಹರಿದಾಡಿದೆ.
ಪ್ರಶ್ನೆ ಪತ್ರಿಕೆ ಬಯಲಾದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ ಪದವಿಯ 6ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮೇ 11, 13 ಹಾಗೂ 15ಕ್ಕೆ ಮುಂದೂಡಲಾಗಿದೆ.
ನಿನ್ನೆ ತೆರಿಗೆ ಹಾಗೂ ಸಂಖ್ಯಾಶಾಸ್ತ್ರದ ಪ್ರಶ್ನೆಪತ್ರಿಕೆಗಳು ವಾಟ್ಸ್‌ಅಪ್‌ನಲ್ಲಿ  ಹರಿದಾಡಿದ್ದು, ಖಚಿತವಾದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ನಡೆಯಬೇಕಿದ್ದ ಪರೀಕ್ಷೆಗಳನ್ನು ವಿಶ್ವವಿದ್ಯಾಲಯ ಮುಂದೂಡಿದೆ.
ಮುಂದೂಡಿದ ಪರೀಕ್ಷೆಗಳನ್ನು ಮೇ 11, 13 ಹಾಗೂ 15ಕ್ಕೆ ನಡೆಸುವುದಾಗಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ತಿಮ್ಮೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.
ಮೇ 11 ರಂದು ಎಲೆಕ್ಟೀವ್ ಪೇಪರ್ -4, ಮೇ 13 ರಂದು ಮ್ಯಾನೇಜ್‌ಮೆಂಟ್ ಅಕೌಂಟ್, ಮೇ 15 ರಂದು ಪ್ರಿನ್ಸಿಪಲ್ ಆಫ್ ಆಡಿಟಿಂಗ್ ಪರೀಕ್ಷೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com