ಒತ್ತುವರಿ: ಸರ್ಕಾರಕ್ಕೆ ವರದಿ ಸಲ್ಲಿಕೆ

ಉದ್ಯಾನನಗರಿಯಲ್ಲಿ 20 ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಜೂನ್ 4ರವರೆಗೆ ತೆರೆ ಬಿದ್ದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಉದ್ಯಾನನಗರಿಯಲ್ಲಿ 20 ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಜೂನ್ 4ರವರೆಗೆ ತೆರೆ ಬಿದ್ದಿದೆ.

ಉಪಲೋಕಾಯುಕ್ತ ನ್ಯಾ.ಸಂಭಾಷ್ ಅಡಿ ಅವರ ಬುಲಾವಿನಂತೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದ ನಗರಾಭಿವೃದ್ದಿ ಇಲಾಖೆ, ಕಂದಾಯ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹಾಗೂ ಬೆಂಗಳೂರು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈ ಗೊಳ್ಳಲಾಗಿದೆ.

ಜಿಲ್ಲಾಧಿಕಾರಿಗಳ ವರದಿಯಲ್ಲಿರುವಂತೆ 20 ಕೆರೆಗಳಲ್ಲಿನ ಬಿಡಿಎ ಹಾಗೂ ಖಾಸಗಿ ಒತ್ತುವರಿ ತೆರವನ್ನು ಜೂನ್ 4ರವರೆಗೆ ನಿಲ್ಲಿಸಬೇಕು. ಏತನ್ಮಧ್ಯೆ, ಈಗಾಗಲೇ ತಿಳಿಸಿದಂತೆ ಕೆರೆ ಪ್ರದೇಶಗಳನ್ನು ಒತ್ತುವರಿ ಮಾಡಿರುವ ಬಿಡಿಎ ಭೂಮಿ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕು ಎಂದು ಉಪ ಲೋಕಾಯುಕ್ತರು ಸೂಚಿಸಿದ್ದಾರೆ.

ಈ ನಿರ್ಧಾರಿಂದ ಒತ್ತುವರಿದಾರರು ಜೂನ್ 4ರವರೆಗೆ ನಿರಾಳರಾಗಿರಬಹುದಾಗಿದೆ. ಉಪಲೋಕಾಯುಕ್ತ ಹಾಗೂ ನಗರ ಜಿಲ್ಲಾಧಿಕಾರಿಗಳ ಅಂದಾಜಿನಂತೆ ಒತ್ತುವರಿ ಜಾಗದಲ್ಲಿ ರು.15 ಸಾವಿರ ಕೋಟಿಗೂ ಅಧಿಕ ವೆಚ್ಚದ ಸರ್ಕಾರಿ ಕಟ್ಟಡ ಅಥವಾ ಮೂಲಸೌಕರ್ಯಗಳಿವೆ ಇಷ್ಟೊಂದು ದೊಡ್ಡ ಮೌಲ್ಯದ ಮೂಲ ಸೌಕರ್ಯವನ್ನು ಸರ್ಕಾರ ಕಳೆದುಕೊಳ್ಳಲು ತಯಾರಿದೆಯೇ? ಎನ್ನುವುದನ್ನು ಸ್ಪಷ್ಟಪಡಿಸಬೇಕು. ಇಲ್ಲವಾದರೆ ಸಚಿವ ಸಂಪುಟ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ನಿಯಮ ಯಾವುದಾದರೂ ಸರ್ಕಾರಿ ಹಾಗೂ ಖಾಸಗಿ ಮತ್ತು ಒತ್ತುವರಿದಾರರಿಗೆ ಅನ್ವಯವಾಗುತ್ತದೆ ಎಂದು ಉಪಲೋಕಾಯುಕ್ತರು ತಿಳಿಸಿದ್ದಾರೆ.

ಉಪಲೋಕಾಯುಕ್ತ ನ್ಯಾ.ಅಡಿ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಸತ್ಯಮೂರ್ತಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಬಿಡಿಎ ಆಯುಕ್ತ ಕೆ.ಶ್ಯಾಮ್ ಭಟ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರು ಲೋಕಾಯುಕ್ತ ಕಚೇರಿಗೆ ಬುಧವಾರ ಸಂಜೆ ಆಗಮಿಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ ಬಳಿಕ ವಿಚಾರವನ್ನು ಸಚಿವ ಸಂಪುಟದ ಮುಂದಿಡಲು ಹಿರಿಯ ಅಧಿಕಾರಿಗಲು ಒಪ್ಪಿಗೆ ನೀಡಿದ್ದಾರೆ.

ಒತ್ತುವರಿ ತೆರವು ಕಾರ್ಯಾಚರಣೆಯು ರಾಜ್ಯ ಸರ್ಕಾರದ ನಿರ್ಧಾರವಾದ್ದರಿಂದ, ಸರ್ಕಾರಿ ಭೂಮಿಯನ್ನು ತೆರವು ಕಾರ್ಯಾಚರಣೆಯಿಂದ ಕೈ ಬಿಡುವುದಾದರೂ ಸಚಿವ ಸಂಪುಟದ ಅನುಮತಿ ಅಗತ್ಯ ಎನ್ನುವುದು ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿತ್ತು. ಆದರೆ, ಅಲ್ಲಿಯವರೆಗೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗಬಾರದು ಹಾಗೂ ಎಲ್ಲರಿಗೂ ಒಂದೇ ನ್ಯಾಯ ಅನ್ವಯಿಸಬೇಕು ಎನ್ನುವ ಕಾರಣದಿಂದ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ಹಾಕಬೇಕು ಎಂದು ಅಧಿಕಾರಿಗಳಿಗೆ ಉಪಲೋಕಾಯುಕ್ತರು ಸೂಚಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com