ಹೈಕೋರ್ಟ್ ರಿಜಿಸ್ಟ್ರಾರ್‍ಗೆ ನೋಟಿಸ್

ರಾಜ್ಯ ಹೈಕೋರ್ಟ್ ರಿಟ್ ವಿಭಾಗದಲ್ಲಿ ದಾಖಲಾಗುವ ರಿಟ್ ಅರ್ಜಿಗಳ ಪರಿಶೀಲನೆಗೆ ಲಿಫ್ಟ್ ನಿರ್ವಾಹಕರು ಹಾಗೂ ಕಾನೂನು ಪದವಿ ಹಿನ್ನೆಲೆ ಹೊಂದಿರದ...
ಹೈಕೋರ್ಟ್
ಹೈಕೋರ್ಟ್
Updated on: 

ಬೆಂಗಳೂರು: ರಾಜ್ಯ ಹೈಕೋರ್ಟ್ ರಿಟ್ ವಿಭಾಗದಲ್ಲಿ ದಾಖಲಾಗುವ ರಿಟ್ ಅರ್ಜಿಗಳ ಪರಿಶೀಲನೆಗೆ ಲಿಫ್ಟ್  ನಿರ್ವಾಹಕರು ಹಾಗೂ ಕಾನೂನು ಪದವಿ ಹಿನ್ನೆಲೆ ಹೊಂದಿರದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್‍ನ ರಜಾಕಾಲದ ವಿಭಾಗೀಯ ಪೀಠ ಗುರುವಾರ ರಿಜಿಸ್ಟ್ರಾರ್‍ಗೆ ನೋಟಿಸ್ ಜಾರಿ
ಮಾಡಿದೆ. ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಚ್.ಬಿಳ್ಳಪ್ಪ ಮತ್ತು ನ್ಯಾ.ಬಿ.ವೀರಪ್ಪ ಅವರಿದ್ದ ರಜಾಕಾಲದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಹೈಕೋರ್ಟ್ ರಿಟ್ ವಿಭಾಗದಲ್ಲಿ ವಕೀಲರು ದಾಖಲಿಸುವ ರಿಟ್ ಅರ್ಜಿಗಳ ಪರಿಶೀಲನೆಗೆ ಲಿಫ್ಟ್  ನಿರ್ವಾಹಕರು, ಗುಮಾಸ್ತರು ಮತ್ತು ಕಾನೂನು ಪದವಿ ಹಿನ್ನೆಲೆಯ ಹೊಂದಿರದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಿಯಮಗಳ ಪ್ರಕಾರ ಈ ಕೆಲಸವನ್ನು ಕಾನೂನು ಪದವಿ ಹಿನ್ನೆಲೆಯುಳ್ಳ ಸಿಬ್ಬಂದಿ ಮಾಡಬೇಕಿದೆ. ಆದರೆ, ರಿಟ್ ಅರ್ಜಿ ಹಾಗೂ ಅದರ ಮಾನದಂಡಗಳ ಕುರಿತು ಪರಿಜ್ಞಾನವಿಲ್ಲದ ಲಿಫ್ಟ್  ನಿರ್ವಾಹಕರು, ಗುಮಾಸ್ತರು ಪರಿಶೀಲನೆ ನಡೆಸುತ್ತಾ, ಅರ್ಜಿಗಳ ಬಗ್ಗೆ ಅನಪೇಕ್ಷಿತ ಆಕ್ಷೇಪಣೆ ತೆಗೆಯುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಅರ್ಜಿಗಳ ಮಾನ್ಯತೆ ಬಗ್ಗೆ ನ್ಯಾಯಾಮೂರ್ತಿಗಳು ಕೇಳುವ ಪ್ರಶ್ನೆಯನ್ನು ಇವರು ವಕೀಲರನ್ನು ಪ್ರಶ್ನಿಸುತ್ತಾರೆ. ಸಿಬ್ಬಂದಿಯ ಈ ನಡಾವಳಿ ವಕೀಲರಿಗೆ ಮುಜುಗರ ಉಂಟು ಮಾಡುತ್ತಿದೆ. ಜತೆಗೆ, ಅನಪೇಕ್ಷಿತ ಆಕ್ಷೇಪಣೆ ತೆಗೆಯುವುದರಿಂದ ಅರ್ಜಿಗಳು ವಿಚಾರಣೆಗೆ ನಿಗದಿಯಾಗುವುದರಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ, ರಿಟ್ ವಿಭಾಗದಲ್ಲಿ ಕಾನೂನು ಪದವಿ ಹಿನ್ನೆಲೆ ಹೊಂದಿದ ಸಿಬ್ಬಂದಿಯನ್ನು ರಿಟ್ ಅರ್ಜಿಗಳ ಪರಿಶೀಲನೆಗೆ ನಿಯೋಜಿಸಲು ಮತ್ತು ಅಲ್ಲಿರುವ ಲಿಫ್ಟ್ನಿರ್ವಾಹಕರು ಹಾಗೂ ಗುಮಾಸ್ತರು ಬೇರೆಡೆಗೆ ಸ್ಥಳಾಂತರಿಸುವಂತೆ ರಿಜಿಸ್ಟ್ರಾರ್‍ಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com