

ಬೆಂಗಳೂರು: ಯಶವಂತಪುರ ಬಂಡಪ್ಪ ಗಾರ್ಡನ್ ನ ಶ್ರೇಯಸ್ ಬೇಕರಿ ಎದುರು ಮಟ್ಕಾ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರ 1ನೇ ಮುಖ್ಯರಸ್ತೆ ನಿವಾಸಿ ಹಸಾನ್ ಜಾವೀದ್, ಮುತ್ಯಾಲನಗರ ಸಂತೋಷ್ ಕುಮಾರ್, ಬಂಧಿತರು. ಆರೋಪಿಗಳಿಂದ 10.605 ರೂ ನಗದು, ಸೈಕಲ್ ವಶಕ್ಕೆ ಪಡೆದಿದ್ದಾರೆ, ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ರೂ.10ಕ್ಕೆ 70 ನೀಡುವುದಾಗಿ ಬಾಂಬೆ ಮಟ್ಕಾ ನಡೆಸುತ್ತಿದ್ದರು.