ಇತ್ತ ಅನುರಾಗ್ ಅವರನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಕೃಷ್ಣಗಿರಿ, ಹೊಸೂರು, ಆನೇಕಲ್ ಹೀಗೆ ಎರಡು ದಿನಗಳ ಕಾಲ ನಿರಂತರವಾಗಿ ಸುತ್ತಾಡಿಸಿದ್ದಾರೆ. ನಿರ್ಜನ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿ, ಅನುರಾಗ್ ಅವರಿಗೆ ತಿಂಡಿ ನೀಡುವುದು, ನಿಸರ್ಗ ಕರೆಗಳನ್ನು ಮಾಡಿಸುತ್ತಿದ್ದರು. ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಅನುರಾಗ್‍ಗೆ ಪಿಸ್ತೂಲ್ ಹಾಗೂ ಲಾಂಗ್‍ನಿಂದ ಬೆದರಿಸುತ್ತಿದ್ದರು.