ಇಲ್ಲಿನ ಎಂಸಿ ಲೇಔಟ್ ನಿವಾಸಿಯಾಗಿರುವ ದುರ್ಗಾರಾಂ ಹಾಗೂ ಮಿಸ್ತ್ರಿ ದೇವಿ ದಂಪತಿಯ ಪುತ್ರಿ ಮಂಜು, ಮಾಗಡಿ ರಸ್ತೆ ಎಎಸ್‍ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ದಂಪತಿ ಗಾಂಧಿ ನಗರದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದಾರೆ. ಗುರುವಾರ ಬೆಳಗ್ಗೆ ಅಂಗಡಿಗೆ ಹೋಗಿದ್ದ ಮಿಸ್ತ್ರಿ ದೇವಿ ಮಧ್ಯಾಹ್ನ 2.30ಕ್ಕೆ ಮನೆಗೆ ವಾಪಸಾಗಿದ್ದರು.