

ಮಂಗಳೂರು: ರಾಜ್ಯದ ಹಿರಿಯ ಸಚಿವರೊಬ್ಬರ ವಿರುದ್ಧ ಕೇಳಿ ಬಂದಿರುವ ಲಂಚ ಪ್ರಕರಣದ ಕುರಿತು ತನಿಖೆ ಆಗಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ
ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಲಂಚ ಪ್ರಕರಣದ ಬಗ್ಗೆ ಪ್ರಶ್ನೆ ಎದುರಾದಾಗ, ಈ ಬಗ್ಗೆ ತನಿಖೆ ನಡೆಯಲಿ ಎಂದು ಹೇಳಿದರು. ಬಳಿಕ ಅದನ್ನೇ ಎಳೆಯಾಗಿಟ್ಟುಕೊಂಟು ಬಿಜೆಪಿ ವಿರುದ್ಧ ಕಿಡಿಕಾರಿದರು. ಪ್ರಹ್ಲಾದ ಜೋಶಿ ತಮ್ಮ ಮೇಲೆ ಆರೋಪ ಬಂದಾಗ ರಾಜಿನಾಮೆ ಕೊಟ್ರೇ? ಎಂದು ಪ್ರಶ್ನಿಸಿದರು.
ಜಗದೀಶ್ ಶೆಟ್ಟರ್ ಮೇಲೆ ಆರೋಪ ಇರಲಿಲ್ಲವೇ? ಪ್ರಕರಣವನ್ನೇ ಅವರು ಮುಚ್ಚಿ ಹಾಕಲಿಲ್ಲವೇ? ಬಿಜೆಪಿಯವರೇ, ನಿಮ್ಮದೇ ಪಕ್ಷದ ವಸುಂಧರಾ ರಾಜೇ, ಸುಷ್ಮಾ ಸ್ವರಾಜ್ ಅವರ ವಿರುದ್ಧ ಆರೋಪ ಬಂದಾಗ ರಾಜಿನಾಮೆ ಕೊಟ್ರೇ? ಗುಜರಾತ್‍ನಲ್ಲಿ ಅತಿ ದೊಡ್ಡ ಕೊಲೆ ಆರೋಪ ಬಂತು. ಆಗ ನಿಮ್ಮದೇ ಪಕ್ಷದ ಉನ್ನತ ಮುಖಂಡರು ರಾಜಿನಾಮೆ ಕೊಟ್ರೇ? ನಿಮ್ಮಲ್ಲಿ ನೈತಿಕತೆ ಎಲ್ಲದೆ? ಮೊದಲು ನೀವು ಮಾದರಿಯಾಗಿ, ಮತ್ತೆ ಬೇರೆಯವರಿಗೆ ಹೇಳಿ ಎಂದು ಕಿವಿಮಾತು ಹೇಳಿದರು.