ಮಳೆ ನಡುವೆ ಹಳ್ಳಿಹಬ್ಬಕ್ಕೆ ತೆರೆ

ಕಬ್ಬನ್ಪಾರ್ಕ್‍ನ ಹಳ್ಳಿಹಬ್ಬ ಹಾಗೂ ಲಾಲ್ ಬಾಗ್‍ನ ರಾಷ್ಟ್ರೀಯ ಲ್ಯಾಂಡ್‍ಸ್ಕೇಪ್ ಹಬ್ಬಕ್ಕೆ ಭಾನುವಾರ ತೆರೆಬಿತ್ತು. ಹಳ್ಳಿಹಬ್ಬಕ್ಕೆ ಎರಡು ದಿನಗಳಲ್ಲಿ 70 ಸಾವಿರ ಮಂದಿ ಆಗಮಿಸಿದ್ದರೆ, ಲಾಲ್ಬಾಗ್‍ಗೆ ಐದು ದಿನಗಳ ಲ್ಯಾಂಡ್ ಸ್ಕೇಪ್ ಹಬ್ಬಕ್ಕೆ 35 ಸಾವಿರ ಮಂದಿ ಆಗಮಿಸಿದ್ದರು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಕಬ್ಬನ್ಪಾರ್ಕ್‍ನ ಹಳ್ಳಿಹಬ್ಬ ಹಾಗೂ ಲಾಲ್ ಬಾಗ್‍ನ ರಾಷ್ಟ್ರೀಯ ಲ್ಯಾಂಡ್‍ಸ್ಕೇಪ್ ಹಬ್ಬಕ್ಕೆ ಭಾನುವಾರ ತೆರೆಬಿತ್ತು. ಹಳ್ಳಿಹಬ್ಬಕ್ಕೆ ಎರಡು ದಿನಗಳಲ್ಲಿ 70 ಸಾವಿರ ಮಂದಿ ಆಗಮಿಸಿದ್ದರೆ, ಲಾಲ್ಬಾಗ್‍ಗೆ ಐದು ದಿನಗಳ ಲ್ಯಾಂಡ್ ಸ್ಕೇಪ್ ಹಬ್ಬಕ್ಕೆ 35 ಸಾವಿರ ಮಂದಿ ಆಗಮಿಸಿದ್ದರು.

ಕಬ್ಬನ್ಪಾರ್ಕ್ನ ಹಳ್ಳಿಹಬ್ಬಕ್ಕೆ ಬಂದಿದ್ದ ಸಾರ್ವಜನಿಕರಿಗೆ ಮಳೆಯಿಂದಾಗಿ ಹಬ್ಬ ವೀಕ್ಷಣೆಗೆ ದಿನಪೂರ್ತಿ ತೊಡಕಾಯಿತು. ಕೆಲವರು ಕೊಡೆಗಳನ್ನು ಹಿಡಿದು ಹಳ್ಳಿಹಬ್ಬ ಸಂಭ್ರಮಿಸಿದರು. ಹಳ್ಳಿ ಹಬ್ಬ ವೀಕ್ಷಣೆಗೆ ಶನಿವಾರ ಸುಮಾರು 45 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರೆ, ಭಾನುವಾರು ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ಮೂಲಕ ಬರೋಬ್ಬರಿ 70 ಸಾವಿರದಷ್ಟು ವೀಕ್ಷಕರು ಹಳ್ಳಿ ಊಟ, ಹಳ್ಳಿ ಆಟಗಳ ಸವಿಯುಂಡರು. ನಾನಾ ವೇದಿಕೆಗಳಡಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೈಮನ ತುಂಬಿಕೊಂಡರು.

ಭಾನುವಾರ ಕಬ್ಬನ್ಪಾರ್ಕ್ನ ಬಾಲಭವನದ ಬುರುಜು ಗೋಡೆ ಆವರಣದಲ್ಲಿ ರಾಜ್ಯದ ನಾನಾ ತಂಡಗಳ ಜತೆಗೆ ರಾಜಸ್ತಾನ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದಲೂ ನೃತ್ಯ ತಂಡಗಳು ಆಗಮಿಸಿ ಆಕರ್ಷಕ ನೃತ್ಯ ಪ್ರದರ್ಶಿಸಿದವು. ಕಥಕ್, ಭರತನಾಟ್ಯ, ಯಕ್ಷ ಗಾನ, ತಾಳವಾದ್ಯ, ಮೈಮï ಶೋ, ಜುಗಲ್ ಬಂದಿ, ಮೋಹಿನಿ ಅಟ್ಟಂ, ಕನ್ನಡದಲ್ಲಿ ಮಕ್ಕಳ ನಾಟಕ, ಟ್ಯಾಗೋರ್ ಕತೆಗಳು, ಕೊಳಲು ವಾದನ ಮತ್ತು ಡ್ರಮ್ಸ್ ಹೀಗೆ ಹಲವು ಸಾಂಸ್ಕೃ ತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.

ಬಿಎಸ್ಎಫ್ ಯೋಧರಿಂದ ಉದ್ಯಾನದ ಬ್ಯಾಂಡ್ಸ್ಟಾ ್ಯಂಡ್ ಬಳಿ ಬ್ಯಾಂಡ್ ವಾದನ ವಿಶೇಷವಾಗಿತ್ತು. ಮಹಾರಾ ಜರ ಪ್ರತಿಮೆ ಬಳಿ ಹೂವಿನ ಪ್ರತಿಕೃತಿಗಳು ನೋಡುಗರನ್ನು ಸೆಳೆದವು. ಉದ್ಯಾನಕ್ಕೆ ಆಗಮಿಸಿದ್ದ ಹಲವರು ಸೈಕಲ್ ಗಳನ್ನು ಉದ್ಯಾನವಿಡೀ ತುಳಿದು ಸಂಭ್ರಮಿಸಿದರು, ಆಟಗಳನ್ನು ಆಡಿದರು. ಸ್ತ್ರೀಶಕ್ತಿ ಸಂಘಗಳ ಮಳಿಗೆಗಳಲ್ಲಿ ಕರಕುಶಲ ವಸ್ತುಗಳ ಮಾರಾಟ ಭರ್ಜರಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com