ಸೆರಗು ಹಿಡಿದು ಮುಖ್ಯಮಂತ್ರಿ ಪದವಿ

ಭ್ರಷ್ಟಾಚಾರ ಮಾಡಿದ ಲೋಕಾಯಕ್ತ ಹಾಗೂ ಸಚಿವ ಆಂಜನೇಯ ಅವರಿಗೆ ರಕ್ಷಣೆ,ಕೋಮುಗಲಭೆ ಸೃಷ್ಟಿ, ರೈತರಿಗೆ ಅಸಹಕಾರ ಸೇರಿದಂತೆ...
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು
Updated on: 

ಬೆಂಗಳೂರು: ಭ್ರಷ್ಟಾಚಾರ ಮಾಡಿದ ಲೋಕಾಯಕ್ತ ಹಾಗೂ ಸಚಿವ ಆಂಜನೇಯ ಅವರಿಗೆ  ರಕ್ಷಣೆ, ಕೋಮುಗಲಭೆ ಸೃಷ್ಟಿ, ರೈತರಿಗೆ ಅಸಹಕಾರ ಸೇರಿದಂತೆ ಎಲ್ಲ ರೀತಿಯಲ್ಲೂ ರಾಜ್ಯ  ಸರ್ಕಾರ ವಿಫಲವಾಗಿದೆ ಎಂದು ದೂರಿ ಬಿಜೆಪಿ  ಮುಖಂಡರು ಪ್ರತಿಭಟನೆ ನಡೆಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ, ಸಂಸದ  .ಎಸ್. ಯಡಿಯೂರಪ್ಪ, ಶಾಸಕ ಆರ್. ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.  ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ  ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ  ಹಾಕಲು ಯತ್ನಿಸಿದರು. ಆದರೆ, ದಾರಿಯ ಮಧ್ಯೆ ಪ್ರತಿಭಟನಾಕಾರನ್ನು ತಡೆದ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಸೆರಗು ಹಿಡಿದ ಸಿಎಂ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಮಾತನಾಡಿ, ರಾಜ್ಯದಲ್ಲಿ ಸಿದ್ಧರಾಮಯ್ಯ  ಸೋನಿಯಾ ಗಾಂಧಿ ಅವರ  ಸೆರಗು ಹಿಡಿದು ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ,   ಜನರಿಂದ ಅಧಿಕಾರ ಪಡೆದ ನರೇಂದ್ರ ಮೋದಿ ಕೇಂದ್ರದಲ್ಲಿ ಹುಲಿಯಂತೆ ಆಡಳಿತ ನಡೆಸುತ್ತಿದ್ದು, ಜಗತ್ತಿನಾದ್ಯಂತ ಪ್ರವಾಸ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸಲಾಗಿದೆ. 800ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ಪರಿಹಾರ ಕೊಡುವಲ್ಲೂ ವಿಫಲವಾಗಿದೆ.

ಕೃಷಿ, ಕೈಗಾರಿಕೆ ಸೇರಿದಂತೆ ರಾಜ್ಯದ ಪ್ರಮುಖ ಉತ್ಪಾದನಾ ವಲಯಗಳು ತೀವ್ರ
ನಷ್ಟ ಅನುಭವಿಸುತ್ತಿವೆ. ಬಿಜೆಪಿಯನ್ನು ಮಣಿಸಲಾಗದ ಸರ್ಕಾರ ಕೋಮುವಾದದ ನೆಪದಲ್ಲಿ  ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ದೂರಿದರು.

ಲೈಂಗಿಕ ದೌರ್ಜನ್ಯ ಹೆಚ್ಚಳ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಸಿದ್ದರಾಮಯ್ಯ ಸಂಪುಟದಲ್ಲಿರುವ ಮಂತ್ರಿ ಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಮಾತ್ರ ರಾಜಿನಾಮೆ ಪಡೆಯಲು ಮುಂದಾಗದೇ ಮೌನವಾಗಿದ್ದಾರೆ. ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡಿದ್ದು, ಇದನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, 1,060  ಅತ್ಯಾಚಾರ, 4,020 ಲೈಂಗಿಕ ದೌರ್ಜನ್ಯ ಪ್ರಕರಣಗಳು ಈ ಸಾಲಿನಲ್ಲಿ ದಾಖಲಾಗಿವೆ. ನಗರವೊಂದರಲ್ಲೇ 94 ಅತ್ಯಾಚಾರ, 854 ಲೈಂಗಿಕ ದೌರ್ಜನ್ಯ ನಡೆದಿವೆ. ಆದರೆ, ಗೃಹ ಸಚಿವ ಡಾ. ಜಿ.ಪರಮೇಶ್ವರ್ ಯಾವುದೇ ಕ್ರಮ ಕೈಗೊಂಡಿಲ್ಲ.ಕಾನೂನು ರಕ್ಷಿಸುವುದು ರಾಜ್ಯ  ಸರ್ಕಾರದ ಕರ್ತವ್ಯ. ಆದರೆ, ಎಲ್ಲಕ್ಕೂ ಕೇಂದ್ರ ಸರ್ಕಾರವನ್ನೇ ದೂಷಿಸಲಾಗುತ್ತಿದೆ.ಪೊಲೀಸರನ್ನು  ಬಳಸಿಕೊಳ್ಳುತ್ತಿರುವ ಸರ್ಕಾರ ಬಿಜೆಪಿ ಪರವಾದವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುತ್ತಿದೆ.  ಪೊಲೀಸ್  ಅಧಿಕಾರಿಗಳೂ ಸರ್ಕಾರ ಹೇಳಿದಂತೆ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಲೋಕಾಯುಕ್ತರು  ಭಷ್ಟರು ಎಂದು ತಿಳಿದಿದ್ದರಿಂದಲೇ ಬಿಜೆಪಿ-ಜೆಡಿಎಸ್ ಸದಸ್ಯರು ಸಹಿ ಮಾಡಿ ಸ್ಪೀಕರ್‍ಗೆ ಮನವಿ ಸಲ್ಲಿಸಿದ್ದಾರೆ. ಆದರೀಗ ಕಾಂಗ್ರೆಸ್ ಸದಸ್ಯರು ಲೋಕಾಯುಕ್ತರನ್ನು ರಕ್ಷಿಸಲು ಉಪಲೋಕಾಯುಕ್ತರ ವಿರುದ್ಧ ಸಹಿ ಸಂಗ್ರಹಿಸುತ್ತಿದೆ ಎಂದರು. ಶಾಸಕ ಆರ್. ಅಶೋಕ ಸಂಸದೆ  ಭಾ ಕರಂದ್ಲಾಜೆ, ಶಾಸಕ ಜಗದೀಶ ಕುಮಾರ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com