ಡಾ. ಕಲಬುರ್ಗಿ ಅವರ ವಿಚಾರ, ಧೋರಣೆಗಳನ್ನೇ ವಿರೋಧಿಸುವ ಕೆಲವರು ಈ ರೀತಿ ಆಕ್ರೋಶ ಹೊರಹಾಕಿದ್ದಾರೆ. ಶಾಂತ ಸರೋವರದಲ್ಲಿ ಕಲ್ಲೆಸೆದಂತಾಗಿದೆ. ಈ ಹತ್ಯೆ ಇಡೀ ಮಾನವೀಯತೆ ಅಣಕಿಸುವಂತೆ ಮಾಡಿದೆ. ಸತ್ಯವನ್ನು ಧೈರ್ಯವಾಗಿ ಹೇಳುವುದೇ ತಪ್ಪೇನೋ ಎನ್ನುವಂತಾಗಿದೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು. ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಮಾತನಾಡಿ, ಡಾ. ಕಲಬುರ್ಗಿಯವರ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಎಲ್ಲ ಪ್ರಗತಿಪರ ಸಂಘಟನೆ, ನಾನಾ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಕಣ್ಣು ತೆರೆಸಿದ್ದಾರೆ.